ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019-20ರಲ್ಲಿ ವಿವಿಧ ಪಕ್ಷಗಳಿಗೆ ಹರಿದು ಬಂದ ದೇಣಿಗೆಯ ಪಟ್ಟಿ: ಹಣದ ಮೂಲ ಯಾವುದಯ್ಯಾ?

|
Google Oneindia Kannada News

ನವದೆಹಲಿ, ಫೆ 5: ವಿವಿಧ ರಾಜಕೀಯ ಪಕ್ಷಗಳಿಗೆ 2019-20ರಲ್ಲಿ ಅಧಿಕೃತವಾಗಿ ಹರಿದು ಬಂದ ದೇಣಿಗೆ (ಇಲೆಕ್ಟೋರಾಲ್ ಬಾಂಡ್ ಸೇರಿ) ಮೊತ್ತ ಎಷ್ಟು? ಹಣದ ಮೂಲ ಯಾವುದು ಎನ್ನುವ ವಿಷಯ ಬಹಿರಂಗಗೊಂಡಿದೆ.

ಏಪ್ರಿಲ್ 2019ರಿಂದ ಮಾರ್ಚ್ 20ರ ಅವಧಿಯ ಲೆಕ್ಕಾಚಾರ ಇದಾಗಿದ್ದು, ಈ ವೇಳೆ ಸಾರ್ವತ್ರಿಕ ಚುನಾವಣೆಯೂ ನಡೆದಿದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಉದಾರವಾಗಿ ದೇಣಿಗೆ ಬಂದಿದೆ.

"ಬಂಗಾರದಂತಾ ಭಾರತ ನಾಶಪಡಿಸಿದ ನಂತರ ಬಂಗಾಳಕ್ಕೆ ಬಿಜೆಪಿ"

ಇದು ಅಧಿಕೃತವಾಗಿ ದೇಣಿಗೆಯ ಲೆಕ್ಕಾಚಾರವಾಗಿದ್ದು, ಅನಧಿಕೃತವಾಗಿ ಇನ್ನೆಷ್ಟು ಬಂದಿದೆಯೋ ಅದರ ಬಗ್ಗೆ ಮಾಹಿತಿಯಿಲ್ಲ. ಆಯಾಯ ಪಕ್ಷಗಳ ಮುಖಂಡರೂ ತಮ್ಮ ಪಾರ್ಟಿಗಳಿಗೆ ದೇಣಿಗೆ ನೀಡಿದ ಲೆಕ್ಕಾಚಾರವೂ ಇದರಲ್ಲಿದೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನ ಬಿಜೆಪಿ ಪಡೆದುಕೊಂಡಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಾರ್ಟಿಯನ್ನು ಹಿಂದಕ್ಕೆ ಹಾಕಿರುವುದು ವಿಶೇಷ. ಯಾವಯಾವ ಪಕ್ಷಗಳಿಗೆ ಬಂದ ದೇಣಿಗೆ ಎಷ್ಟು, ಕೊಟ್ಟವರು ಯಾರು ಎನ್ನುವ ಮಾಹಿತಿಯನ್ನು ಸ್ಲೈಡ್ ನಲ್ಲಿ ಮುಂದುವರಿಸಲಾಗಿದೆ ( ಚುನಾವಣಾ ಆಯೋಗದ ಮಾಹಿತಿಯಂತೆ)

ಚುನಾವಣಾ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ ಬಿಜೆಪಿಗೆ ಎದುರಾದ ಆತಂಕ: ಮಹತ್ವದ ತೀರ್ಮಾನ ಚುನಾವಣಾ ಹೊಸ್ತಿಲಲ್ಲಿ ಪಶ್ಚಿಮ ಬಂಗಾಳ ಬಿಜೆಪಿಗೆ ಎದುರಾದ ಆತಂಕ: ಮಹತ್ವದ ತೀರ್ಮಾನ

ಭಾರತೀಯ ಜನತಾ ಪಾರ್ಟಿ

ಭಾರತೀಯ ಜನತಾ ಪಾರ್ಟಿ

ವಿವಿಧ ಪಕ್ಷಗಳಿಗೆ ಹರಿದು ಬಂದ ದೇಣಿಗೆಯ ಮಾಹಿತಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ್ದು, ಆಡಳಿತಾರೂಢ ಬಿಜೆಪಿಗೆ ಈ ಅವಧಿಯಲ್ಲಿ 1,450 ಕೋಟಿ ರೂಪಾಯಿ ಬಂದಿದೆ. ಆದರೆ, ಈ ಮಾಹಿತಿ ಇನ್ನೂ ಆಯೋಗದ ವೆಬ್ಸೈಟ್ ನಲ್ಲಿ ಅಪ್ಡೇಟ್ ಆಗಬೇಕಷ್ಟೇ.. ಎಲ್ಫಿನ್ ಸ್ಟೋನ್, ಪ್ರುಡೆನ್ಸಿಯಲ್, ಐಟಿಸಿ, ಶಿರ್ಕೆ ಸಂಸ್ಥೆಗಳು 18-19ರ ಅವಧಿಯಲ್ಲಿ ಬಿಜೆಪಿಗೆ ದೇಣಿಗೆ ನೀಡಿದ ಪ್ರಮುಖ ಸಂಸ್ಥೆಗಳಾಗಿದ್ದವು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

2019-20ರಲ್ಲಿ ಕಾಂಗ್ರೆಸ್ಸಿಗೆ ಬಂದಿದ್ದು 139 ಕೋಟಿ. ಇದರಲ್ಲಿ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಒಬ್ಬರೇ ಮೂರು ಕೋಟಿ ರೂಪಾಯಿಯನ್ನು ನೀಡಿದ್ದಾರೆ. ಐಟಿಸಿ ಸಂಸ್ಥೆ 19 ಕೋಟಿ, ಪ್ರುಡೆನ್ಸಿಯಲ್ 31 ಕೋಟಿ, ಮನಮೋಹನ್ ಸಿಂಗ್ ಒಂದು ಲಕ್ಷ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಒಟ್ಟು ಸೇರಿ ಒಂದು ಲಕ್ಷ ರೂಪಾಯಿಯನ್ನು ಈ ಅವಧಿಯಲ್ಲಿ ನೀಡಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್

ಚುನಾವಣೆಯ ಹೊಸ್ತಿಲಲ್ಲಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ಗದ್ದುಗೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ 143 ಕೋಟಿ ರೂಪಾಯಿ ದೇಣಿಗೆ ಈ ಅವಧಿಯಲ್ಲಿ ಬಂದಿದೆ. ಇದರಲ್ಲಿ ನೂರು ಕೋಟಿ ರೂಪಾಯಿ ಇಲೆಕ್ಟರಾಲ್ ಬಾಂಡ್ ಮೂಲಕ ಬಂದಿದೆ.

ತೆಲುಗುದೇಶಂ

ತೆಲುಗುದೇಶಂ

ಬಹುಜನ ಸಮಾಜ ಪಕ್ಷ (ಬಿಎಸ್ಪಿ) - ಮಾಹಿತಿಯಿಲ್ಲ
ಎನ್ಸಿಪಿ (ಶರದ್ ಪವಾರ್) - 59.94 ಕೋಟಿ
ತೆಲುಗುದೇಶಂ - 81.6 ಕೋಟಿ
ಬಿಜು ಜನತಾದಳ - 50 ಕೋಟಿ
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) - 6.5 ಕೋಟಿ
ಸಂಯುಕ್ತ ಜನತಾದಳ (ಜೆಡಿಯು) - 13 ಕೋಟಿ

ಜೆಡಿಎಸ್ಸಿಗೆ ಎಷ್ಟು ದೇಣಿಗೆ ಬಂತು

ಜೆಡಿಎಸ್ಸಿಗೆ ಎಷ್ಟು ದೇಣಿಗೆ ಬಂತು

ಜಾತ್ಯಾತೀತ ಜನತಾದಳ (ಜೆಡಿಎಸ್) - 7.5 ಕೋಟಿ
ಎಐಎಡಿಎಂಕೆ - 6.5 ಕೋಟಿ
ಶಿರೋಮಣಿ ಅಕಾಲಿದಳ - 6.7 ಕೋಟಿ
ಇಂಡಿಯನ್ ಮುಸ್ಲಿಂಲೀಗ್ - 13.16 ಕೋಟಿ
ಭಾರತೀಯ ಲೋಕದಳ - 51.50 ಲಕ್ಷ
ಓವೈಸಿ ಪಕ್ಷ - 13.85 ಲಕ್ಷ

English summary
National And Regional Parties Fund Collected Details For The Period 2019-2020,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X