ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಯಿಂದ ಜರ್ಝರಿತ ತಮಿಳುನಾಡಿನ ಇತ್ತೀಚಿನ ವರದಿಗಳು

By Mahesh
|
Google Oneindia Kannada News

ನವದೆಹಲಿ, ಡಿ.02: ಮಳೆಯಿಂದ ನಲುಗಿರುವ ತಮಿಳುನಾಡಿಗೆ ಸಕಲ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ನೆರವು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೊತೆ ದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮುಖ್ತಾರ್ ಅಬ್ಬಾಸ್ ನಖ್ವಿ, ವೆಂಕಯ್ಯ ನಾಯ್ಡು, ಕಿರಣ್ ರಿಜಿಜು ಹಾಗೂ ಮನೋಹರ್ ಪರಿಕ್ಕಾರ್ ಅವರು ಮಾತನಾಡಿ ತಮಿಳುನಾಡಿಗೆ ಅಗತ್ಯವಾದ ನೆರವು ಮತ್ತು ಪರಿಹಾರ, ಪರಿಕರಗಳನ್ನು ನೀಡುವುದಾಗಿ ಬುಧವಾರ ಮಧ್ಯಾಹ್ನ ನವದೆಹಲಿಯಲ್ಲಿ ತಿಳಿಸಿದ್ದಾರೆ. [ಗ್ಯಾಲರಿ: ಹಚ್ಚಿ ಹೊಡೆಯುತ್ತಿರುವ ಮಳೆಗೆ ತತ್ತರಿಸಿದ ಚೆನ್ನೈ]

NDA govt offers all help to rain ravaged Tamil Nadu

ಈ ಮಧ್ಯೆ ದೆಹಲಿಯ ಹವಾಮಾನ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ಮುಂದಿನ 72 ಗಂಟೆಗಳ ಅವಧಿಯಲ್ಲಿ ಭಾರಿ ಮಳೆ ಸುರಿಯಲಿದೆ. ಮುಖ್ಯವಾಗಿ ಚೆನ್ನೈ, ತಿರುವಳ್ಳುರ್, ಕಾಂಚೀಪುರಂ ಮತ್ತು ನೆರೆಯ ಪುದುಚೇರಿಯಲ್ಲಿ ಮಳೆ ಹಾವಳಿ ವಿಪರೀತ ಇರುತ್ತದೆ.[ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]

ಮೈದಾನಗಳು ಕೆರೆಯಾಗಿ, ರಸ್ತೆಗಳು ಕಾಲುವೆಗಳಾಗಿ, ಕುಡಿಯುವ ನೀರಿಗೆ ತತ್ವಾರವಾಗಿ ಸಂಚಾರ ವಿಪರೀತ ಅಸ್ತವ್ಯಸ್ತವಾಗಿದೆ. ಹಲವಾರು ರೈಲುಗಳು, ವಿಮಾನ ಸಂಚಾರ ರದ್ದಾಗಿದೆ. ಶಾಲಾ, ಕಾಲೇಜುಗಳು, ಕಚೇರಿಗಳು ಅನಿರ್ಧಿಷ್ಟಕಾಲ ಮುಚ್ಚಿವೆ.

ತಮಿಳುನಾಡಲ್ಲಿ ಪರಿಸ್ಥಿತಿ ವಿಪರೀತ ಹದಗೆಟ್ಟಿರುವುದರಿಂದ ರಾಜ್ಯದಲ್ಲಿ ಪ್ರಯಾಣ ಕೈಗೊಳ್ಳುವುದನ್ನು ತಪ್ಪಿಸುವುದು ಕ್ಷೇಮ ಎನ್ನುವುದು ನಮ್ಮ ಸಲಹೆ.

ಪ್ರಮುಖ ಐಟಿ ಕಂಪೆನಿಗಳಿರುವ ಚೆನ್ನೈನ ಮಧ್ಯ ಕೈಲಾಷ್ ಪ್ರದೇಶದಲ್ಲಿ ಹಲವಾರು ರಸ್ತೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಐಟಿ ಬಿಟಿ ಕಂಪನಿಗಳು ಹಲವು ಖಾಸಗಿ ಕಂಪನಿಗಳು ಬಂದ್ ಆಗಿವೆ.

NDA govt offers all help to rain ravaged Tamil Nadu

ಉತ್ತರ ಚೆನ್ನೈ, ಮಂಡವೇಲಿ, ಪಿ.ಎಸ್.ಶಿವಸ್ವಾಮಿ ಸಲೈ, ಮೈಲಾಪುರ, ತಾರಮಣಿ ಲಿಂಕ್ ರೋಡ್, ರಾಜೀವ್ ಗಾಂಧಿ ಸಲೈ ಸೇರಿದಂತೆ ನಗರದ ಇತರ ಹಲವಾರು ಕಡೆಗಳಲ್ಲೂ ರಸ್ತೆಗಳು ಹಾನಿಗೀಡಾಗಿವೆ.

Chennai rains

ಕುಡಿಯುವ ನೀರಿಗೆ, ಹಾಲಿಗೆ, ಔಷಧಿಗೆ, ಟೆಲಿಫೋನಿಗೆ, ಡೇಟಾ ಕನೆಕ್ಟಿವಿಗೆ ತತ್ವಾರ ಬಂದಿರುವ ತಮಿಳುನಾಡಿನ ಜನಜೀವನದ ನೋವಿಗೆ ಜಗತ್ತಿನಾದ್ಯಂತ ಜನತೆ ಕಣ್ಣೀರು ಮಿಡಿಯುತ್ತಿದ್ದಾರೆ. ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಅಯ್ಯಾ ಕಡವಳೆ(ದೇವರೇ), ಸಾಕು ನಿನ್ನ ಆರ್ಭಟ. ಬೇಗ ಕೀಳು ಇಲ್ಲಿಂದ ಓಟ.

English summary
NDA govt offers all help to rain ravaged Tamil Nadu. Latest reports of rain havoc, rescue operations, weather report, video footages, photos from the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X