ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವಾ ಹಿರಿತನ ಉಲ್ಲಂಘಿಸಿ ನೌಕಾ ಸೇನೆ ಮುಖ್ಯಸ್ಥ ಹುದ್ದೆ; ಬಿಮಲ್ ವರ್ಮಾ ಪ್ರಶ್ನೆ

By ಅನಿಲ್ ಆಚಾರ್
|
Google Oneindia Kannada News

ವೈಸ್ ಅಡ್ಮಿರಲ್ ಬಿಮಲ್ ವರ್ಮಾರ ಸೇವಾ ಹಿರಿತನವನ್ನು ಉಲ್ಲಂಘಿಸಿ, ಅವರ ಜೂನಿಯರ್, ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಅವರನ್ನು ನೌಕಾ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ಸರಕಾರದಿಂದ ನೇಮಿಸಿರುವ ಆದೇಶವನ್ನು ಸಶಸ್ತ್ರ ಪಡೆಯ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಹಿರಿಯ ಅಧಿಕಾರಿಯು ಪೋರ್ಟ್ ಬ್ಲೇರ್ ನಲ್ಲಿ ಅಂಡಮಾನ್ ನಿಕೋಬಾರ್ ಕಮ್ಯಾಂಡ್ ಅನ್ನು ಮುನ್ನಡೆಸುತ್ತಾರೆ. ಇದೀಗ ಅವರ ಪರವಾಗಿ ಮಗಳು, ದೆಹಲಿ ಮೂಲದ, ಇಪ್ಪತ್ತೆಂಟು ವರ್ಷದ ರಿಯಾ ವರ್ಮಾ ವಾದ ಮಂಡಿಸಲಿದ್ದಾರೆ. ಮಂಗಳವಾರದಂದು ನ್ಯಾಯ ಮಂಡಳಿಯಲ್ಲಿ ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆ ಇದೆ.

ಮೇ ಮೂವತ್ತೊಂದಕ್ಕೆ ಭಾರತ ನೌಕಾ ಸೇನೆಯ ಅಡ್ಮಿರಲ್ ಸುನೀಲ್ ಲನ್ಬ ನಿವೃತ್ತಿ ಅಗುವವರಿದ್ದು, ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಅತ್ಯಂತ ಹಿರಿಯ ಅಧಿಕಾರಿ ಆಗಲಿದ್ದಾರೆ. ಆದರೆ ಕಳೆದ ತಿಂಗಳು ಬಿಮಲ್ ವರ್ಮಾರ ಬದಲು ಕರಂಬಿರ್ ಸಿಂಗ್ ರನ್ನು ನೇಮಿಸಲು ಸರಕಾರ ನಿರ್ಧರಿಸಿತು.

Navy officer petitions tribunal over next chief

ಸಾಮಾನ್ಯವಾಗಿ ಮುಖ್ಯಸ್ಥರ ನೇಮಕ ಮಾಡುವಾಗ ಸೇವಾ ಹಿರಿತನವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ಸರಕಾರದಿಂದ ಅದನ್ನು ಮೀರಿದ ಉದಾಹರಣೆಗಳೂ ಇವೆ. ಎರಡು ವರ್ಷದ ಹಿಂದೆ ಬಿಪಿನ್ ರಾವತ್ ರನ್ನು ಭೂ ಸೇನಾ ಮುಖ್ಯಸ್ಥರನ್ನಾಗಿ ನೇಮಕ ಮಾಡುವಾಗ ಅವರಿಗಿಂತ ಇಬ್ಬರು ಸೇವಾತನದಲ್ಲಿ ಹಿರಿಯರು ಇದ್ದರು.

ಕರ್ನಾಟಕದ ಲೋಕಸಭಾ ಸದಸ್ಯರಲ್ಲಿ ಯಾರು ಎಷ್ಟು ಓದಿದ್ದಾರೆ?

ಐದು ವರ್ಷದ ಹಿಂದೆ ಯುಪಿಎ ಅವಧಿಯಲ್ಲಿ ಸೇವಾ ಹಿರಿತನವನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ತಮಗಿಂತ ಹಿರಿಯರು ಇದ್ದರೂ ಅಡ್ಮಿರಲ್ ಆಗಿದ್ದರು ರಾಬಿನ್ ಧೋವನ್.

English summary
Vice Admiral Bimal Verma, the top Navy officer superseded by the government to appoint his junior Vice Admiral Karambir Singh as the next navy chief, has petitioned the Armed Forces Tribunal against the order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X