ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಅಪಘಾತದ 11 ದಿನಗಳ ಬಳಿಕ ಪೈಲಟ್ ಮೃತದೇಹ ಪತ್ತೆ

|
Google Oneindia Kannada News

ನವದೆಹಲಿ, ಡಿಸೆಂಬರ್ 7: ನವೆಂಬರ್ 26ರಂದು ಅರಬ್ಬಿ ಸಮುದ್ರದಲ್ಲಿ ಅಪಘಾತಕ್ಕೀಡಾಗಿದ್ದ ಮಿಗ್-29ಕೆ ನೌಕಾ ವಿಮಾನದ ಪೈಲಟ್‌ನ ದೇಹ ಸುಮಾರು ಹನ್ನೊಂದು ದಿನಗಳ ಬಳಿಕ ಕೊನೆಗೂ ಪತ್ತೆಯಾಗಿದೆ. ಸಮುದ್ರದಲ್ಲಿ ವಿಮಾನ ಪತನಗೊಂಡ ಬಳಿಕ ನಾಪತ್ತೆಯಾಗಿದ್ದ ಪೈಲಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ಅವರಿಗಾಗಿ ವ್ಯಾಪಕ ಹುಡುಕಾಟ ನಡೆದಿತ್ತು. ನಿಶಾಂತ್ ಅವರು ಅದೃಷ್ಟವಶಾತ್ ಬದುಕುಳಿದಿರಬಹುದು ಎಂಬ ಆಶಾವಾದದೊಂದಿಗೆ ತೀವ್ರ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು.

ಗೋವಾ ಕರಾವಳಿಯಿಂದ ಸುಮಾರು 30 ಮೈಲು ದೂರದಲ್ಲಿ ಸಮುದ್ರದ 70 ಮೀಟರ್ ಆಳದಲ್ಲಿನ ಸೀಬೆಡ್‌ನಲ್ಲಿ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ. ನವೆಂಬರ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಹಾರಿದ್ದ ರಷ್ಯಾ ಮೂಲದ ಮಿಗ್ ವಿಮಾನ ಸಂಜೆ 5ರ ಸುಮಾರಿಗೆ ಪತನಗೊಂಡಿತ್ತು.

ಫೈಟರ್ ಜೆಟ್ ಪತನಗೊಂಡು ಏಳು ದಿನ; ಇನ್ನೂ ಪತ್ತೆ ಇಲ್ಲ ಪೈಲಟ್ಫೈಟರ್ ಜೆಟ್ ಪತನಗೊಂಡು ಏಳು ದಿನ; ಇನ್ನೂ ಪತ್ತೆ ಇಲ್ಲ ಪೈಲಟ್

ನಿಶಾಂತ್ ಸಿಂಗ್ ಅವರ ಸಹ ಪೈಲಟ್ ವಿಮಾನ ಪತನಗೊಳ್ಳುವ ಮೊದಲು ಅದರಿಂದ ಸುರಕ್ಷಿತವಾಗಿ ಹೊರಗೆ ನೆಗೆಯುವಲ್ಲಿ ಯಶಸ್ವಿಯಾಗಿದ್ದರು. ಅವರನ್ನು ರಕ್ಷಿಸಲಾಗಿತ್ತು. ಅವರ ಬಳಿಕ ನಿಶಾಂತ್ ಕೂಡ ಜಿಗಿದಿದ್ದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಹನ್ಸಾ ನೌಕಾಪಡೆ ನೆಲೆಯಿಂದ 50 ಕಿಮೀ ದೂರದಲ್ಲಿ ವಿಮಾನದ ಅವಶೇಷಗಳು ಕೆಲವು ದಿನಗಳ ಬಳಿಕ ಪತ್ತೆಯಾಗಿದ್ದವು.

Navy Mig-29K Crash: Missing Pilot Nishant Singhs Body Found On Seabed Off Goa Coast

ಮಿಗ್-29ಕೆ ಪತನ: ಅವಶೇಷ ಪತ್ತೆ ಬೆನ್ನಲ್ಲೇ ಶೋಧಕಾರ್ಯ ಚುರುಕು ಮಿಗ್-29ಕೆ ಪತನ: ಅವಶೇಷ ಪತ್ತೆ ಬೆನ್ನಲ್ಲೇ ಶೋಧಕಾರ್ಯ ಚುರುಕು

2018ರ ಜನವರಿಯಿಂದ ಪತನಗೊಂಡಿರುವ ನಾಲ್ಕನೇ ಮಿಗ್-29ಕೆ ವಿಮಾನ ಇದಾಗಿದೆ. ಐಎನ್ಎಸ್ ವಿಕ್ರಮಾದಿತ್ಯ ನೌಕೆಯಿಂದ ಕಾರ್ಯಾಚರಣೆ ನಡೆಸುವ ಇಂತಹ 45 ಸೂಪರ್ ಸಾನಿಕ್ ಯುದ್ಧ ವಿಮಾನಗಳನ್ನು ರಷ್ಯಾದಿಂದ 2 ಬಿಲಿಯನ್ ಡಾಲರ್‌ಗೆ ಭಾರತ ಖರೀದಿಸಿತ್ತು.

English summary
Navy Mig-29K crash: Missing Pilot Nishant Singh's body found on seabed off Goa coast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X