ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಮತದಾರರ ದಿನ: ಇ ವೋಟರ್ ಐಡಿ ಲೋಕಾರ್ಪಣೆ

|
Google Oneindia Kannada News

ರಾಷ್ಟ್ರೀಯ ಮತದಾರರ ದಿನ (ಜನವರಿ 25) ದ ಅಂಗವಾಗಿ ಡಿಜಿಟಲ್ ವೋಟರ್ ಐಡಿ ಲೋಕಾರ್ಪಣೆ ಮಾಡಲಾಗುತ್ತದೆ. ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಡಿಜಿಟಲ್ ವೋಟರ್ ಐಡಿ ಗೆ ಚಾಲನೆ ನೀಡಲಿದ್ದು, ಹೊಸ ಮತದಾರರಿಗೆ ಇ ಎಪಿಕ್ ಕಾರ್ಡ್(ಎಲೆಕ್ಟ್ರಾನಿಕ್ ಎಲೆಕ್ಟೋರಲ್ ಫೋಟೋ ಐಡೆಂಟಿಟಿ ಕಾರ್ಡ್) ಗಳನ್ನು ವಿತರಿಸಲಿದ್ದಾರೆ.

ತಮ್ಮ ಒಳಿತನ್ನು ಬಯಸುವ ಜನಪ್ರತಿನಿಧಿಯನ್ನು ಆರಿಸುವ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ನೆರವೇರಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಈ ಮತದಾರರ ದಿನದಂದು ಕಡ್ಡಾಯ ಮತದಾನವು ಪ್ರತಿ ಪ್ರಜೆಯ ಕರ್ತವ್ಯ ಎಂಬ ಸಂದೇಶವನ್ನು ಹರಡಿ ಜಾಗೃತಿ ಮೂಡಿಸೋಣ ಎಂದು ಚುನಾವಣಾ ಆಯೋಗ ಕರೆ ನೀಡಿದೆ.

ನಮ್ಮ ಒಂದು ಮತವು ಸಹ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ. ಮುಂಬರುವ ಐದು ರಾಜ್ಯಗಳಲ್ಲಿ ಈ ಹೊಸ ಇ ಎಪಿಕ್ ಕಾರ್ಡ್ ಬಳಸಲಾಗುತ್ತದೆ ಎಂದು ಆಯೋಗ ತಿಳಿಸಿದೆ.

National Voters Day: Voter ID card goes digital, all you need to know in kannada

ರಾಷ್ಟ್ರೀಯ ಮತದಾರರ ದಿನ: ಇ ವೋಟರ್ ಐಡಿ ಲೋಕಾರ್ಪಣೆ
ಡಿಜಿಟಲ್ ವೋಟರ್ ಐಡಿ ಡೌನ್ ಲೋಡ್
ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ (Voterportal.ed.gov.in, nvsp.in) ಮತ್ತು ಮೊಬೈಲ್ ಅಪ್ಲಿಕೇಷನ್ ನಿಂದ ಇ ಎಪಿಕ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಮತದಾರರ ಚೀಟಿಯಲ್ಲಿ ನೋಂದಾಯಿಸಿದ ಮೊಬೈಲ್ ಫೋನ್ ಸಂಖ್ಯೆಗೆ ಡೌನ್ ಲೋಡ್ ಆಗುವ ಇ ಎಪಿಕ್ ಕಾರ್ಡ್ ಪಿಡಿಎಫ್ ಆವೃತ್ತಿಯಲ್ಲಿರಲಿದ್ದು, ಸುರಕ್ಷಿತವಾಗಿರುತ್ತದೆ. ಇದನ್ನು ನಿಮ್ಮ ಡಿಜಿಟಲ್ ಲಾಕರ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

English summary
National Voter's Day: Voter ID card goes digital, all you need to know in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X