ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತದ ಬ್ಯಾಂಕಿಂಗ್ ಬಗ್ಗೆ ಜನರ ನಿರೀಕ್ಷೆಗಳೇನು ತಿಳಿಯಿರಿ, ತಲುಪಿರಿ'

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ನವದೆಹಲಿ, ಆಗಸ್ಟ್ 23: ಜನರ ನಿರೀಕ್ಷೆಯೊಂದಿಗೆ ನಮ್ಮ ಆರ್ಥಿಕತೆ ಬೆಳೆಯುತ್ತಿದೆ. ನಮ್ಮದು ಅಭಿವೃದ್ಧಿ ಹೊಂದಿದ ದೇಶ ಆಗಬೇಕು ಎಂಬುದು ಅವರ ಅಭಿಲಾಷೆ. ನಮ್ಮ ನಾಯಕರಿಂದ ಅವರು ಅದನ್ನೇ ನಿರೀಕ್ಷೆ ಮಾಡುತ್ತಾರೆ. ಆ ಆಕಾಂಕ್ಷೆಯು ನಮ್ಮ ದೇಶದ ಜನರಿಗೆ ಬಹಳ ಮುಖ್ಯ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ನ ಪ್ರಧಾನ ಕಾರ್ಯದರ್ಶಿ ಸುನೀಲ್ ಅಂಬೇಕರ್ ಹೇಳಿದರು.

ಇಲ್ಲಿ ನಡೆಯುತ್ತಿರುವ ಎರಡು ದಿನಗಳ ಭಾರತೀಯ ಬ್ಯಾಂಕಿಂಗ್ ಸಮಾವೇಶದಲ್ಲಿ (ಐಬಿಸಿ) ಗುರುವಾರ ಮಾತನಾಡಿದ ಅವರು, ಐಐಟಿ ಹಾಗೂ ಎನ್ ಐಟಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ನಂತರ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜನರ ಆಕಾಂಕ್ಷೆ ಹಾಗೂ ನಿರೀಕ್ಷೆಗಳು ಬಹಳ ಎತ್ತರದಲ್ಲಿವೆ ಎಂಬ ಮಾತನ್ನು ನಾನು ಹೇಳಬಲ್ಲೆ ಎಂದರು.

ಆಗಸ್ಟ್ 23, 24ಕ್ಕೆ ದೆಹಲಿಯಲ್ಲಿ ಬ್ಯಾಂಕಿಂಗ್ ಸಮಾವೇಶ, ನಿರೀಕ್ಷೆಗಳೇನು?ಆಗಸ್ಟ್ 23, 24ಕ್ಕೆ ದೆಹಲಿಯಲ್ಲಿ ಬ್ಯಾಂಕಿಂಗ್ ಸಮಾವೇಶ, ನಿರೀಕ್ಷೆಗಳೇನು?

ಇತಿಹಾಸದ ವಿದ್ಯಾರ್ಥಿಗಳು ಕೂಡ ಪ್ರವಾಸೋದ್ಯಮದ ಬಗ್ಗೆ ಓದುವುದಕ್ಕೆ ಬಯಸುತ್ತಾರೆ. ಮತ್ತು ಅದು ಆಗುತ್ತಿದೆ. ಬಾಲಿವುಡ್ ಎಂಬುದು ಅಸಂಘಟಿತ ವಲಯ. ಅಲ್ಲಿ ಬ್ಯಾಂಕಿಂಗ್ ಪ್ರಮುಖ ಪಾತ್ರ ವಹಿಸಬಹುದು. ಕಾರ್ಖಾನೆಗಳಲ್ಲಿ ಮಾತ್ರವಲ್ಲ, ಉತ್ಪಾದನೆ ಮತ್ತು ಸೇವಾ ವಲಯದ ಆಚೆಗೂ ಬೇರೆ ವಲಯದ ಮೂವತ್ತು ಕೋಟಿ ಮಂದಿಗೆ ಸೇವೆ ಒದಗಿಸಬಹುದು ಎಂದರು.

National security is as important as financial security, said Kiran Rijiju

ಎಲ್ಲರೂ ಭಾಗವಹಿಸದ ಹೊರತು ಅಭಿವೃದ್ಧಿ ನಿರೀಕ್ಷೆ ಮಾಡುವುದಕ್ಕೆ ಆಗಲ್ಲ. ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಜಗತ್ತಿನಾದ್ಯಂತ ಜನರು ಗ್ರಾಮೀಣ ಪ್ರದೇಶಗಳ ಬಗ್ಗೆ ಅಧ್ಯಯನ ಹಾಗೂ ಸಮೀಕ್ಷೆ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಂದಲೇ ದೇಶಕ್ಕೆ ಮುಖ್ಯವಾದ ಕೊಡುಗೆಗಳು ಬರುತ್ತವೆ ಎಂದು ಹೇಳಿದರು.

ಜನ್ ಧನ್ ಯೋಜನೆ, ಜಿಎಸ್ ಟಿ, ಅಪನಗದೀಕರಣ ಮತ್ತು ಇತರ ಯೋಜನೆಗಳಿಗೆ ಬ್ಯಾಂಕ್ ಗಳು ಶಾಕ್ ಅಬ್ಸರ್ವರ್ ನಂತೆ ಒತ್ತಡ ಹೊತ್ತಿಕೊಂಡಿವೆ. ನಾವೀಗ ಭವಿಷ್ಯದ ಸವಾಲು ಎದುರಿಸಲು ಸಿದ್ಧರಿದ್ದೇವೆ. ಹಲವು ಹಂತ, ಹಲವು ಪದರ, ಕಾರ್ಪೊರೇಟ್, ಖಾಸಗಿ, ಸಹಕಾರಿ, ಕ್ರೆಡಿಟ್ ಕೋ ಆಪರೇಟಿವ್ ಹಾಗೂ ಸ್ವಸಹಾಯ ಗುಂಪುಗಳು ದೇಶಕ್ಕೆ ಅಗತ್ಯ. ನಮಗೆ ಎಲ್ಲ ರೀತಿಯ ಬ್ಯಾಂಕಿಂಗ್ ಅಗತ್ಯ. ನಾವೀಗ ಜಾತಿರಹಿತ ವ್ಯವಸ್ಥೆ ಕಡೆ ಸಾಗುತ್ತಿದೆ ಎಂದು ಅಂಬೇಕರ್ ಅಭಿಪ್ರಾಯಪಟ್ಟರು.

ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 'ನೀಲಕಂಠ'ನಾಗಲೂ ಸಿದ್ಧ: ಊರ್ಜಿತ್ಬ್ಯಾಂಕಿಂಗ್ ವ್ಯವಸ್ಥೆ ಸರಿಪಡಿಸಲು 'ನೀಲಕಂಠ'ನಾಗಲೂ ಸಿದ್ಧ: ಊರ್ಜಿತ್

ಬ್ಯಾಂಕಿಂಗ್ ಗಳ ಬಗ್ಗೆ ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸರಿಯಾಗಿ ಕಲಿಸುತ್ತಿಲ್ಲ. ಹೊಸ ಶಿಕ್ಷಣ ವ್ಯವಸ್ಥೆ ತಂದು ದೊಡ್ಡ ಮಟ್ಟದಲ್ಲೇ ಬ್ಯಾಂಕಿಂಗ್ ನ ಸವಾಲು ಎದುರಿಸುವುದನ್ನು ಕಲಿಸಿಕೊಡಬೇಕಾಗಿದೆ. ಅದಕ್ಕೆ ಏನು ಬೇಕು, ಅದಕ್ಕೆ ಮಾನವ ಸಂಪನ್ಮೂಲ, ನೀತಿಗಳ ಬಗ್ಗೆ ತಿಳಿಸಬೇಕು. ಕಾರ್ಪೊರೇಟ್ ಬ್ಯಾಂಕಿಂಗ್ ಹೊರತಾದ ಇತರ ಸಾಧ್ಯತೆಗಳನ್ನೂ ಕಲಿಸಬೇಕು ಎಂದರು.

ಗೃಹ ಖಾತೆ ರಾಜ್ಯ ಸಚಿವ ಕಿರನ್ ರಿಜಿಜು ಮಾತನಾಡಿ, ಆರ್ಥಿಕ ಭದ್ರತೆಯಷ್ಟೇ ರಾಷ್ಟ್ರೀಯ ಸುರಕ್ಷತೆಯೂ ಮುಖ್ಯ. ಆರ್ಥಿಕ ಸುರಕ್ಷತೆ ಇಲ್ಲದೆ ನಾನು ಹೆಮ್ಮೆಯ ನಾಗರಿಕ ಅಂತ ಹೇಳಿಕೊಳ್ಳಲು ಆಗಲ್ಲ. "ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ಖಾತೆ ತೆರೆದದ್ದರ ಸಂಖ್ಯೆ P 19. ಇದರರ್ಥ ಬಹಳ ಮಂದಿ ಬ್ಯಾಂಕಿಂಗ್ ವಲಯದಿಂದ ದೂರ ಉಳಿದಿದ್ದಾರೆ" ಎಂದರು.

"ಗ್ಲೋಬಲ್ 500ರ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಅಲ್ಲಿ ಒಟ್ಟಾರೆ ಏಳು ಕಂಪೆನಿ ಇದೆ. ಆದರೆ 100ರ ಪಟ್ಟಿಯಲ್ಲಿ ಭಾರತೀಯ ಬ್ಯಾಂಕ್ ಗಳು ಏಕಿಲ್ಲ. ಚೀನಾದ ಎರಡು ಬ್ಯಾಂಕ್ ಗಳಿವೆ. ಅವು ವಿಶ್ವ ಬ್ಯಾಂಕ್ ಗಿಂತ ಹೆಚ್ಚಿನ ಸಾಲ ನೀಡಿವೆ. ನಾವೀಗ 32 ಕೋಟಿ ಬ್ಯಾಂಕ್ ಖಾತೆ ದಾಟಿದ್ದೇವೆ. ಆದರೂ ಜನಸಾಮಾನ್ಯರಿಗೆ ಇನ್ನೂ ಇದೇಕೆ ತಲುಪಿಲ್ಲ?" ಎಂದು ಪ್ರಶ್ನಿಸಿದರು.

ನೀರವ್ ಮೋದಿ ಪರಿಣಾಮ: 'ಎಲ್ಒಯು', 'ಎಲ್ಒಸಿ' ಸೇವೆ ಸ್ಥಗಿತನೀರವ್ ಮೋದಿ ಪರಿಣಾಮ: 'ಎಲ್ಒಯು', 'ಎಲ್ಒಸಿ' ಸೇವೆ ಸ್ಥಗಿತ

ಅನುತ್ಪಾದಕ ಆಸ್ತಿ ವಿಚಾರವಾಗಿ ತೆಗೆದುಕೊಂಡ ಕೆಲ ದಿಟ್ಟ ನಿರ್ಧಾರಗಳಿಂದ ಫಲಿತಾಂಶ ಕಾಣುತ್ತಿದ್ದೇವೆ. ಆದರೆ ಈ ಕ್ರಮಗಳಿಂದ ಕೆಲವರಿಗೆ ಅಸಹನೆ ಆಗುತ್ತಿದೆ. "ಕಷ್ಟದ ಸಮಯದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ದೇಶ ಎದುರಿಸುತ್ತಿರುವ ಕಾಯಿಲೆಯ ಆಪರೇಷನ್ ಆಗಬೇಕು ಮತ್ತು ನಾವು ಭವಿಷ್ಯದಲ್ಲಿ ಆರೋಗ್ಯವಂತರಾಗಿ ಹೊರ ಹೊಮ್ಮುತ್ತೇವೆ" ಎಂದು ರಿಜಿಜು ಹೇಳಿದರು.

ಅದೇ ರೀತಿ ಜಿಎಸ್ ಟಿ ಕೂಡ ಬಹಳ ಮುಖ್ಯ. ಯಾರೋ ಕೆಲವರಿಗೆ ಅಸಮಾಧಾನ ಅನ್ನೋ ಕಾರಣಕ್ಕೆ ದೇಶದಲ್ಲಿ ಅದನ್ನು ತಡೆಯಲು ಸಾಧ್ಯವಿಲ್ಲ. "ನಮ್ಮ ಮೂಲ ಜನ ಕಲ್ಯಾಣ ಯೋಜನೆಗಳು ಬ್ಯಾಂಕಿಂಗ್ ಇಲ್ಲದಿದ್ದರೆ ವಿಫಲವಾಗುತ್ತದೆ. ಭಾರತ ಸರಕಾರದ ಯಶಸ್ಸಿಗಾಗಿ ಬ್ಯಾಂಕಿಂಗ್ ಹೆಚ್ಚುವರಿ ಹೆಜ್ಜೆಗಳನ್ನು ಇರಿಸಬೇಕು" ಎಂದು ಅವರು ಅಭಿಪ್ರಾಯ ಪಟ್ಟರು.

English summary
Union minister of state for Home Kiran Rijiju said in IBC, New Delhi (Indian Banking Conclave 2018) that, National security is as important as financial security, you cannot claim to be a proud citizen unless financial security is there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X