ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಮೆ ಕೇಳದಿದ್ರೆ ಬೂಟುಗಳಲ್ಲಿ ಹೊಡೀತಿವಿ: ಆರ್ ಜಿವಿಗೆ ಎನ್ ಸಿಪಿ ಬೆದರಿಕೆ

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್ ಸಿಪಿಯ ನಾಯಕಿ ವಿದ್ಯಾ ಚವ್ಹಾಣ್, ಈ ಕೂಡಲೇ ವರ್ಮಾ ಕ್ಷಮೆ ಯಾಚಿಸಬೇಕು.ಇಲ್ಲವಾದಲ್ಲಿ ಅವರಿಗೆ ಬೂಟುಗಳಿಂದ ಏಟು ಬೀಳುತ್ತವೆ ಎಂದು ಕಿಡಿಕಾರಿದ್ದಾರೆ.

|
Google Oneindia Kannada News

ಮುಂಬೈ, ಮಾರ್ಚ್ 9: ವಿಶ್ವ ಮಹಿಳಾ ದಿನಾಚರಣೆಯ ದಿನದಂದು ಮಹಿಳೆಯರಿಗೆ ಆಕ್ಷೇಪಾರ್ಹ ರೀತಿಯಲ್ಲಿ ಶುಭಾಷಯ ಹೇಳಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತಕ್ಷಣ ಕ್ಷಮೆ ಕೇಳಬೇಕು, ಇಲ್ಲವಾದರೆ, ಅವರಿಗೆ ಬೂಟುಗಳಿಗೆ ಹೊಡೆಯುತ್ತೇವೆಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಎಚ್ಚರಿಕೆ ನೀಡಿದೆ.

ಮಾ. 8ರಂದು ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ರಾಮ್ ಗೋಪಾಲ್ ವರ್ಮಾ ಅವರು ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು. ''ಮಹಿಳಾ ದಿನಾಚರಣೆಯಂದು ಎಲ್ಲಾ ಮಹಿಳೆಯರು ಪುರುಷರನ್ನು ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರಂತೆ ಸಂತುಷ್ಟಗೊಳಿಸಬೇಕು'' ಎಂದು ಹೇಳಿದ್ದು ಈ ವಿವಾದಕ್ಕೆ ಕಾರಣವಾಗಿದೆ.[ಮಹಿಳೆಯರನ್ನು ಸನ್ನಿಲಿಯೋನ್ ಗೆ ಹೋಲಿಸಿದ್ದ ಆರ್ ಜಿವಿ ವಿರುದ್ಧ ದೂರು]

NCP threatens to thrash Ram Gopal Varma with shoes

ಈ ಹಿನ್ನೆಲೆಯಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್ ಸಿಪಿಯ ನಾಯಕಿ ವಿದ್ಯಾ ಚವ್ಹಾಣ್, ಈ ಕೂಡಲೇ ವರ್ಮಾ ಕ್ಷಮೆ ಯಾಚಿಸಬೇಕು.ಇಲ್ಲವಾದಲ್ಲಿ ಅವರಿಗೆ ಬೂಟುಗಳಿಂದ ಏಟು ಬೀಳುತ್ತವೆ ಎಂದು ಕಿಡಿಕಾರಿದ್ದಾರೆ.[ಸ್ಮಾರ್ಟ್ ಫೋನ್ ತಯಾರಿಕಾ ಕ್ಷೇತ್ರಕ್ಕೆ ಕಾಲಿಟ್ಟ ಸಲ್ಲು !!!]

ವರ್ಮಾ ಅವರ ಈ ಟ್ವೀಟ್ ವಿರೋಧಿಸಿ ಈಗಾಗಲೇ ಸಾಕಷ್ಟು ಜನರು ಅವರ ವಿರುದ್ಧ ಟ್ವೀಟರಿನಲ್ಲಿ ಸಮರ ಸಾರಿದ್ದಾರೆ. ಅವರಿಲ್ಲರಿಗೂ ವರ್ಮಾ ಪ್ರತ್ಯುತ್ತರ ನೀಡುತ್ತಲೇ ಬಂದಿದ್ದು ''ಸನ್ನಿ ಲಿಯೋನ್ ಒಬ್ಬ ಸತ್ಯವಾದಿ. ಅಲ್ಲದೆ ಆಕೆ ಉಳಿದೆಲ್ಲಾ ಮಹಿಳೆಯರಿಗಿಂತ ಕೊಂಚ ಹೆಚ್ಚಿನ ಆತ್ಮವಿಶ್ವಾಸ ಉಳ್ಳವಳು. ಆಕೆಗೆ ಮಹಿಳೆಯರನ್ನು ಹೋಲಿಸಿದ್ದಕ್ಕೆ ಇಷ್ಟು ದೊಡ್ಡ ರಾದ್ಧಾಂತ ಮಾಡುತ್ತಿರುವವರು ಬೂಟಾಟಿಕೆ ಜನ'' ಎಂದಿದ್ದಾರೆ.

ಏತನ್ಮಧ್ಯೆ, ಗೋವಾದಲ್ಲಿ ಅವರ ವಿರುದ್ಧ ದೂರು ದಾಖಲಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ.

ಮಜ್ದೂರ್ ಸಂಘದ ಬೆದರಿಕೆ: ರಾಮ್ ಗೋಪಾಲ್ ವರ್ಮಾ ಕ್ಷಮೆ ಕೇಳದಿದ್ದರೆ ತಮ್ಮ ಸಂಘಟನೆಯು ರಾಮ್ ಗೋಪಾಲ್ ಅವರ ಮುಂದಿನ ಚಿತ್ರಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದೆ.

English summary
The Nationalist Congress Party on Thursday threatened to beat up director Ram Gopal Varma, who had posted sexist 'Women's Day' message on the Twitter, with shoes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X