• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀವು ಕೌಟುಂಬಿಕ ಹಿಂಸೆ ಅನುಭವಿಸುತ್ತಿದ್ದೀರಾ? ಈ ನಂಬರ್‌ಗೆ ಕರೆ ಮಾಡಿ

|

ನವದೆಹಲಿ, ಏಪ್ರಿಲ್ 20: ಕೊರೊನಾ ಲಾಕ್‌ಡೌನ್ ಆರಂಭವಾದ ದಿನದಿಂದ ಕೌಟುಂಬಿಕ ಕಲಹ ಹಾಗೂ ಕೌಟುಂಬಿಕ ಹಿಂಸೆ ಹೆಚ್ಚಾಗುತ್ತಿದೆ.

ನೀವು ಒಂದೊಮ್ಮೆ ಕೌಂಟುಂಬಿಕ ಹಿಂಸೆ ಅನುಭವಿಸುತ್ತಿದ್ದರೆ ಈ ನಂಬರ್‌ಗೆ ಕರೆ ಮಾಡಿ ದೂರು ನೀಡಬಹುದಾಗಿದೆ.

ಪಾದರಾಯನಪುರದಲ್ಲಿ ರಂಪಾಟ: ಇದು ರಾಕ್ಷಸ ಪ್ರವೃತ್ತಿ ಎಂದ ಆರ್.ಅಶೋಕ್

ಮಾರ್ಚ್ 24ರ ಬಳಿಕ ದೇಶದಲ್ಲಿ ಕೌಟುಂಬಿಕ್ ಹಿಂಸೆ ಪ್ರಕರಣಗಳು ಹೆಚ್ಚಾಗಿವೆ. ಪುರುಷರು ತಮ್ಮ ಅಸಹಾಯಕತೆಯನ್ನು ಪತ್ನಿ ಮೇಲೆ ತೋರಿಸುತ್ತಿದ್ದಾರೆ. ಹಿಂಸೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಭಾರತದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು ಅದರಲ್ಲೂ ಪಂಜಾಬ್‌ನಲ್ಲಿ ಅತಿ ಹೆಚ್ಚು ದೂರುಗಳು ದಾಖಲಾಗಿವೆ ಎಂದು ಎನ್‌ಸಿಡಬ್ಲ್ಯೂ ಮುಖ್ಯಸ್ಥೆ ರೇಖಾ ಶರ್ಮಾ ತಿಳಿಸಿದ್ದಾರೆ.

ಡೆಡ್ಲಿ ಕೊರೊನಾ ರಕ್ಕಸನ ದೆಸೆಯಿಂದ ವಿಶ್ವದ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ಘೋಷಣೆಯಾಗಿದೆ. ಯಾರೂ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಮನೆಯಿಂದ ಹೊರಗೆ ಬಂದರೆ ಎಲ್ಲಿ ಡೆಡ್ಲಿ ವೈರಸ್ ತಮ್ಮ ಮೇಲೂ ದಾಳಿ ಮಾಡುತ್ತದೋ ಎಂಬ ಭಯ ಎಲ್ಲರನ್ನೂ ಆವರಿಸಿದೆ.

ಹೀಗಾಗಿ, ಎಲ್ಲರೂ ಈಗ ಮನೆಯಲ್ಲೇ ಕಾಲಕಳೆಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿಶ್ವದ ಹಲವೆಡೆ ಕೌಟುಂಬಿಕ ಹಿಂಸೆಯ ಪ್ರಕರಣಗಳು ಜಾಸ್ತಿಯಾಗುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ.

ಲಾಕ್‌ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಆರಂಭ

ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದೂ ಇದೆ. ಸಾಮಾಜಿಕ ಮಾಧ್ಯಮಗಳ ಮೂಲಕವೂ ಅನೇಕರು ಈ ಬಗ್ಗೆ ತಮ್ಮ ದುಃಖ ತೋಡಿಕೊಂಡಿದ್ದಿದೆ. ವಿಶ್ವದ ನಾನಾ ಭಾಗಗಳಲ್ಲಿ ಈ ಲಾಕ್‌ಡೌನ್‌ ಅವಧಿಯ ಕೌಟುಂಬಿಕ ಹಿಂಸೆಯೂ ಗಂಭೀರ ಸಮಸ್ಯೆಯ ರೂಪ ತಾಳುತ್ತಿದೆ.

ಹೆಚ್ಚಿನ ಪ್ರಕರಣಗಳಲ್ಲಿ ಪತಿ ಮನೆಯಲ್ಲೇ ಕುಳಿತು ಬೇಜಾರಾಗಿ ತಮ್ಮ ಹತಾಶೆ, ಕೋಪವನ್ನು ಪತ್ನಿಯ ಮೇಲೆ ತೀರಿಸಿಕೊಳ್ಳುತ್ತಾರೆ ಎಂಬುದು ಬಹಿರಂಗಗೊಂಡಿದೆ.

ಸಾಕಷ್ಟು ಮಹಿಳೆಯರು ಕೌಟುಂಬಿಕೆ ಹಿಂಸೆ ಅನುಭವಿಸುತ್ತಿದ್ದು, ಇ-ಮೇಲ್ ಮೂಲಕ ಹೇಗೆ ದೂರು ನೀಡುವುದು ಎಂಬ ಮಾಹಿತಿ ಇಲ್ಲ. ಅಂಚೆ ಮೂಲಕ ದೂರು ಸ್ವೀಕರಿಸಲಾಗುತ್ತಿದೆ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಅಂಚೆ ಮೂಲಕ ಬರುತ್ತಿದ್ದ ದೂರುಗಳು ಕೂಡ ಕಡಿಮೆಯಾಗಿದೆ.

English summary
the National Commission for Women (NCW) launched a WhatsApp number on Friday to report cases of domestic violence, which have seen a rise during the coronavirus lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X