ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟ: ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಆಗಸ್ಟ್ 21: ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯವು 2020ನೇ ಸಾಲಿನ ವಿವಿಧ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾದ ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಹಿಂದೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದ ಸಾಕ್ಷಿ ಮಲಿಕ್ ಮತ್ತು ಮೀರಾಭಾಯಿ ಚಾನು ಅವರ ಹೆಸರನ್ನು ಅರ್ಜುನ ಪ್ರಶಸ್ತಿಯಿಂದ ಕೈಬಿಡಲು ನಿರ್ಧರಿಸಿ 27 ಜನರಿಗೆ ಸೀಮಿತಗೊಳಿಸಲಾಗಿದೆ. ಆದರೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಐವರಿಗೆ ನೀಡಲಾಗಿದೆ.

ನಿವೃತ್ತ ನ್ಯಾಯಮೂರ್ತಿ ಮುಕುಂದಕಮ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಮೀರಾಭಾಯಿ ಮತ್ತು ಸಾಕ್ಷಿ ಅವರ ಹೆಸರನ್ನು ಒಳಗೊಂಡಂತೆ 29 ಮಂದಿಯ ಹೆಸರನ್ನು ಅರ್ಜುನ್ ಪ್ರಶಸ್ತಿಗೆ ಶಿಫಾರಸು ಮಾಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಏಕೆಂದರೆ ಇವರಿಬ್ಬರೂ ಅದಕ್ಕಿಂತಲೂ ಉನ್ನತ ಪ್ರಶಸ್ತಿಯನ್ನು ಈಗಾಗಲೇ ಪಡೆದುಕೊಂಡಿದ್ದರು.

ನಿವೃತ್ತರಾದ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಸ್ಪರ್ಶಿ ಪತ್ರನಿವೃತ್ತರಾದ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಸ್ಪರ್ಶಿ ಪತ್ರ

ಆಗಸ್ಟ್ 29ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಈ ಪ್ರಶಸ್ತಿಗಳನ್ನು ವರ್ಚ್ಯುವಲ್ ಕಾರ್ಯಕ್ರಮದ ಮೂಲಕ ಪ್ರದಾನ ಮಾಡಲಾಗುತ್ತದೆ. ಪ್ರತಿ ವರ್ಷ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುತ್ತಿತ್ತು. ಯಾರಿಗೆ ಯಾವ ಪ್ರಶಸ್ತಿ ದೊರಕಿದೆ? ಇಲ್ಲಿದೆ ವಿವರ.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

ರೋಹಿತ್ ಶರ್ಮ- ಕ್ರಿಕೆಟ್

ಮರಿಯಪ್ಪನ್ ತಂಗವೇಲು- ಪ್ಯಾರಾ ಅಥ್ಲೆಟಿಕ್ಸ್

ಮಣಿಕಾ ಬಾತ್ರಾ- ಟೇಬಲ್ ಟೆನಿಸ್

ವಿನೇಶ್ ಪೋಗಟ್- ಕುಸ್ತಿ

ರಾಣಿ ರಾಮ್‌ಪಾಲ್- ಹಾಕಿ

 ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿ

a. ಜೀವಮಾನ ವಿಭಾಗ

ಧರ್ಮೇಂದ್ರ ತಿವಾರಿ-ಬಿಲ್ಲುಗಾರಿಕೆ

ಪುರುಷೋತ್ತಮ್ ರೈ- ಅಥ್ಲೆಟಿಕ್ಸ್

ಶಿವ್ ಸಿಂಗ್- ಬಾಕ್ಸಿಂಗ್

ರೊಮೇಶ್ ಪಥಾನಿಯಾ- ಹಾಕಿ

ಕೃಷನ್ ಕುಮಾರ್ ಹೂಡಾ- ಕಬಡ್ಡಿ

ವಿಜಯ್ ಬಾಲಚಂದ್ರ ಮುನೀಶ್ವರ್- ಪ್ಯಾರಾ ಪವರ್ ಲಿಫ್ಟಿಂಗ್

ನರೇಶ್ ಕುಮಾರ್- ಟೆನ್ನಿಸ್

ಓಂ ಪ್ರಕಾಶ್ ದಹಿಯಾ- ಕುಸ್ತಿ

ಡಾ ರಾಜ್‌ಗೆ 'ಭಾರತ ರತ್ನ' ನೀಡುವಂತೆ ಮೋದಿಗೆ ಪತ್ರ ಬರೆದ ಸಂಸದಡಾ ರಾಜ್‌ಗೆ 'ಭಾರತ ರತ್ನ' ನೀಡುವಂತೆ ಮೋದಿಗೆ ಪತ್ರ ಬರೆದ ಸಂಸದ

b. ಸಾಮಾನ್ಯ ವಿಭಾಗ

ಜೂಡ್ ಫೆಲಿಕ್ಸ್ ಸೆಬಾಸ್ಟಿಯನ್- ಹಾಕಿ

ಯೋಗೇಶ್ ಮಾಳವೀಯ- ಮಲ್ಲಕಂಬ

ಜಸ್ಪಾಲ್ ರಾಣಾ-ಶೂಟಿಂಗ್

ಕುಲದೀಪ್ ಕುಮಾರ್ ಹಂಡೂ-ವುಶು

ಗೌರವ್ ಖನ್ನಾ-ಪ್ಯಾರಾ ಬ್ಯಾಡ್ಮಿಂಟನ್

 ಅರ್ಜುನ ಪ್ರಶಸ್ತಿ

ಅರ್ಜುನ ಪ್ರಶಸ್ತಿ

ಅತನು ದಾಸ್- ಬಿಲ್ಲುಗಾರಿಕೆ

ದ್ಯುತಿ ಚಾಂದ್- ಅಥ್ಲೆಟಿಕ್ಸ್

ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ- ಬ್ಯಾಡ್ಮಿಂಟನ್

ಚಿರಾಗ್ ಚಂದ್ರಶೇಖರ್ ಶೆಟ್ಟಿ- ಬ್ಯಾಡ್ಮಿಂಟನ್

ವಿಶೇಷ್ ಭೃಗವಂಶಿ- ಬಾಸ್ಕೆಟ್ ಬಾಲ್

ಸುಬೆದಾರ್ ಮನೀಶ್ ಕೌಶಿಕ್ - ಬಾಕ್ಸಿಂಗ್

ಲೋವ್ಲಿನಾ ಬೊರ್ಗೊಹೈನ್- ಬಾಕ್ಸಿಂಗ್

ಇಶಾಂತ್ ಶರ್ಮಾ- ಕ್ರಿಕೆಟ್

ದೀಪ್ತಿ ಶರ್ಮಾ- ಕ್ರಿಕೆಟ್

ಸಾವಂತ್ ಅಜಯ್ ಅನಂತ್- ಈಕ್ವೆಸ್ಟ್ರಿಯನ್

ಸಂದೇಶ್ ಝಿಂಗನ್- ಫುಟ್ಬಾಲ್

ಅದಿತಿ ಅಶೋಕ್- ಗಾಲ್ಫ್

ಆಕಾಶ್ ದೀಪ್ ಸಿಂಗ್- ಹಾಕಿ

ದೀಪಿಕಾ- ಹಾಕಿ

ದೀಪಕ್-ಕಬಡ್ಡಿ

ಕಾಳೆ ಸಾರಿಕಾ ಸುಧಾಕರ್- ಖೋ ಖೋ

ದತ್ತು ಬಾಬನ್ ಭೊಕಾನಲ್- ರೋಯಿಂಗ್

ಮನು ಭಾಕೆರ್- ಶೂಟಿಂಗ್

ಸೌರಭ್ ಚೌಧರಿ- ಶೂಟಿಂಗ್

ಮಧುರಿಕಾ ಸುಹಾಸ್ ಪಟ್ಕರ್- ಟೇಬಲ್ ಟೆನ್ನಿಸ್

ದಿವಿರಾಜ್ ಶರಣ್- ಟೆನ್ನಿಸ್

ಶಿವ ಕೇಶವನ್- ವಿಂಟರ್ ಸ್ಪೋರ್ಟ್ಸ್

ದಿವ್ಯಾ ಕಕ್ರನ್- ಕುಸ್ತಿ

ರಾಹುಲ್ ಅವರೆ- ಕುಸ್ತಿ

ಸುಯಾಶ್ ನಾರಾಯಣ್ ಜಾಧವ್- ಪ್ಯಾರಾ ಸ್ವಿಮ್ಮಿಂಗ್

ಸಂದೀಪ್- ಪ್ಯಾರಾ ಅಥ್ಲೆಟಿಕ್ಸ್

ಮನೀಶ್ ನಾರ್ವಾಲ್- ಪ್ಯಾರಾ ಶೂಟಿಂಗ್

ಧ್ಯಾನ್ ಚಂದ್ ಪ್ರಶಸ್ತಿ

ಧ್ಯಾನ್ ಚಂದ್ ಪ್ರಶಸ್ತಿ

ಕುಲದೀಪ್ ಸಿಂಗ್ ಭುಲ್ಲರ್- ಅಥ್ಲೆಟಿಕ್ಸ್

ಜಿಂಕಿ ಫಿಲಿಪ್ಸ್- ಅಥ್ಲೆಟಿಕ್ಸ್

ಪ್ರದೀಪ್ ಶ್ರೀಕೃಷ್ಣ ಗಾಂಧೆ- ಬ್ಯಾಡ್ಮಿಂಟನ್

ತೃಪ್ತಿ ಮುರುಗುಂದೆ- ಬ್ಯಾಡ್ಮಿಂಟನ್

ಎನ್ ಉಷಾ- ಬಾಕ್ಸಿಂಗ್

ಲಖಾ ಸಿಂಗ್- ಬಾಕ್ಸಿಂಗ್

ಸುಖ್ವಿಂದರ್ ಸಿಂಗ್ ಸಂಧು- ಫುಟ್ಬಾಲ್

ಅಜಿತ್ ಸಿಂಗ್- ಹಾಕಿ

ಮನ್‌ಪ್ರೀತ್ ಸಿಂಗ್- ಕಬಡ್ಡಿ

ಕೆ. ರಂಜಿತ್ ಕುಮಾರ್- ಪ್ಯಾರಾ ಅಥ್ಲೆಟಿಕ್ಸ್

ಸತ್ಯಪ್ರಕಾಶ್ ತಿವಾರಿ- ಪ್ಯಾರಾ ಬ್ಯಾಡ್ಮಿಂಟನ್

ಮಂಜೀತ್ ಸಿಂಗ್ - ರೋಯಿಂಗ್

ಸಚಿನ್ ನಾಗ್- ಈಜು (ಮರಣೋತ್ತರ)

ನಂದನ್ ಪಿ ಬಾಲ್- ಟೆನ್ನಿಸ್

ನೇತ್ರಪಾಲ್ ಹೂಡಾ- ಕುಸ್ತಿ

ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿ

ತೇನ್ ಸಿಂಗ್ ರಾಷ್ಟ್ರೀಯ ಸಾಹಸ ಕ್ರೀಡೆ ಪ್ರಶಸ್ತಿ

ಅನಿತಾ ದೇವಿ- ಭೂ ಸಾಹಸ

ಕರ್ನಲ್ ಸರ್ಫರಾಜ್ ಸಿಂಗ್- ಭೂ ಸಾಹಸ

ಟಕಾ ತಮುಟ್- ಭೂ ಸಾಹಸ

ನರೇಂದರ್ ಸಿಂಗ್- ಭೂ ಸಾಹಸ

ಕೇವಲ್ ಹಿರೆನ್ ಕಕ್ಕಾ- ಭೂ ಸಾಹಸ

ಸತೇಂದ್ರ ಸಿಂಗ್- ಜಲ ಸಾಹಸ

ಗಜಾನಂದ್ ಯಾದವ- ವಾಯು ಸಾಹಸ

ಮಗನ್ ಬಿಸ್ಸಾ- ಜೀವಮಾನ ಸಾಧನೆ

ಅಬ್ದುಲ್ ಕಲಾಂ ಆಜಾದ್ ಮತ್ತು ಖೇಲ್ ಪ್ರೋತ್ಸಾಹಣ್

ಅಬ್ದುಲ್ ಕಲಾಂ ಆಜಾದ್ ಮತ್ತು ಖೇಲ್ ಪ್ರೋತ್ಸಾಹಣ್

ಮೌಲಾನಾ ಅಬ್ದುಲ್ ಕಲಾಂ ಆಜಾದ್ ಟ್ರೋಫಿ- ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಡ

ರಾಷ್ಟ್ರೀಯ ಖೇಲ್ ಪ್ರೋತ್ಸಾಹಣ್ ಪುರಸ್ಕಾರ

A. ಬೆಳೆಯುತ್ತಿರುವ ಮತ್ತು ಯುವ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಪೋಷಣೆ- 1. ಲಕ್ಷ್ಯ ಸಂಸ್ಥೆ, 2. ಸೇನಾ ಕ್ರೀಡಾ ಸಂಸ್ಥೆ.

B. ಸಾಮಾಜಿಕ ಜವಾಬ್ದಾರಿಯ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುವುದು- ಒಎನ್‌ಜಿಸಿ ಲಿಮಿಟೆಡ್.

C. ಕ್ರೀಡಾ ವ್ಯಕ್ತಿಗಳಿಗೆ ಉದ್ಯೋಗ ಮತ್ತು ಕ್ರೀಡಾ ಅಭಿವೃದ್ಧಿ ಕ್ರಮಗಳು- ವಾಯು ಪಡೆ ಕ್ರೀಡಾ ನಿಯಂತ್ರಣ ಮಂಡಳಿ.

D. ಅಭಿವೃದ್ಧಿಗಾಗಿ ಕ್ರೀಡೆ- ಅಂತಾರಾಷ್ಟ್ರೀಯ ಕ್ರೀಡಾ ನಿರ್ವಹಣಾ ಸಂಸ್ಥೆ (ಐಐಎಸ್‌ಎಂ)

English summary
National Sports Awards 2020: Full list of Khel Ratna, Arjuna, Dronacharya award and Other awards winners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X