• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುದುಚೇರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ "BEST" ಐಡಿಯಾ!

|
Google Oneindia Kannada News

ಪುದುಚೇರಿ, ಫೆಬ್ರವರಿ.25: ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಭಾರತೀಯ ಜನತಾ ಪಕ್ಷದ ಪ್ರಣಾಳಿಕೆ ಏನು ಎಂದು ಕೇಳುವುದಾದರೆ ಅದು ಪುದುಚೇರಿಯನ್ನು 'BEST' ಮಾಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. BEST ಎಂಬ ಪದಕ್ಕೆ ಪ್ರಧಾನಿ ಮೋದಿ ತಮ್ಮದೇ ವಿಶೇಷ ಅರ್ಥವನ್ನು ನೀಡಿದ್ದಾರೆ.

ಪುದುಚೇರಿಯಲ್ಲಿ ಬಿಜೆಪಿಯ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ ಎಂದರು. ಈ ಕೇಂದ್ರಾಡಳಿತ ಪ್ರವೇಶವನ್ನು ಎನ್ ಡಿಎ ಸರ್ಕಾರವು ಬೆಸ್ಟ್(BEST) ಆಗಿಸಲು ಬಯಸುತ್ತಿದೆ ಎಂದರು.

ಪುದುಚೆರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಸಂಪುಟ ಅನುಮೋದನೆಪುದುಚೆರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಸಂಪುಟ ಅನುಮೋದನೆ

ನಮ್ಮ ಪ್ರಕಾರ BEST ವ್ಯಾಖ್ಯಾನವು ಹೀಗಿದೆ. 'ಬಿ' ಎಂದರೆ ಬಿಸಿನೆಸ್(ವ್ಯಾಪಾರ)ಹಬ್, 'ಇ' ಎಂದರೆ ಎಜ್ಯುಕೇಶನ್(ಶಿಕ್ಷಣ)ಹಬ್, 'ಎಸ್ ಎಂದರೆ ಸ್ಪಿರಿಟ್ಯೂಯಲ್'(ಆಧ್ಯಾತ್ಮಿಕ)ಹಬ್ ಮತ್ತು 'ಟಿ' ಎಂದರೆ ಟೂರಿಸಂ(ಪ್ರವಾಸೋದ್ಯಮ) ಹಬ್ ಅನ್ನಾಗಿ ಪರಿವರ್ತಿಸುವುದೇ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪುದುಚೇರಿಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಕಿಡಿ:

ದೇಶಾದ್ಯಂತ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕರಿಸುತ್ತಿದ್ದಾರೆ. ಸಂಸತ್ ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಊಳಿಗಮಾನ್ಯ ಪದ್ಧತಿಯ ಕಾಂಗ್ರೆಸ್ ರಾಜಕಾರಣ, ರಜವಂಶದ ರಾಜಕೀಯ ಮತ್ತು ಪೋಷಣೆಯ ರಾಜಕಾರಣವು ಅಂತ್ಯವಾಗುತ್ತಿದೆ. ಭಾರತ ಯುವ ಮತ್ತು ಮಹತ್ವಾಕಾಂಕ್ಷೆಯ ಭವಿಷ್ಯವನ್ನು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ.

"ಸಹಕಾರ ಸಂಸ್ಥೆ ನಿರ್ವಹಣೆಯಲ್ಲಿ ಕಾಂಗ್ರೆಸ್ ಸೋಲು"

ಹೈಕಮಾಂಡ್ ನಲ್ಲಿರುವ ಕಾಂಗ್ರೆಸ್ ಸರ್ಕಾರವು ಸಹಕಾರ ಸಂಸ್ಥೆಗಳ ನಿರ್ವಹಣೆಯಲ್ಲಿ ಸೋತಿದೆ. ನಾನು ಗುಜರಾತ್ ನಿಂದ ಬಂದಿದ್ದೇನೆ. ಅಲ್ಲಿ ನಡೆದ ಸಹಕಾರಿ ಆಂದೋಲನವು ಅನೇಕರ ಜೀವನವನ್ನೇ ಪರಿವರ್ತಿಸಿದೆ. ಪುದುಚೇರಿಯಲ್ಲೂ ಕೂಡಾ ಅದೇ ರೀತಿ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎನ್ ಡಿಎ ಸರ್ಕಾರವು ಕಾರ್ಯ ನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

English summary
NDA wants to make Puducherry the BEST. PM Narendra Modi Gave Special Defination To BEST Word.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X