ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Navratri 2022 : ನವರಾತ್ರಿ ಉಪವಾಸ ಮಾಡುತ್ತಿದ್ದೀರಾ? ರೈಲಿನಲ್ಲಿ ನಿಮಗೆ ಸಿಗಲಿದೆ ಈ ವಿಶೇಷ 'ವ್ರತ ಥಾಲಿ'

|
Google Oneindia Kannada News

ದಸರಾ ಹಬ್ಬ ಇನ್ನೇನು ದೂರವಿಲ್ಲ. ದಸರಾ ಆಚರಣೆಗೆ ಈಗಾಗಲೇ ಸಕಲ ತಯಾರಿ ನಡೆಯುತ್ತಿವೆ. ಜನ ಉಪವಾಸ, ಪೂಜೆ, ವ್ರತಗಳಿಗಾಗಿ ಸಿದ್ಧರಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ವಿಶೇಷ ವ್ಯವಸ್ಥೆಯನ್ನು ಮಾಡಿದೆ. ಐಆರ್‌ಸಿಟಿಸಿ ಸೆಪ್ಟೆಂಬರ್ 26, 2022 ರಂದು ಪ್ರಾರಂಭವಾಗುವ ನವರಾತ್ರಿ ಉತ್ಸವದ ಸಮಯದಲ್ಲಿ ರೈಲುಗಳಲ್ಲಿ ಪ್ರಯಾಣಿಸುವ ಉಪವಾಸ ಪ್ರಯಾಣಿಕರಿಗೆ ವಿಶೇಷ ಮೆನುವನ್ನು ಪರಿಚಯಿಸಿದೆ. ಭಾರತದಲ್ಲಿ 400 ರೈಲು ನಿಲ್ದಾಣಗಳಲ್ಲಿ ರೈಲ್ವೆ ಪ್ರಯಾಣಿಕರಿಗೆ ವಿಶೇಷ 'ವ್ರತ ಥಾಲಿ' ಲಭ್ಯವಾಗಲಿದೆ.

ಹಾಗಾಗಿ ಪ್ರಯಾಣದಲ್ಲಿರುವವರು ಮತ್ತು ಉಪವಾಸ ಇರುವವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಬೇಯಿಸಿದ ಮತ್ತು ಕಲ್ಲು ಉಪ್ಪಿನೊಂದಿಗೆ ತಯಾರಿಸಿದ ವಿಶೇಷ 'ವ್ರತ ಥಾಲಿ' ಅನ್ನು ಆರ್ಡರ್ ಮಾಡಬಹುದು.

IRCTC ಏನು ಹೇಳಿದೆ?

ಉಪವಾಸದ ಸಮಯದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ಚಿಂತಿಸುವ ಪ್ರಯಾಣಿಕರಿಗಾಗಿ ವಿಶೇಷ 'ವ್ರತ ಥಾಲಿ' ಅನ್ನು ಪರಿಚಯಿಸಲಾಗಿದೆ ಎಂದು IRCTC PRO ಆನಂದ್ ಕುಮಾರ್ ಝಾ ಹೇಳಿದ್ದಾರೆ. ಸೂಕ್ತ ಬೇಡಿಕೆ ಬಂದರೆ ಈ 'ವ್ರತ ಥಾಲಿ'ಯನ್ನು ಮುಂದೆಯೂ ಮುಂದುವರಿಸಲಾಗುವುದು.

Navratri 2022: Whats in IRCTCs special Vrata Thali for fasting passengers?

ವಿಶೇಷವಾದ 'ವ್ರತ ಥಾಲಿ' ಏನನ್ನು ನೀಡುತ್ತದೆ? ಅದರ ಬೆಲೆ ಎಷ್ಟು ಎಂದು ನೋಡುವುದಾದರೆ 99 ರೂಪಾಯಿಗೆ ಹಣ್ಣುಗಳು, ಬಕ್ವೀಟ್ ಪಕೋರಿ, ಮೊಸರು ಮತ್ತು 99 ರೂಪಾಯಿಗೆ 2 ಪರಾಠಗಳು, ಆಲೂಗೆಡ್ಡೆ ಕರಿ, ಸಾಗು ಪುಡಿಂಗ್ ಹಾಗೂ 199 ರೂಪಾಯಿಗೆ 4 ಪರಾಠಗಳು, 3 ತರಕಾರಿ ಪಲ್ಯ, ಸಾಗು ಖಿಚಡಿ ಇನ್ನೂ 250 ರೂಪಾಯಿಗೆ ಪನೀರ್ ಪರಾಠ, ವ್ರತ್ ಮಸಾಲಾ, ಸಿಂಘಡ ಮತ್ತು ಆಲೂ ಪರಾಠವನ್ನು ಒದಗಿಸಲಾಗುವುದು.

ಈ ಬಾರಿ ಶಾರದೀಯ ನವರಾತ್ರಿಯು ಸೆ.26ರಿಂದ ಆರಂಭವಾಗುತ್ತಿದ್ದು, ಅಕ್ಟೋಬರ್ 5ರಂದು ದಸರಾದೊಂದಿಗೆ ಮುಕ್ತಾಯವಾಗಲಿದೆ. ಅಕ್ಟೋಬರ್ 4 ರಂದು ನವಮಿ ಪೂಜೆ ನಡೆಯಲಿದೆ. ಈ ಬಾರಿ ನವರಾತ್ರಿಯಂದು ಅಂತಹ ಶುಭ ಸಂಯೋಗವು ರೂಪುಗೊಳ್ಳುತ್ತಿದ್ದು, ಇದನ್ನು ಅತ್ಯಂತ ವಿಶೇಷ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಬಾರಿಯ ನವರಾತ್ರಿಯು ಸಂಪೂರ್ಣ 9 ದಿನಗಳವರೆಗೆ ಇರುವುದು. ನವರಾತ್ರಿಯ ಒಂದು ದಿನವೂ ವ್ಯರ್ಥವಾಗದೆ ಹತ್ತನೇ ದಿನದಲ್ಲಿ ದಸರಾವನ್ನು ಆಚರಿಸಲಾಗುತ್ತದೆ. ಭಕ್ತರು ನವರಾತ್ರಿಯನ್ನು 9 ದಿನಗಳ ಕಾಲ ದಿನವಿಡೀ ಪೂಜಿಸಿದರೆ, ಅದು ಮನುಕುಲದ ಕಲ್ಯಾಣಕ್ಕೆ ತುಂಬಾ ಒಳ್ಳೆಯದು ಎನ್ನುವ ನಂಬಿಕೆಯಿದೆ. ಇದಲ್ಲದೆ ನವರಾತ್ರಿಯ 9 ದಿನಗಳಲ್ಲಿ ಹಲವರು ಉಪವಾಸ ವ್ರತ ಆಚರಿಸುತ್ತಾರೆ.

English summary
The Indian Railway Catering and Tourism Corporation (IRCTC) has introduced a special menu for fasting passengers traveling in trains during the Navratri festival starting on September 26, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X