• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಛತ್ತೀಸ್‌ಗಢ: ಮೋಸ್ಟ್‌ ವಾಂಟೆಡ್ ನಕ್ಸಲ್ ನಾಯಕ ಕೋಸಾ ಹತ್ಯೆ

|

ದಂತೇವಾಡ, ಏಪ್ರಿಲ್ 20: ಪೊಲೀಸರು ಸಾಕಷ್ಟು ದಿನಗಳಿಂದ ಹುಡುಕುತ್ತಿದ್ದ ನಕ್ಸಲ್ ನಾಯಕ ಕೋಸಾನನ್ನು ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ ಹತ್ಯೆ ಮಾಡಿವೆ. ಕೋಸಾನನ್ನು ಹಿಡಿದುಕೊಟ್ಟವರಿಗೆ 5 ಲಕ್ಷ ಬಹುಮಾನ ಎಂದು ಪೊಲೀಸರು ಈ ಹಿಂದೆ ಘೋಷಿಸಿದ್ದರು.

ಅಂತೆಯೇ ಮೃತ ನಕ್ಸಲ್ ನಾಯಕ ಕೋಸಾ ಕಳೆದ 15 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಮೂಲತಃ ನೀಲವಾಯದ ಮಲ್ಲಪಾರ ನಿವಾಸಿಯಾಗಿದ್ದ ಕೋಸಾ ಪ್ರಸ್ತುತ ಮಲಂಗೀರ್ ಪ್ರದೇಶ ಸಮಿತಿ ಸದಸ್ಯನಾಗಿದ್ದ ಮತ್ತು ಮಿಲಿಟರಿ ಗುಪ್ತಚರ ಉಸ್ತುವಾರಿ ವಹಿಸಿದ್ದ. ಅಲ್ಲದೆ ಈತನ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 15 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದವು.

ಛತ್ತೀಸ್ ಗಢ: ನಕ್ಸಲರು ಅಪಹರಿಸಿದ್ದ ಕೋಬ್ರಾ ಜವಾನ್ ಬಿಡುಗಡೆಛತ್ತೀಸ್ ಗಢ: ನಕ್ಸಲರು ಅಪಹರಿಸಿದ್ದ ಕೋಬ್ರಾ ಜವಾನ್ ಬಿಡುಗಡೆ

ಮಂಗಳವಾರ ಬೆಳಿಗ್ಗೆ ಛತ್ತೀಸ್ ಘಡದ ನೀಲವಾಯಾ ಅರಣ್ಯದಲ್ಲಿ ದಂತೇವಾಡ ಜಿಲ್ಲಾ ಮೀಸಲು ಪಡೆ ಕಾರ್ಯಾಚರಣೆ ನಡೆಸಿ ಎನ್‌ಕೌಂಟರ್ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಛತ್ತೀಸ್ ಘಡದ ಮೋಸ್ಟ್ ನಟೋರಿಯಸ್ ನಕ್ಸಲ್ ನಾಯಕ 'ಕೋಸಾ' ಹತನಾಗಿದ್ದಾನೆ ಎಂದು ತಿಳಿದುಬಂದಿದೆ.

ಅಲ್ಲದೆ ಘಟನಾ ಸ್ಥಳದಲ್ಲಿ ಒಂದು 9 ಎಂಎಂ ಪಿಸ್ತೂಲ್, ಒಂದು ದೇಶೀ ನಿರ್ಮಿತ ಭರ್ಮಾರ್, 3 ಕೆಜಿ ಐಇಡಿ ಸ್ಫೋಟಕ, ಪಿಥೂಸ್, ಔಷಧಿಗಳು ಮತ್ತು ದೈನಂದಿನ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ ಅವರು, 'ದಂತೇವಾಡ ಡಿಆರ್‌ಜಿ (ದಂತೇವಾಡ ಡಿಸ್ಟಿಕ್ಟ್ ರಿಸರ್ವ್ ಗಾರ್ಡ್)ಯೊಂದಿಗೆ ಇಂದು ಬೆಳಿಗ್ಗೆ 6 ಗಂಟೆಗೆ ನೀಲವಾಯದ ಕಾಡಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಮಾವೋವಾದಿ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿತ್ತು. ಮೃತ ಮಾವೋವಾದಿಯನ್ನು ನಟೋರಿಯಸ್ ನಕ್ಸಲ್ ನಾಯಕ ಕೋಸಾ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ಏಪ್ರಿಲ್ ತಿಂಗಳ ಆರಂಭದಲ್ಲಿ ಛತ್ತೀಸ್‌ಗಢದ ಸುಕ್ಮಾ ಮತ್ತು ಬಿಜಾಪುರ್ ನಡುವಿನ ಜುನಾಗಢದಲ್ಲಿ ನಕ್ಸಲರು ನಡೆಸಿದ್ದ ಭೀಕರ ದಾಳಿಯಲ್ಲಿ 22 ಯೋಧರು ಹುತಾತ್ಮರಾಗಿದ್ದರು.

English summary
A Naxal carrying a reward of Rs 5 lakh on his head was killed in a exchange of fire with Dantewada District Reserve Guard, in Neelawaya forest on Tuesday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X