ವಿವೇಕಾನಂದರ ನೆನೆದು 'ಯುವದಿನ'ಕ್ಕೆ ಶುಭನುಡಿದ ಗಣ್ಯರು

Posted By:
Subscribe to Oneindia Kannada

'ನೀವು ನಿಮ್ಮಲ್ಲಿ ನಂಬಿಕೆ ಬೆಳೆಸಿಕೊಳ್ಳದ ಹೊರತು ದೇವರಲ್ಲಿ ನಂಬಿಕೆ ಬೆಳೆಸಿಕೊಳ್ಳಲು ಸಾಧ್ಯವಿಲ್ಲ' ಎಂಬಂಥ ದಿವ್ಯವಾಣಿಯ ಮೂಲಕ, ಬದುಕಿದ್ದ 39 ವರ್ಷದಲ್ಲೇ ಅಗಣಿತವಾದುದನ್ನು ಸಾಧಿಸಿದ ಸ್ವಾಮಿ ವಿವೇಕಾನಂದರ(1863 ಜನವರಿ12 ರಂದು 1902 ಜುಲೈ 14) ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸುವಂಥ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ದಿನವನ್ನೂ ಸಾರ್ಥಕವಾಗಿ ಆಚರಿಸಲಾಗುತ್ತದೆ.

ಯುವ ಪೀಳಿಗೆಗೆ ವಿವೇಕಾನಂದರ ಸಿಂಹವಾಣಿ

1893, ಸೆ.11 ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ ಇಡೀ ವಿಶ್ವಕ್ಕೂ ಭ್ರಾತೃತ್ವದ ಸಂದೇಶ ಸಾರಿದ ಸ್ವಾಮಿ ವಿವೇಕಾನಂದರ ನೆನೆಕೆಗೆ ಈ ದಿನ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಯುವದಿನಕ್ಕೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಆಧುನಿಕ ಭಾರತ ಕಂಡ ಪ್ರಖರ ದೇಶಭಕ್ತ, ಅಸ್ಖಲಿತ ವಾಗ್ಮಿ, ದ್ರಷ್ಟಾರ, ಅನನ್ಯ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನದಂದು ಅವರ ಆದರ್ಶಗಳನ್ನು ನೆನೆಯುವ, ಪಾಲಿಸುವ ಸಂಕಲ್ಪದೊಂದಿಗೆ, ಎಲ್ಲರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.

ಸಂಕ್ರಾಂತಿ ವಿಶೇಷ ಪುಟ

ಶುಭ ಕೋರಿದ ಪ್ರಧಾನಿ ಮೋದಿ

ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರಿಗೆ ನನ್ನ ಪ್ರಣಾಮಗಳು. ನಮ್ಮ ದೇಶದ ನಿರ್ಮಾತೃರಾದ ಉತ್ಸಾಹದ ಚಿಲುಮೆಯ, ಅಪರಿಮಿತ ಶಕ್ತಿಯ ಯುವಕರಿಗೆ ರಾಷ್ಟ್ರೀಯ ಯುವದಿನದ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

ವಿವೇಕಾನಂದರ ಮರು ಜನ್ಮವೇ ನರೇಂದ್ರ ಮೋದಿಯೇ?: ಜಾತಕ ವಿಶ್ಲೇಷಣೆ

ಯುವದಿನಕ್ಕೆ ಶುಭ ಕೋರಿದ ಸಿದ್ದರಾಮಯ್ಯ

ಹಸಿದವನಿಗೆ ಹೊಟ್ಟೆ ತುಂಬ ಅನ್ನ , ಸ್ವತಂತ್ರ ಚಿಂತನೆಗೆ ಅವಕಾಶ ನೀಡುವ ಶಿಕ್ಷಣ, ತಾರತಮ್ಯ ಇಲ್ಲದ‌ ಸಮಾಜ ನಿರ್ಮಾಣ ನನ್ನ‌ಮೊದಲ ಕರ್ತವ್ಯ, ಧರ್ಮ ಬೋಧನೆ ಎರಡನೆಯದು ಎಂಬ ಸ್ವಾಮಿ ವಿವೇಕಾನಂದರ ಸಂದೇಶ ನನ್ನ‌ಯೋಚನೆ ಮತ್ತು ನಮ್ಮ ಯೋಜನೆಗಳಿಗೆ ಸ್ಪೂರ್ತಿ. ನಾಡಿನ ಜನತೆಗೆ ಸ್ವಾಮಿ ವಿವೇಕಾನಂದರ ಜನ್ಮ‌ದಿನದ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ದರಾಮಮಯ್ಯ ಟ್ವೀಟ್ ಮಾಡಿದ್ದಾರೆ.

ವಿವೇಕಾನಂದರಿಗೆ ನಮನ ಸಲ್ಲಿಸಿದ ರಾಷ್ಟ್ರಪತಿ ಕೋವಿಂದ್

ಸ್ವಾಮಿ ವಿವೇಕಾನಂದರ ಜನ್ಮದಿನದಂದು ಅವರಿಗೆ ನನ್ನ ನಮನಗಳು. ಅವರೊಬ್ಬ ರಾಷ್ಟ್ರ ನಿರ್ಮಾತೃ. ಈ ಮಹಾನ್ ವಿದ್ವಾಂಸ, ಸಂತನ ನೆನಪಿಗಾಗಿನಾವಿಂದು ರಾಷ್ಟ್ರೀಯ ಯುವದಿನ ಆಚರಿಸುತ್ತಿದ್ದೇವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಯುವದಿನಕ್ಕೆ ಯಡಿಯೂರಪ್ಪ ಶುಭಾಶಯ

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಕೊಡುಗೆ ನೀಡಿದ ಸ್ವಾಮಿ ವಿವೇಕಾನಂದರಿಗೆ ಅವರ ಜನ್ಮದಿನದಂದು ನಮನಗಳು. ಅವರು ರಾಷ್ಟ್ರ ನಿರ್ಮಾಣದಲ್ಲಿ ಯುವಕರಲ್ಲಿರುವ ಶಕ್ತಿಯನ್ನು ಕಂಡುಕೊಂಡವರು. ಈ ರಾಷ್ಟ್ರೀಯ ಯುವದಿನದಂದು, 'ಏಳಿ ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ನಾನು ಯುವಕರಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Every year on January 12th Indians are celebrating great saint and visionary Swami vivekananda's birthday as National youth day. For this special occasion many leaders including prime minister of India Narendra Modi, wishes best on twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ