ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್ಚು ಪ್ರಕೃತಿ ವಿಕೋಪ:ಕರ್ನಾಟಕಕ್ಕೆ ಆರನೇ ಸ್ಥಾನ

By Nayana
|
Google Oneindia Kannada News

ಬೆಂಗಳೂರು, ಜೂನ್ 11: ನೈಸರ್ಗಿಕ ವಿಕೋಪಗಳು ಸಂಭವಿಸುವುದು ಸರ್ವೇ ಸಾಮಾನ್ಯ ಆದರೆ ಅದರಿಂದ ಹೆಚ್ಚು ಹಾನಿಗೊಳಗಾಗುವ ರಾಜ್ಯಗಳು ಯಾವುದು ಎಂದು ನಾವು ನೋಡಬೇಕಿದೆ. ಅತಿ ಹೆಚ್ಚಿನ ಪ್ರಾಣ ಹಾನಿ, ಆಸ್ತಿ ಹಾನಿಗಳಾಗುವ ರಾಜ್ಯಗಳ ಪೈಕಿ ಕರ್ನಾಟಕವು 6 ನೇ ಸ್ಥಾನದಲ್ಲಿದೆ.

ಯುನೈಟೆಡ್ ನೇಷನ್ಸ್‌ ಡೆವಲಪ್‌ಮೆಂಟ್ ಪ್ರೋಗ್ರಾಂ ಸಹಯೋಗದಲ್ಲಿ ಕೇಂದ್ರ ಗೃಹ ಸಚಿವಾಲಯ ಸಿದ್ಧಪಡಿಸುತ್ತಿರುವ ವರದಿಯ ಕರಡು ಪ್ರತಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ದೇಶದ 640 ಜಿಲ್ಲೆಗಳ ಪೈಕಿ ವಿಕೋಪಕ್ಕೆ ತುತ್ತಾಗಿ ಹಾನಿ ಅನುಭವಿಸುವ ಅತಿ ಹೆಚ್ಚಿನ ಜಿಲ್ಲೆಗಳು ಮಹಾರಾಷ್ಟ್ರದಲ್ಲಿದದು, ಪಶ್ಚಿಮ ಬಂಗಾಳ 2 ನೇ ಸ್ಥಾನದಲ್ಲಿದೆ.

ಅತಿ ಮಳೆಯಿಂದ ಸಂಕಷ್ಟ ಅನುಭವಿಸಬಾರದು ಎಂದರೆ ಹೀಗೆ ಮಾಡಿಅತಿ ಮಳೆಯಿಂದ ಸಂಕಷ್ಟ ಅನುಭವಿಸಬಾರದು ಎಂದರೆ ಹೀಗೆ ಮಾಡಿ

ಹೆಚ್ಚು ಭೂಕಂಪನ, ಭೂಕುಸಿತ ಮತ್ತು ಪ್ರವಾಹಕ್ಕೆ ತುತ್ತಾಗುವ ಉತ್ತರಾಖಂಡ, ಹಿಮಾಚಲ ಪ್ರದೇಶ ಸೇರಿ ಈಶಾನ್ಯ ರಾಜ್ಯಗಳು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಹಾನಿ ಕಡಿಮೆ ಮಾಡಲು ತೆಗೆದುಕೊಂಡ ನಿರ್ಧಾರ, ಕ್ರಮಗಳನ್ನು ಪರಿಗಣಿಸಿ ಆದಂತಹ ಕೃಷಿ ಹಾನಿ, ಜನರ ಮತ್ತು ಜಾನುವಾರುಗಳ ಪ್ರಾಣಹಾನಿ ಒಟ್ಟುಗೂಡಿಸಿ ವರದಿ ತಯಾರಿಸಲಾಗಿದೆ.

Natural disasters: Karnataka listed in most affected states

ಮೊದಲನೇ ಸ್ಥಾನದಲ್ಲಿ ಮಹಾರಾಷ್ಟ್ರ, 2 ನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ, 3 ನೇ ಸ್ಥಾನದಲ್ಲಿ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ, ಅಸ್ಸಾಂ, ಆಂಧ್ರಪ್ರದೇಶ, ಗುಜರಾತ್ ಮತ್ತು ಬಿಹಾರ ಕ್ರಮವಾಗಿ 10 ನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು,, ಅಸ್ಸಾಂ, ತ್ರಿಪುರ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳು ವಿಕೋಪ ತಡೆಗಟ್ಟಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

English summary
Karnataka stands at number six in most affected natural disaster states in the country while Maharashtra stands number one followed by West Bengal, Uttar Pradesh, Madhya Pradesh and Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X