ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವೈದ್ಯಕೀಯ ಒಕ್ಕೂಟದಿಂದ ಜೂನ್ 17ಕ್ಕೆ ದೇಶಾದ್ಯಂತ ಧರಣಿ

|
Google Oneindia Kannada News

ನವದೆಹಲಿ, ಜೂನ್ 16: ಪಶ್ಚಿಮ ಬಂಗಾಲದಲ್ಲಿ ಈಚೆಗೆ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ, ಭಾರತೀಯ ವೈದ್ಯಕೀಯ ಒಕ್ಕೂಟದಿಂದ (ಐಎಂಎ) ಜೂನ್ 17ರಂದು (ಸೋಮವಾರ) ತುರ್ತು ಸೇವೆ ಹೊರತಾದ ಸೇವೆಗಳಲ್ಲಿ ಪಾಲ್ಗೊಳ್ಳದೆ ದೇಶದಾದ್ಯಂತ ಧರಣಿ ನಡೆಸಲು ನಿರ್ಧರಿಸಲಾಗಿದೆ.

300 ವೈದ್ಯರ ರಾಜೀನಾಮೆ, ಬಂಗಾಳದಲ್ಲಿ ಮುಗಿಲು ಮುಟ್ಟಿದ್ದ ಆಕ್ರೋಶ300 ವೈದ್ಯರ ರಾಜೀನಾಮೆ, ಬಂಗಾಳದಲ್ಲಿ ಮುಗಿಲು ಮುಟ್ಟಿದ್ದ ಆಕ್ರೋಶ

ವೈದ್ಯಕೀಯ ಸಿಬ್ಬಂದಿ ವಿರುದ್ಧ ಹಿಂಸಾಚಾರ ನಡೆಯದಂತೆ, ಸುರಕ್ಷತೆಗೆ ರಾಜ್ಯಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಅರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿಕೆ ನೀಡಿದ ನಂತರ ವೈದ್ಯರು ಪ್ರತಿಭಟನೆ ನಿರ್ಧಾರ ತೆಗೆದುಕೊಂಡಿದ್ದಾರೆ. ವೈದ್ಯರು, ವೈದ್ಯಕೀಯ ಸಿಬ್ಬಂದಿಯ ಸುರಕ್ಷತೆಗೆ ಕೇಂದ್ರದಿಂದಲೇ ಕಾನೂನು ಜಾರಿಗೆ ತರಬೇಕು ಎಂಬುದು ಒತ್ತಾಯವಾಗಿದೆ.

Doctors Strike

ಐಪಿಸಿ ಹಾಗೂ ಸಿಆರ್ ಪಿಸಿಗೆ ತಿದ್ದುಪಡಿ ತಂದು, ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಮಾಡಬೇಕು ಎಂದು ಐಎಂಎ ಹೇಳಿದೆ. ಹೊರ ರೋಗಿಗಳ ಸೇವೆ ಸೇರಿದಂರೆ ಯಾವುದೇ ತುರ್ತು ಹೊರತಾದ ಸೇವೆಗಳು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮಂಗಳವಾರ ಬೆಳಗ್ಗೆ 6 ಗಂಟೆಯ ತನಕ, ಅಂದರೆ ಇಪ್ಪತ್ನಾಲ್ಕು ಗಂಟೆ ಕಾಲ ಇರುವುದಿಲ್ಲ ಎಂದು ಹೇಳಲಾಗಿದೆ.

English summary
Nationwide protest by doctors on June 17th, said by Indian Medical Association. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X