ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಅತ್ಯಂತ ಸಾಕ್ಷರ ರಾಜ್ಯ: ಕರ್ನಾಟಕದ ಸಾಕ್ಷರತೆ ಮಟ್ಟವೇನು? ಸಮೀಕ್ಷೆ ವರದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 7: ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸಮೀಕ್ಷೆಯ ವರದಿ ಪ್ರಕಾರ ಕೇರಳವು ಶೇ 96.2ರ ಸಾಕ್ಷರತೆಯೊಂದಿಗೆ ದೇಶದಲ್ಲಿ ಅತ್ಯಂತ ಹೆಚ್ಚು ಸಾಕ್ಷರತೆಯ ದೇಶ ಪಟ್ಟಿಯಲ್ಲಿ ಮತ್ತೊಮ್ಮೆ ಮೊದಲ ಸ್ಥಾನ ಪಡೆದಿದೆ.

ಕೌಟುಂಬಿಕ ಸಾಮಾಜಿಕ ಸೇವನೆ: ರಾಷ್ಟ್ರೀಯ ಮಾದರಿ ಸಮೀಕ್ಷೆಯ 75ನೇ ಸುತ್ತಿನ ಭಾಗವಾಗಿ ಭಾರತದಲ್ಲಿ ಶಿಕ್ಷಣ ಎಂಬ ವರದಿಯಡಿ 2017ರ ಜುಲೈನಿಂದ 2018ರ ಜೂನ್‌ವರೆಗೆ ನಡೆಸಿದ ಸಮೀಕ್ಷೆಯಲ್ಲಿ ಏಳು ಹಾಗೂ ಅದಕ್ಕಿಂತ ಹೆಚ್ಚು ವರ್ಷದವರನ್ನು ಒಳಗೊಂಡ ಜನರಲ್ಲಿನ ರಾಜ್ಯವಾರು ಸಾಕ್ಷರತೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.

105ನೇ ವಯಸ್ಸಿನಲ್ಲಿ 4ನೇ ತರಗತಿ ಪರೀಕ್ಷೆಗೆ ಅಜ್ಜಿ ಹಾಜರ್!105ನೇ ವಯಸ್ಸಿನಲ್ಲಿ 4ನೇ ತರಗತಿ ಪರೀಕ್ಷೆಗೆ ಅಜ್ಜಿ ಹಾಜರ್!

ಅಧ್ಯಯನದ ಪ್ರಕಾರ ಕೇರಳದ ಬಳಿಕ ಶೇ 88.7ರ ಸಾಕ್ಷರತೆ ಪ್ರಮಾಣದೊಂದಿಗೆ ಎರಡನೆಯ ಸ್ಥಾನದಲ್ಲಿದೆ. ಶೇ 87.6ರ ಸಾಕ್ಷರತೆಯೊಂದಿಗೆ ಉತ್ತರಾಖಂಡ ಮೂರನೇ ಸ್ಥಾನದಲ್ಲಿದೆ. ಹಿಮಾಚಲ ಪ್ರದೇಶ ಶೇ 86.6, ಅಸ್ಸಾಂ ಶೇ 85.9ರಷ್ಟು ಸಾಕ್ಷರತೆ ಮಟ್ಟ ಹೊಂದಿದೆ.

ತೆಲಂಗಾಣದಲ್ಲಿ ಶೇ 72.8, ಉತ್ತರ ಪ್ರದೇಶ ಶೇ 73, ಮಧ್ಯಪ್ರದೇಶ ಶೇ 73.7ರಷ್ಟು ಸಾಕ್ಷರತೆ ಹೊಂದಿವೆ. ದೇಶದಲ್ಲಿ ಒಟ್ಟಾರೆ ಸಾಕ್ಷರತೆ ಪ್ರಮಾಣ ಶೇ 77.7ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ 73.5 ಮತ್ತು ನಗರ ಪ್ರದೇಶಗಳಲ್ಲಿ ಶೇ 87.7ರಷ್ಟು ಸಾಕ್ಷರತೆ ಇದೆ. ಮುಂದೆ ಓದಿ.

ಕರ್ನಾಟಕದ ಸ್ಥಾನ

ಕರ್ನಾಟಕದ ಸ್ಥಾನ

ಆಂಧ್ರಪ್ರದೇಶ ಶೇ 66.4ರಷ್ಟು ಪ್ರಮಾಣದೊಂದಿಗೆ ಅತ್ಯಂತ ಕಡಿಮೆ ಸಾಕ್ಷರತೆ ಹೊಂದಿರುವ ಕುಖ್ಯಾತಿಗೆ ಒಳಗಾಗಿದೆ. ರಾಜಸ್ಥಾನದ 69.7 ಹಾಗೂ ಬಿಹಾರ ಶೇ 70.9 ಸಾಕ್ಷರತೆಯೊಂದಿಗೆ ಕೆಳಗಿನಿಂದ ನಂತರದ ಸ್ಥಾನಗಳಿವೆ. ಕರ್ನಾಟಕ ಶೇ 77.2 ರಷ್ಟು ಸಾಕ್ಷರತೆ ಹೊಂದಿದ್ದು, ಸಮಾಧಾನಕರ ಮಟ್ಟದಲ್ಲಿದೆ.

ಪುರುಷ ಸಾಕ್ಷರತೆ ಶೇ 84.7

ಪುರುಷ ಸಾಕ್ಷರತೆ ಶೇ 84.7

ಹಾಗೆಯೇ, ಪುರುಷ ಸಾಕ್ಷರತೆ ಪ್ರಮಾಣ ಶೇ 84.7ರಷ್ಟಿದ್ದು, ಮಹಿಳೆಯರಲ್ಲಿ ಶೇ 70.3ರಷ್ಟು ಮಾತ್ರವೇ ಸಾಕ್ಷರತೆ ಇದೆ. ಕೇರಳದಲ್ಲಿ ಪುರುಷ ಸಾಕ್ಷರತೆ ಶೇ 97.4 ಹಾಗೂ ಮಹಿಳಾ ಸಾಕ್ಷರತೆ ಶೇ 95.2ರಷ್ಟಿದೆ. ಕರ್ನಾಟಕದಲ್ಲಿ ಶೇ 83.4 ಪುರುಷ ಸಾಕ್ಷರತೆ ಹಾಗೂ ಶೇ 70.5ರಷ್ಟು ಮಹಿಳಾ ಸಾಕ್ಷರತೆ ಇದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಶೇ 71 ಮತ್ತು ನಗರ ಪ್ರದೇಶಗಳಲ್ಲಿ ಶೇ 88.3ರಷ್ಟು ಸಾಕ್ಷರತೆ ಇದೆ.

ಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿಆತ್ಮ ನಿರ್ಭರ ಭಾರತಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿ; ಮೋದಿ

ಸಮೀಕ್ಷೆ ನಡೆಸಿದ ವಿವರ

ಸಮೀಕ್ಷೆ ನಡೆಸಿದ ವಿವರ

ಭಾರತದಾದ್ಯಂತ 8,097 ಗ್ರಾಮಗಳ 64,519 ಮನೆಗಳು ಹಾಗೂ 6,188 ಬ್ಲಾಕ್‌ಗಳಲ್ಲಿನ 49,238 ನಗರ ಪ್ರದೇಶ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸುಮಾರು ಶೇ 4ರಷ್ಟು ಗ್ರಾಮೀಣ ಮನೆಗಳು ಹಾಗೂ ಶೇ 23ರಷ್ಟು ನ್ರ ಪ್ರದೇಶದ ಮನೆಗಳಲ್ಲಿ ಕಂಪ್ಯೂಟರ್ ಇದೆ ಎಂದು ಸಮೀಕ್ಷೆ ತಿಳಸಿದೆ.

ಅಂತರ್ಜಾಲ ಬಳಕೆ ಜ್ಞಾನ

ಅಂತರ್ಜಾಲ ಬಳಕೆ ಜ್ಞಾನ

15-29 ವಯಸ್ಸಿನವರಲ್ಲಿ ಶೇ 24ರಷ್ಟು ಮಂದಿ ಗ್ರಾಮೀಣ ಭಾಗದವರು ಹಾಗೂ ಶೇ 56ರಷ್ಟು ನಗರ ಭಾಗದ ಜನರು ಕಂಪ್ಯೂಟರ್ ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. 15-29 ವರ್ಷದೊಳಗಿನ ಶೇ 35ರಷ್ಟು ಮಂದಿ ಸಮೀಕ್ಷೆ ಸಂದರ್ಭದಲ್ಲಿ ಇಂಟರ್ನೆಟ್ ಬಳಸುತ್ತಿದ್ದರು. ಇದರಲ್ಲಿ ಶೇ 25ರಷ್ಟು ಗ್ರಾಮೀಣರು ಹಾಗೂ ಶೇ 58ರಷ್ಟು ನಗರ ಪ್ರದೇಶದಲ್ಲಿದ್ದಾರೆ.

English summary
National Statistical Office (NSO) Survey has released its report. Kerala with 96,2 per cent emerged as most literate state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X