ಕೇಂದ್ರ ಬಜೆಟ್ ಮಂಡನೆ ವಿವರ, ಮುಖ್ಯಾಂಶ

Posted By:
Subscribe to Oneindia Kannada

ನವದೆಹಲಿ, ಫೆ. 29: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2016-17ನೇ ಸಾಲಿನ ಪ್ರಧಾನ ಆಯವ್ಯಯ ಪತ್ರವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ (ಫೆಬ್ರವರಿ 29) ಸಂಸತ್ತಿನಲ್ಲಿ ಮಂಡಿಸಿದ್ದಾರೆ.

Union Budget 2016-17

ಬಜೆಟ್ ಮಂಡನೆ ವಿವರ, ಮುಖ್ಯಾಂಶಗಳು ಅಪ್ಡೇಟ್ ಈ ಪುಟದಲ್ಲಿದೆ:

12.50: ಆದಾಯ ತೆರಿಗೆ ಇಲಾಖೆಯಿಂದ ಇ -ಸಹಯೋಗ ಜಾರಿ, ಇದರಿಂದ ಸಣ್ಣ ತೆರಿಗೆದಾರರಿಗೆ ಅನುಕೂಲ.

12.45: ಏರಿಕೆ : [ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
* ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಶೇ 10 ರಿಂದ 15ರಷ್ಟು ಏರಿಕೆ
* ಐಷಾರಾಮಿ ಸರಕು ಹಾಗೂ ಕಾರಿನ ಮೇಲೆ ಶೇ1ರಷ್ಟು ತೆರಿಗೆ. [ಈ ಆರ್ಥಿಕ ವರ್ಷ ನಾವು ಎಷ್ಟು ಆದಾಯ ತೆರಿಗೆ ಕಟ್ಟಬೇಕಾಗುತ್ತೆ?]

12.40: ಕೃಷಿ ಕಲ್ಯಾಣ್ ಸೆಸ್ ಶೇ0.5ರಷ್ಟು ಎಲ್ಲಾ ತೆರಿಗೆಗಳಿಗೆ ಅನ್ವಯ.
* ಕ್ಲೀನ್ ಎನರ್ಜಿ ಸೆಸ್ ದರ 400 ಪ್ರತಿ ಟನ್ ಗೆ ಏರಿಕೆ
* ನಿರಮಾಯಿ ಸ್ವಾಸ್ಥ ವಿಮಾ ಯೋಜನೆಯಿಂದ ಸೇವಾ ತೆರಿಗೆ ಮುಕ್ತ.
* 60 ಚದರ ಮೀಟರ್ ತನಕದ ಮನೆ ನಿರ್ಮಾಣದ ಮೇಲೆ ಸೇವಾ ತೆರಿಗೆ ವಿನಾಯಿತಿ.
* ಇಪಿಎಫ್ ಒ ನೀಡುವ ಸೇವೆಗಳಿಗೆ ಸೇವಾತೆರಿಗೆ ಅನ್ವಯವಾಗುವುದಿಲ್ಲ.

[ತೆರಿಗೆ ಉಳಿಸಲು HDFC ULIPನಲ್ಲಿ ಹೂಡಿಕೆ ಮಾಡಿ]

12.30: ಸ್ಟಾರ್ಟ್ ಅಪ್ ಗಳಿಗೆ ವರದಾನ: ಮೊದಲ ಮೂರು ವರ್ಷಗಳ ಕಾಲ ತೆರಿಗೆ ಕಟ್ಟಬೇಕಾಗಿಲ್ಲ.

12.21: 50 ಲಕ್ಷ ರು ಮೌಲ್ಯದ ಮನೆ ಖರೀದಿಸಿದರೆ 50 ಸಾವಿರ ರು ತನಕ ವಿನಾಯಿತಿ.

12.20: ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. [ಫನ್ನಿ ಟ್ವೀಟ್ಸ್ : ಬೀಡಿ ಸೇದೋಣ, ಗುಂಡು ಹಾಕೋಣ]
* 2.5 ಲಕ್ಷ ರು ತನಕ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ.
* 2.5 ಲಕ್ಷ ರು ದಿಂದ 5 ಲಕ್ಷ ರು ತನಕ ಶೇ 10
* 5 ಲಕ್ಷ ರು ತನಕ ಆದಾಯವಿದ್ದರೆ ಶೇ 20ರಷ್ಟು ತೆರಿಗೆ
12.15: 5 ಲಕ್ಷ ಆದಾಯ ಇರುವವರಿಗೆ ಇನ್ನು ಅನುಕೂಲ


12.10: ತೆರಿಗೆ: ಗೃಹಭತ್ಯೆ ವಿನಾಯಿತಿ(HRA) ಮಿತಿ (88ಜಿ) 24 ಸಾವಿರ ರು ನಿಂದ 60 ಸಾವಿರ ರು.
* ಬಾಡಿಗೆ ಮನೆಯಲ್ಲಿರುವ ಸಣ್ಣ ತೆರಿಗೆದಾರರಿಗೆ ರಿಲೀಫ್
* 5 ಲಕ್ಷ ರು ಗೂ ಕಡಿಮೆ ಆದಾಯ ಮಿತಿ ಉಳ್ಳವರಿಗೆ ಮಾತ್ರ
* 2 ಕೋಟಿ ಗೂ ಅಧಿಕ ಉದ್ಯೋಗಿಗಳಿಗೆ ಇದರಿಂದ ಅನುಕೂಲ

12.05: ವಿಮೆ, ಪಿಂಚಣಿ, ಷೇರುಪೇಟೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಎಫ್ ಡಿಐ ನಿಯಮ ಬದಲಾವಣೆಗೆ ಒತ್ತು.

* ಅಂಚೆ ಕಚೇರಿಗಳಲ್ಲಿ ಮೈಕ್ರೋ ಎಟಿಎಂ ಸ್ಥಾಪನೆ.
* ದೀನ್ ದಯಾಳ್ ಉಪಾಧ್ಯಯ್ ಹಾಗೂ ಗುರು ಗೋವಿಂದ್ ಸಿಂಗ್ ಜೀ ಅವರ ಜನ್ಮವಾರ್ಷಿಕೋತ್ಸವ ಆಚರಣೆಗೆ 100 ಕೋಟಿ ರು ಅನುದಾನ.
12.03: ಪ್ರಧಾನ್ ಮಂತ್ರಿ ಮುದ್ರಾ ಯೋಜನೆಗೆ ಅನುದಾನ 1,80,000 ಕೋಟಿ ರು ಏರಿಕೆ.

12.00: ಬ್ಯಾಂಕುಗಳಿಗೆ ರಿಲೀಫ್


11.55: ವಾರದ ಎಲ್ಲಾ ದಿನಗಳಲ್ಲಿ ಶಾಪಿಂಗ್ ಮಾಲ್ ಓಪನ್ ಆಗಿರುವಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ವಿಧೇಯಕ ಮಂಡನೆ ಮಾಡಿ ರಾಜ್ಯಗಳಿಗೆ ನಿರ್ದೇಶನ ನೀಡಲಾಗುವುದು.

11.50: ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಶೇ 100ರಷ್ಟು ಎಫ್ ಡಿಐ ಹೂಡಿಕೆಗೆ ಅವಕಾಶ.
11.48: ಅಣುಶಕ್ತಿ ಬಳಸಿ ವಿದ್ಯುತ್ ಉತ್ಪಾದನೆಗಾಗಿ 3,000 ಕೋಟಿ ರು.


11.46: ಇಂಧನ, ಪರ್ಯಾಯ ಇಂಧನ ಕ್ಷೇತ್ರ

11.45: ನಾಗರಿಕ ವಿಮಾನ ಯಾನ ಕ್ಷೇತ್ರದಲ್ಲಿ 160ಕ್ಕೂ ಅಧಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿ.
* ಮೂಲ ಸೌಕರ್ಯ ಅಭಿವೃದ್ಧಿ ಕ್ಷೇತ್ರಕ್ಕೆ 2,21,246 ಕೋಟಿ ರು ಅನುದಾನ.

11.40: ರಸ್ತೆ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ 55 ಸಾವಿರ ಕೋಟಿ ರು
* ಗ್ರಾಮ್ ಸಡಕ್ ಯೋಜನೆ ಸೇರಿ 97,000 ಕೋಟಿ ರು
* ರೈಲ್ವೆ ಯೋಜನೆ ಗಾತ್ರವೂ ಸೇರಿ 2 ಲಕ್ಷ 80 ಸಾವಿರ ರು
* 50,000 ಕಿ,ಮೀ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಾಟು ಮಾಡಲಾಗುವುದು.
11.38: ಮೊದಲ 3 ವರ್ಷಗಳಿಗೆ ಉದ್ಯೋಗಿಗಳಿಗೆ ಸರ್ಕಾರದಿಂದ ಇಪಿಎಫ್ ರೂಪದಲ್ಲಿ ಶೇ 8.33ರಷ್ಟು ಸಿಗಲಿದೆ.
* ಇಪಿಎಫ್ ನಿಧಿ ಸ್ಥಾಪನೆಗೆ 1,000 ಕೋಟಿ ರು ಅನುದಾನ.

11.36: ಸ್ಟಾಂಡ್ ಅಪ್ ಇಂಡಿಯಾ ಯೋಜನೆಗೆ 500 ಕೋಟಿ ರು
* 62 ಹೊಸ ನವೋದಯ ವಿಶ್ವವಿದ್ಯಾಲಯ ಸ್ಥಾಪನೆ.

11.35: ಹೆಚ್ಚುವರಿ ಎಲ್ ಪಿಜಿ ಕೈಬಿಟ್ಟಿರುವ 75 ಲಕ್ಷ ಮಧ್ಯಮ ವರ್ಗದ ಜನರಿಗೆ ಅಭಿನಂದನೆ.
11.34: ಪಶು ಸಂಗೋಪನೆ, ಹೊಸ ತಳಿ ಅಭಿವೃದ್ಧಿಗಾಗಿ 850 ಕೋಟಿ ರು ಅನುದಾನ.


11.33:
ಎಸ್ ಸಿ ಎಸ್ಟಿ ಸಮುದಾಯದವರಿಗೆ ಉದ್ಯಮಿಗಳಾಗಲು 5,000 ಕೋಟಿ ರು ಪ್ರೋತ್ಸಾಹ ಧನ.
*
2 ಲಕ್ಷ ಉದ್ಯಮಿಗಳನ್ನು ಸೃಷ್ಟಿ ನಿರೀಕ್ಷೆ. ಅಂಬೇಡ್ಕರ್ ಅವರ ಜನ್ಮ ದಿನೋತ್ಸವದ ಅಂಗವಾಗಿ ಯೋಜನೆ ಜಾರಿ.

11.32: ಪ್ರಧಾನ್ ಮಂತ್ರಿ ಜನೌಷಧಿ ಯೋಜನೆ ಮೂಲಕ ಕಡಿಮೆ ಬೆಲೆಯಲ್ಲಿ ಜೀವರಕ್ಷಕ ಔಷಧಿ ನೀಡಲಾಗುವುದು.

11.30: ಬಿಪಿಎಲ್ ಕುಟುಂಬಗಳಿಗೆ ಎಲ್ ಪಿಜಿ ಪೂರೈಕೆಗಾಗಿ ಹೆಚ್ಚಿನ ಅನುದಾನ
* ಮೇ 1, 2008ರೊಳಗೆ ಶೇ100ರಷ್ತು ವಿದ್ಯುತ್ತೀಕರಣ ಸಾಧಿಸಲಾಗುವುದು.
11.28: ಗ್ರಾಮೀಣಾಭಿವೃದ್ಧಿಗಾಗಿ 87,765 ಕೋಟಿ ರು ನೀಡಿಕೆ.

11.27: ಡಿಜಿಟಲ್ ಸಾಕ್ಷರತಾ ಮಿಷನ್ ಮೂಲಕ 6 ಕೋಟಿ ಗ್ರಾಮಗಳಿಗೆ ತಂತ್ರಜ್ಞಾನ ತಲುಪಿಸಲಾಗುವುದು
11.25: ಪರಂಪರಾಗತ್ ಕೃಷಿ ವಿಕಾಸ್ ಯೋಜನಾ ಜಾರಿ.
* ಕೃಷಿ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಆಹ್ವಾನ.
* ಎಂ ನರೇಗಾ ಯೋಜನೆ ಜಾರಿಗೆ 38,500 ಕೋಟಿ ರು ಅನುದಾನ.
* ಸ್ವಚ್ಛ ಭಾರತ ಯೋಜನೆಗೆ 9,000 ಕೋಟಿ ರು.

Jaitley

11.22: ಗ್ರಾಮ್ ಸಡಕ್ ಯೋಜನೆಗೆ 19 ಸಾವಿರ ಕೋಟಿ ರು ಅನುದಾನ
* ಮಣ್ಣು ಆರೋಗ್ಯ ಪತ್ತೆಗಾಗಿ 367 ಕೋಟಿ ರು.
11.20: ಬೆಳೆ ವಿಮೆ -ಪ್ರಧಾನ್ ಮಂತ್ರಿ ಫಸಲ್ ವಿಮಾ ಯೋಜನೆ ಸೇರಿ ಕೃಷಿ ಕ್ಷೇತ್ರಕ್ಕೆ 35,984 ಕೋಟಿ ರು ಅನುದಾನ

11.18: ರೈತರ ಬಿಪಿಎಲ್ ಕುಟುಂಬಗಳಿಗೆ ಆರೋಗ್ಯ ವಿಮಾ ಯೋಜನೆ, ಎಲ್ ಪಿಜಿ ಪೂರೈಕೆ.

11.16: ಉತ್ಪನ್ನಗಳ ಕ್ಷಮತೆಗಾಗಿ ಕ್ರಮ. ಇ ಮಾರುಕಟ್ಟೆಗಳ ಸ್ಥಾಪನೆ. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಸೂಚನೆ
* ಬಾಬಾ ಅಂಬೇಡ್ಕರ್ ಅವರ ಜನ್ಮದಿನದಂದು ಇ ಮಾರುಕಟ್ಟೆಗಳ ಲೋಕಾರ್ಪಣೆ.

11.12: ಕೃಷಿ, ರೈತರ ಪ್ರಗತಿ:
* ರೈತರ ಆದಾಯ ಇನ್ನು 5 ವರ್ಷಗಳಲ್ಲಿ ದ್ವಿಗುಣಗೊಳಿಸಲು ಕ್ರಮ.
* ರೈತರಿಗೆ ನೇರ ಮಾರುಕಟ್ಟೆ ಸಂಪರ್ಕ
* ಪ್ರಧಾನ್ ಮಂತ್ರಿ ಕೃಷಿ ಯೋಜನೆ ಅಡಿಯಲ್ಲಿ 28 ಲಕ್ಷ ಹೆಕ್ಟೇರುಗಳನ್ನು ನೀರಾವರಿ ಯೋಜನೆಗೆ ಅಳವಡಿಸಲಾಗುವುದು


11.11: 9 ಅಂಶಗಳ ಪ್ರಗತಿ ಯೋಜನೆ ಘೋಷಣೆ. ರೈತ, ಗ್ರಾಮೀಣ, ಮೂಲಸೌಕರ್ಯ, ಆಡಳಿತ, ವಿತ್ತೀಯ ಕೊರತೆ, ತೆರಿಗೆ ಆದಾಯ ಮಿತಿ

11.08: ಗ್ರಾಹಕ ಪ್ರಗತಿ ಸೂಚ್ಯಂಕ (ಸಿಪಿಐ) ಶೇ 5.4ರಷ್ಟು ಮಟ್ಟದಲ್ಲೇ ಇದೆ ಹೀಗಾಗಿ, ನಮ್ಮದು ಗ್ರಾಹಕ ಸ್ನೇಹಿ ಸರ್ಕಾರ ಎನಿಸಿದೆ.
11.07:
ಪ್ರಧಾನ್ ಮಂತ್ರಿ ಫಸಲು ವಿಮಾ ಯೋಜನೆ ಮೂಲಕ ರೈತರಿಗೆ ಬೆಳೆಹಾನಿಯಿಂದ ಉಂಟಾದ ನಷ್ಟ ತುಂಬಲಾಗುತ್ತಿದೆ.
11.06: ದೇಶದ ಜಿಡಿಪಿ ಶೇ7.6ಕ್ಕೇರಬೇಕಿದೆ. ಜಾಗತಿಕವಾಗಿ ಆರ್ಥಿಕ ವ್ಯವಸ್ಥೆ ಕುಸಿದೆ.

11.05: ಲೋಕಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದ ಕೇಂದ್ರ ಬಜೆಟ್ 2016-17 ಮಂಡನೆ. ಜೇಟ್ಲಿ ಅವರಿಂದ ಮೂರನೇ ಬಾರಿಗೆ ಬಜೆಟ್ ಮಂಡನೆ.

11.00: ಅರುಣ್ ಜೇಟ್ಲಿ ಭಾಷಣ ಆರಂಭಕ್ಕೆ ಅಡ್ಡಿಪಡಿಸಿದ ವಿಪಕ್ಷಗಳು. ಜೇಟ್ಲಿ ಬೆಂಬಲಕ್ಕೆ ನಿಂತ ಎಂ ವೆಂಕಯ್ಯ ನಾಯ್ಡು

10.55: ಬಜೆಟ್ ಭಾಷಣಕ್ಕೂ ಮುನ್ನ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಷೇರುಗಳು ಏರಿಕೆ.

* ಎಸ್ ಬಿಐ ಶೇ5, ಪಿಎನ್ ಬಿ, ಬ್ಯಾಂಕ್ ಆಫ್ ಬರೋಡಾ, ಆಂಧ್ರ ಬ್ಯಾಂಕ್ ತಲಾ ಶೇ 3ರಷ್ಟು ಏರಿಕೆ.

10.45: 1947 ರಿಂದ 2016 ಬಜೆಟ್

10.02: ಸಂಸತ್ತಿನಲ್ಲಿ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಭೆ ಆರಂಭ.

9.50: ವಿತ್ತ ಸಚಿವ ಅರುಣ್ ಜೇಟ್ಲಿ, ರಾಜ್ಯ ಸಚಿವ್ ಜಯಂತ್ ಸಿನ್ಹಾ ಅವರು ಸಂಸತ್ತಿಗೆ ಆಗಮನ.

Arun Jaitley

ರಾಜ್ಯ ಸಚಿವ ಜಯಂತ್ ಸಿನ್ಹಾ, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣ್ಯಯನ್, ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅವರನ್ನೊಳಗೊಂಡ ಜೇಟ್ಲಿ ನೇತೃತ್ವದ ತಂಡ 2016ನೇ ಸಾಲಿನ ಬಜೆಟ್ ಸಿದ್ಧಪಡಿಸಿದೆ.[ಅರುಣ್ ಜೇಟ್ಲಿ ಬಜೆಟ್ 2016: ತೆರಿಗೆದಾರರ ನಿರೀಕ್ಷೆಗಳೇನು?]

ಸುಕನ್ಯಾ ಸಮೃದ್ಧಿ ಯೋಜನೆ, ಗಂಗಾ ಸ್ವಚ್ಛತಾ ಯೋಜನೆ, ಪಿಂಚಣಿ ಫಂಡ್ ಗೆ ನೀಡುವ ಮೊತ್ತ ಕೂಡಾ 80ಸಿ ಅಡಿಗೆ ಬರುವಂತೆ ಮಾಡಲಾಗಿತ್ತು. ಈ ಬಾರಿ ಈ ಪಟ್ಟಿಗೆ ಇನ್ನಷ್ಟು ಯೋಜನೆಗಳನ್ನು ಸೇರಿಸುವ ನಿರೀಕ್ಷೆಗಳಿವೆ.


ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ಇರುವುದರಿಂದ ಜನೋಪಯೋಗಿ ಯೋಜನೆಗಳಿಗೆ ಅನುದಾನ ಒದಗಿಸಲು ರಕ್ಷಣೆ, ಮೂಲಭೂತ ಸೌಲಭ್ಯ ಕ್ಷೇತ್ರಗಳಿಗೆ ನೀಡುತ್ತಿರುವ ಅನುದಾನ ಕಡಿತ ಮಾಡಬಹುದು.

ಜನರಿಗೆ ನೇರವಾಗಿ ಅನುಕೂಲವಾಗುವ ಆದಾಯ ತೆರಿಗೆ ಮಿತಿ ಹೆಚ್ಚಳ ಸೇರಿದಂತೆ ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಬಹುದು.


ಲೈವ್ ಭಾಷಣ ಕೇಳಲು ಮತ್ತೊಂದು ಲಿಂಕ್:

ಬಜೆಟ್ ಭಾಷಣದ ಲೈವ್ ವಿಡಿಯೋ:

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union Budget 2016-17 updates in Kannada : Union Budget presented by Finance Minister, Arun Jaitley today (Feb.29).
Please Wait while comments are loading...