ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ಕೊರೊನಾ ಉಲ್ಬಣ: ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆಯಲ್ಲಿ ಹೆಚ್ಚಳ

|
Google Oneindia Kannada News

ದೇಶಾದ್ಯಂತ ಕೋವಿಡ್ ಪ್ರಕರಣಗಳು ಮತ್ತೆ ಉಲ್ಬಣಗೊಳ್ಳುತ್ತಿದ್ದು ಲಸಿಕೆಯತ್ತ ಜನ ಹೆಚ್ಚು ಗಮನಹರಿಸುತ್ತಿದ್ದಾರೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರದಲ್ಲಿ ನೀಡಲಾದ ಬೂಸ್ಟರ್ ಡೋಸ್‌ ಪಡೆದವರ ಸಂಖ್ಯೆಯಲ್ಲಿ ಶೇಕಡಾ 44.3 ರಷ್ಟು ಹೆಚ್ಚಳವಾಗಿದೆ.

ಮೇ ತಿಂಗಳ ಕೊನೆಯ 15 ದಿನಗಳಲ್ಲಿ 41.5 ಲಕ್ಷಕ್ಕೆ ಹೋಲಿಸಿದರೆ ಜೂನ್ ಮೊದಲ 15 ದಿನಗಳಲ್ಲಿ ಸುಮಾರು 47.5 ಲಕ್ಷ ಮೂರನೇ ಡೋಸ್‌ಗಳನ್ನು ನೀಡಲಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ. ಕಳೆದ ಗುರುವಾರ ದೇಶ 12,213 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದರ ಬಳಿಕ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದಾಗಿ ಸೋಂಕಿತರು ಆಸ್ಪತ್ರೆಗೆ ದಾಖಲು ಮತ್ತು ಸಾವುಗಳ ಸಂಖ್ಯೆ ಕೂಡ ಕಡಿಮೆಯಾಗಿವೆ.

CoWIN ಪೋರ್ಟಲ್‌ನಲ್ಲಿನ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಐದು ಮಹಾನಗರಗಳು ಕಳೆದ ವಾರದಲ್ಲಿ ನಿರ್ವಹಿಸಲಾದ ಬೂಸ್ಟರ್ ಡೋಸ್‌ಗಳ ಸಂಖ್ಯೆಯಲ್ಲಿ ಸರಾಸರಿ 77.9 ಶೇಕಡಾ ಹೆಚ್ಚಳವನ್ನು ಕಂಡಿವೆ ಎಂದು ಡೇಟಾ ತೋರಿಸುತ್ತದೆ. ಮುಖ್ಯವಾಗಿ ಚೆನ್ನೈನಲ್ಲಿ 212.5 ಶೇಕಡಾ ಹೆಚ್ಚಳವಾಗಿದೆ.

ಈ ತಿಂಗಳು ಪ್ರಾರಂಭವಾದ ಹರ್ ಘರ್ ದಸ್ತಕ್ ಅಭಿಯಾನ 2.0 ಮೂಲಕ ವಯಸ್ಸಾದ ಜನಸಂಖ್ಯೆಯನ್ನು ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಸರ್ಕಾರ ಒತ್ತಾಯಿಸುತ್ತಿದೆ. ಇದು 12 ಮತ್ತು 17 ವರ್ಷ ವಯಸ್ಸಿನ ಮಕ್ಕಳಲ್ಲಿ ಮೊದಲ ಎರಡು ಡೋಸ್‌ಗಳ ವ್ಯಾಪ್ತಿಯನ್ನು ಹೆಚ್ಚಿಸಲು ಸಹ ಯೋಜಿಸಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ

ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಯಸ್ಕರು ಬೂಸ್ಟರ್ ಡೋಸ್‌ಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯ ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಮಹಾನಗರಗಳು ಮತ್ತು ನಗರ ಕೇಂದ್ರಗಳಲ್ಲಿ ದಾಖಲಾಗುವ ಸಾಧ್ಯತೆಯಿದೆ. ಬೂಸ್ಟರ್ ಡೋಸ್‌ಗಳಿಗಾಗಿ ಸರ್ಕಾರದ ಉಚಿತ ವ್ಯಾಕ್ಸಿನೇಷನ್ ಡ್ರೈವ್ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರನ್ನು ಮಾತ್ರ ಒಳಗೊಂಡಿದೆ.

ಮನೆ-ಮನೆಗೆ ಪ್ರಚಾರ

ಮನೆ-ಮನೆಗೆ ಪ್ರಚಾರ

ಮಾಹಿತಿಯ ಪ್ರಕಾರ, ಮುಂಬೈನಲ್ಲಿ ಕೋವಿಡ್ ಉಲ್ಬಣ ಕಳೆದ ಎರಡು ವಾರಗಳಲ್ಲಿ ಮನೆ-ಮನೆಗೆ ಪ್ರಚಾರ ಮಾಡುವ ಮೂಲಕ ಡೋಸ್ ತೆಗೆದುಕೊಳ್ಳಲು ಸೂಚಿಸಲಾಗುತ್ತಿದೆ. ಹೀಗಾಗಿ ಕಳೆದ ವಾರಕ್ಕಿಂತ ಈ ವಾರ ನಿರ್ವಹಿಸಲಾದ ಬೂಸ್ಟರ್ ಶಾಟ್‌ಗಳ ಸಂಖ್ಯೆಯಲ್ಲಿ ಶೇಕಡಾ 31 ರಷ್ಟು ಹೆಚ್ಚಳವಾಗಿದೆ. ಬೆಂಗಳೂರು ಜೂನ್‌ನಲ್ಲಿ ವಾರದಿಂದ ವಾರಕ್ಕೆ ಕೊರೊನಾ ಹೆಚ್ಚಳವನ್ನು ಕಂಡಿದೆ. ಹಿಂದಿನ ವಾರಕ್ಕಿಂತ ಜೂನ್‌ನ ಮೊದಲ ಏಳು ದಿನಗಳಲ್ಲಿ %6.8ರಷ್ಟು ಹೆಚ್ಚಳ ಮತ್ತು ಎರಡನೇ ವಾರದಲ್ಲಿ ಶೇ.49.2ರಷ್ಟು ಏರಿಕೆಯಾಗಿದೆ.

ಬೂಸ್ಟರ್ ಸಂಖ್ಯೆಯಲ್ಲಿ ಏರಿಳಿತ

ಬೂಸ್ಟರ್ ಸಂಖ್ಯೆಯಲ್ಲಿ ಏರಿಳಿತ

ದೆಹಲಿ ಮತ್ತು ಕೋಲ್ಕತ್ತಾ ಜೂನ್ ತಿಂಗಳ ಬೂಸ್ಟರ್ ಸಂಖ್ಯೆಯಲ್ಲಿ ಏರಿಳಿತಗಳನ್ನು ದಾಖಲಿಸಿವೆ. ದೆಹಲಿಯು ಜೂನ್ ಮೊದಲ ವಾರದಲ್ಲಿ 5.9 ರಷ್ಟು ಕುಸಿತವನ್ನು ಕಂಡಿದೆ ಮತ್ತು ನಂತರ 32.4 ರಷ್ಟು ಹೆಚ್ಚಳವಾಗಿದೆ. ಕೋಲ್ಕತ್ತಾ CoWIN ಡೇಟಾ ಪ್ರಕಾರ ಜೂನ್ ಮೊದಲ ವಾರದಲ್ಲಿ ಶೇಕಡಾ 9.7 ರಷ್ಟು ಕುಸಿತವನ್ನು ಕಂಡಿದೆ ಮತ್ತು ನಂತರ ಶೇಕಡಾ 64.3 ರಷ್ಟು ಕೊರೊನಾ ಹೆಚ್ಚಳವಾಗಿದೆ.

ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಳ

ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಳ

ಡೇಟಾವು ಕಳೆದ ವಾರದಲ್ಲಿ ದೇಶಾದ್ಯಂತ ಲಸಿಕೆ ಡೋಸ್‌ಗಳಲ್ಲಿ 41.8 ಶೇಕಡಾ ಹೆಚ್ಚಳವನ್ನು ತೋರಿಸುತ್ತದೆ. ಇದು ಬೂಸ್ಟರ್ ಡೋಸ್‌ಗಳಲ್ಲಿ ಕಂಡುಬರುವ ಹೆಚ್ಚಳಕ್ಕಿಂತ ಕಡಿಮೆಯಾಗಿದೆ. ರಾಜಧಾನಿ ಒಟ್ಟು ಡೋಸ್‌ಗಳ ಸಂಖ್ಯೆಯಲ್ಲಿ 15.8 ಪ್ರತಿಶತವನ್ನು ಕಂಡಿದೆ ಮತ್ತು ಕೋಲ್ಕತ್ತಾದಲ್ಲಿ 55.01 ಪ್ರತಿಶತ ಹೆಚ್ಚಳವಾಗಿದೆ.

Recommended Video

ದುಬೈನಲ್ಲಿ ಬಿಎಸ್ವೈ ಫ್ಯಾಮಿಲಿ ಆಸ್ತಿ ಹೊಂದಿರೋದು ನಿಜಾನಾ!! *Politics | OneIndia Kannada

English summary
Covid cases are on the rise across the country and people are focusing on the vaccine. The number of booster doses given last week increased by 44.3 percent compared to the previous week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X