ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ವಶಕ್ಕೆ ಪುದುಚೇರಿ; ಗೆದ್ದ ಪ್ರಮುಖ ಅಭ್ಯರ್ಥಿಗಳು

|
Google Oneindia Kannada News

ನವದೆಹಲಿ, ಮೇ 03; ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 30 ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯನ್ನು ಮಾಡಲಿದೆ.

ಪುದುಚೇರಿಯಲ್ಲಿ 2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ 17 ಸ್ಥಾನಗಳಲ್ಲಿ ಗೆದ್ದಿತ್ತು. ವಿ. ನಾರಾಯಣಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಚುನಾವಣೆ ಘೋಷಣೆಗೂ ಕೆಲವು ದಿನಗಳ ಹಿಂದೆ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಬಹಮತ ಕಳೆದುಕೊಂಡಿತ್ತು.

ಪುದುಚೇರಿ ಚುನಾವಣೆ 2021; ಸಮೀಕ್ಷೆಗಳ ಸಮೀಕ್ಷೆ ಅಂಕಿ-ಸಂಖ್ಯೆಗಳು ಪುದುಚೇರಿ ಚುನಾವಣೆ 2021; ಸಮೀಕ್ಷೆಗಳ ಸಮೀಕ್ಷೆ ಅಂಕಿ-ಸಂಖ್ಯೆಗಳು

ಬಳಿಕ ಯಾವುದೇ ಪಕ್ಷ ಸರ್ಕಾರ ರಚನೆ ಮಾಡಲು ಮುಂದಾಗದ ಕಾರಣ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು. ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಈ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ವಿಶ್ಲೇಷಣೆಗಳು ನಡೆದಿದ್ದವು.

ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ ತಮಿಳುನಾಡು ಫಲಿತಾಂಶ 2021: ಗೆದ್ದವರು-ಸೋತವರು ಪ್ರಮುಖರ ಪಟ್ಟಿ

NDA Alliance To Form Government In Puducherry

ವಿಧಾನಸಭೆ ಚುನಾವಣೆ ಫಲಿತಾಂಶ; 2021ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 6 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ ಮೈತ್ರಿಕೂಟದಲ್ಲಿನ ಎಐಎನ್‌ಆರ್‌ಸಿ ಪಕ್ಷ 10 ಸ್ಥಾನದಲ್ಲಿ ಗೆಲುವು ಸಾಧಿಸಿದೆ.

ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ

ಕಾಂಗ್ರೆಸ್ ಮೈತ್ರಿಕೂಟದಲ್ಲಿ ಡಿಎಂಕೆ 6, ಕಾಂಗ್ರೆಸ್ 2 ಸ್ಥಾನದಲ್ಲಿ ಗೆಲುವು ಸಾಧಿಸಿವೆ. ಚುನಾವಣೋತ್ತರ ಸಮೀಕ್ಷೆಗಳು ಸಹ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ಹಿಡಿಯಲಿದೆ ಎಂದು ಹೇಳಿತ್ತು.

ಯಾರು ಮುಖ್ಯಮಂತ್ರಿ?; ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಮುಖ್ಯಸ್ಥ ಎನ್. ರಂಗಸ್ವಾಮಿ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರು. ತಟ್ಟಂಚವಾಡಿ ಕ್ಷೇತ್ರದಲ್ಲಿ ಸಿಪಿಐನ ಕೆ. ಸೇತು ಸೇಲ್ವಂ ಅವರ ವಿರುದ್ಧ 5,456 ಮತಗಳ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ಎನ್. ರಂಗಸ್ವಾಮಿ ಅವರೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಎಐಎನ್‌ಆರ್‌ಸಿ ಪಕ್ಷ 10 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವುದು ಅನಿವಾರ್ಯವಾಗಿದೆ.

ಗೆಲುವು ಸಾಧಿಸಿದ ಪ್ರಮುಖರು; ನೆಟ್ಟಪಕ್ಕಂ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ಎಐಎನ್‌ಆರ್‌ಸಿ ಅಭ್ಯರ್ಥಿ ಪಿ. ರಾಜವೇಲು, ಮಂಗಲಂ ಕ್ಷೇತ್ರದಲ್ಲಿ ಮಾಜಿ ಸಚಿವ ಮತ್ತು ಎಐಎನ್‌ಆರ್‌ಸಿಯ ಸಿ. ದೇಜುಕುಮಾರ್ ಗೆಲುವು ಸಾಧಿಸಿದ್ದಾರೆ.

ಕಾರೈಕಲ್ ಉತ್ತರ ಮತ್ತು ಮೀಸಲಿ ಕ್ಷೇತ್ರವನ್ನು ಎಐಎನ್‌ಆರ್‌ಸಿ ಉಳಿಸಿಕೊಂಡಿದೆ. ಕಾರೈಕಲ್‌ ಉತ್ತದಲ್ಲಿ ಕ್ಷೇತ್ರದಲ್ಲಿ ಪಿ. ಆರ್. ಎನ್. ತಿರುಮರುಗನ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇವಲ 135 ಮತಗಳ ಅಂತದಲ್ಲಿ ಗೆದ್ದಿದ್ದಾರೆ.

Recommended Video

ಸದ್ಯದಲ್ಲೇ ರಾಷ್ಟ್ರೀಯ ಪಕ್ಷಗಳ ವಿರುದ್ಧ JDS ಸೆಟೆದು ನಿಲ್ಲುತ್ತೆ ಅಂದ್ರು ಎಚ್ ಡಿ ಕುಮಾರಸ್ವಾಮಿ

ಕಾಂಗ್ರೆಸ್ ತೊರೆದು ಎಐಎನ್‌ಆರ್‌ಸಿ ಸೇರಿದ್ದ ಮಾಜಿ ಶಾಸಕ ಕೆ. ಲಕ್ಷ್ಮೀ ನಾರಾಯಣನ್ ರಾಜ್ ಭವನ್ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಎಐಎನ್‌ಆರ್‌ಸಿ ಆರ್. ಭಾಸ್ಕರ್ ಅರಿನ್‌ಕುಪ್ಪನ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 6418 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

English summary
All India N R Congress led National Democratic Alliance will form next government in Puducherry. Alliance won 16 seats in the 30 assembly constituencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X