ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಕೋಮುಗಲಭೆ ಪ್ರಕರಣಗಳ ಕುರಿತು ಎನ್‌ಸಿಆರ್‌ಬಿ ನೀಡಿರುವ ವರದಿಯಲ್ಲಿ ಏನಿದೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ದೇಶಾದ್ಯಂತ ಕಳೆದ ಒಂದು ವರ್ಷದಿಂದ ಕೋಮುಗಲಭೆ ಪ್ರಕರಣಗಳು ಹೆಚ್ಚಾಗಿವೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೊರೊನಾ ಸೋಂಕಿನ ಸಂದರ್ಭದಲ್ಲೂ ಕೂಡ ಕೋಮು ಗಲಭೆ ಪ್ರಕರಣಗಳು ಹೆಚ್ಚಾಗಿವೆ, ಕೊರೊನಾ ಸಂದರ್ಭದಲ್ಲಿ ಲಾಕ್‌ಡೌನ್ ಜಾರಿಯಲ್ಲಿತ್ತು, ಸೀಮಿತ ಹೊರಾಂಗಣ ಚಟುವಟಿಕೆಗಳಿದ್ದರೂ ಕೂಮು ಗಲಭೆಗಳು ಏರುಮುಖದಲ್ಲೇ ಇವೆ.

ನಮ್ ಬೇಕರಿಯಲ್ಲಿ ಮುಸ್ಲಿಮರಿಲ್ಲ ಎಂದು ಪೋಸ್ಟ್ ಹಾಕಿದ್ದಕ್ಕೆ ಅರೆಸ್ಟ್!ನಮ್ ಬೇಕರಿಯಲ್ಲಿ ಮುಸ್ಲಿಮರಿಲ್ಲ ಎಂದು ಪೋಸ್ಟ್ ಹಾಕಿದ್ದಕ್ಕೆ ಅರೆಸ್ಟ್!

ಕೊರೊನಾ ಸೋಂಕಿನಿಂದಾಗಿ 2020ರ ಮಾರ್ಚ್ 25ರಿಂದ ಮೇ ತಿಂಗಳವರೆಗೆ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿತ್ತು. 2020ರ ಜನವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ಕಾನೂನು ಹಾಗೂ ಕೋಮುಗಲಭೆಗೆ ಸಂಬಂಧಿಸಿದಂತೆ ಅನೇಕ ಪ್ರತಿಭಟನೆಗಳು ನಡೆದಿದ್ದವು ಎಂದು ವರದಿಯು ಉಲ್ಲೇಖಿಸಿದೆ.

NCRB Report: Communal, Religious Rioting Cases Nearly Doubled In 2020

2020ರಲ್ಲಿ 736 ಜಾತಿ ಸಂಘರ್ಷಗಳು ನಡೆದಿವೆ 2019ರಲ್ಲಿ 492 ಹಾಗೂ 2018ರಲ್ಲಿ ಇದು 656 ಇತ್ತು. 2020ರಲ್ಲಿ ದೇಶದಲ್ಲಿ 857 ಕೋಮುಗಲಭೆ ಪ್ರಕರಣಗಳು ವರದಿಯಾಗಿವೆ. 2019ರಲ್ಲಿ ಈ ಸಂಖ್ಯೆಯು 438 ಹಾಗೂ 2018ರಲ್ಲಿ 512ರಷ್ಟಾಗಿತ್ತು.

2018ರಲ್ಲಿ ಗೋಮು ಗಲಭೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿತ್ತು. 2014-2016ನೇ ಸಾಲಿನಲ್ಲಿ ಕರ್ನಾಟಕ 279 ಕೋಮು ಗಲಭೆಗಳಿಗೆ ಸಾಕ್ಷಿಯಾಗಿದೆ ಎಂದು ರಾಜ್ಯಸಭೆಗೆ ಸರ್ಕಾರ ಮಾಹಿತಿ ನೀಡಿದೆ.

ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ 450 ಗಲಭೆ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಮತ್ತೊಂದು ಬಿಜೆಪಿ ಆಳ್ವಿಕೆಯ ರಾಜ್ಯ ಮಹಾರಾಷ್ಟ್ರ 270 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಮಧ್ಯಪ್ರದೇಶ (205) ಹಾಗೂ ರಾಜಸ್ಥಾನ (200) ನಂತರದ ಸ್ಥಾನದಲ್ಲಿವೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಬಿಹಾರ (197) ಆರು ಹಾಗೂ ಗುಜರಾತ್(182) ಏಳನೇ ಸ್ಥಾನ ಪಡೆದಿವೆ. ವಿಶೇಷ ಎಂದರೆ ಮೇಘಾಲಯ, ಗೋವಾ, ಮೀಜೋರಂ, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಕೋಮುಗಲಭೆಯೇ ಸಂಭವಿಸಿಲ್ಲ.

ಜನರನ್ನು ಹಿಂಸಾಚಾರ, ಗಲಭೆಗೆ ಪ್ರಚೋದಿಸುವ ಟಿ.ವಿ. ಕಾರ್ಯಕ್ರಮಗಳು ಹಾಗೂ ಸುದ್ದಿಗಳ ಮೇಲೆ ನಿಯಂತ್ರಣ ಹೇರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಇದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಬಿಗಿಗೊಳಿಸಬೇಕು ಎಂದು ಹೇಳಿದೆ.

"ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಚೋದನೆ ತಡೆಗಟ್ಟುವುದು ಬಹುಮುಖ್ಯ ಸಂಗತಿ. ಆದರೆ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಯಾವುದೇ ಕೆಲಸ ಮಾಡಿಲ್ಲ" ಎಂದು ತರಾಟೆಗೆ ತೆಗೆದುಕೊಂಡಿದೆ.

ಫೇಸ್‌ಬುಕ್, ಟ್ವಿಟ್ಟರ್‌ಗೆ ಸಂಸದೀಯ ಸಮಿತಿ ಸಮನ್ಸ್ ಫೇಸ್‌ಬುಕ್, ಟ್ವಿಟ್ಟರ್‌ಗೆ ಸಂಸದೀಯ ಸಮಿತಿ ಸಮನ್ಸ್ "ನೈಜ ಹಾಗೂ ನ್ಯಾಯಯುತ ವರದಿಗಾರಿಕೆ ಸಮಸ್ಯೆಯಲ್ಲ. ಆದರೆ ಮತ್ತೊಬ್ಬರನ್ನು ಕೆರಳಿಸುವ ರೀತಿ ಆ ವರದಿ ಇದ್ದರೆ ದೊಡ್ಡ ತೊಂದರೆ" ಎಂದು ಎಸ್.ಎ. ಬೊಬ್ಡೆ, ಎಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.

ದೆಹಲಿಯಲ್ಲಿ ಕಳೆದ ವರ್ಷ ತಬ್ಲಿಘಿ ಜಮಾತ್ ಸಭೆ ಕುರಿತ ಮಾಧ್ಯಮ ವರದಿಗಳಿಗೆ ಸಂಬಂಧಿಸಿದಂತೆ ಜಮೈತ್ ಉಲೇಮಾ ಐ ಹಿಂದ್, ಪೀಸ್ ಪಾರ್ಟಿ ಹಾಗೂ ಇನ್ನಿತರರು ಸಲ್ಲಿಸಿದ್ದ ಅರ್ಜಿಯ್ನು ಆಲಿಸಿದ ನ್ಯಾಯಾಲಯ ಈ ಸಂಬಂಧ ಸರ್ಕಾರ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಪ್ರಸರಣ ಸಂಸ್ಥೆಗೆ ನೋಟೀಸ್ ನೀಡಿದೆ.

ಕೊರೊನಾ ಹಾಟ್ ಸ್ಪಾಟ್ ಎನಿಸಿಕೊಂಡಿದ್ದ ತಬ್ಲಿಘಿ ಜಮಾತ್ ಸಭೆ ವಿಷಯವನ್ನು ಕೆಲವು ಮಾಧ್ಯಮಗಳು ಕೋಮುವಾದವಾಗಿ ಪರಿವರ್ತಿಸಿವೆ ಎಂದು ಅರ್ಜಿದಾರರು ದೂರಿದ್ದರು.

ಆದರೆ ವಿಷಯ ಗಮನಕ್ಕೆ ಬರುತ್ತಿದ್ದಂತೆ ತಬ್ಲಿಘಿ ಸಭೆ ಕುರಿತ ಪ್ರಸಾರ ನಿಲ್ಲಿಸಿದ್ದಾಗಿ ಕೇಂದ್ರ ಸರ್ಕಾರದ ಪರ ವಕೀಲರು ವಾದಿಸಿದರೂ, "ಕೆಲವು ಕಾರ್ಯಕ್ರಮಗಳು ಜನರನ್ನು ಪ್ರಚೋದಿಸಿವೆ ಎಂಬುದು ಸತ್ಯ.

ನೀವು ಈ ಬಗ್ಗೆ ಏನೂ ಮಾಡಿಲ್ಲ ಎಂದೂ ಸತ್ಯ. ಇದರಿಂದಲೂ ಪ್ರಚೋದನೆ ಸಿಗಬಹುದು" ಎಂದು ಬೊಬ್ಡೆ ತಿಳಿಸಿದ್ದಾರೆ. ಇದೇ ಸಂದರ್ಭ, ಸರ್ಕಾರ ಕೇಬಲ್ ಟೆಲಿವಿಷನ್ ನೆಟ್ ವರ್ಕ್ ನಿಯಂತ್ರಕ ಕಾಯ್ದೆಯನ್ನು ಪರಿಷ್ಕೃತಗೊಳಿಸಬೇಕು ಎಂದು ತಿಳಿಸಿದ್ದಾರೆ.

English summary
Cases of communal or religious rioting in 2020 nearly doubled from 2019 even as the country witnessed "very limited" outdoor activities due to COVID-19 pandemic during the past year, according to latest government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X