ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಪಿಂಚಣಿ ಯೋಜನೆ ವಯೋಮಿತಿ ಏರಿಕೆ

By Mahesh
|
Google Oneindia Kannada News

ನವದೆಹಲಿ, ಸೆ. 12: ರಾಷ್ಟ್ರೀಯ ಪಿಂಚಣಿ ಯೋಜನೆಯ ವಯೋಮಿತಿಯನ್ನು 60ರಿಂದ 65ಕ್ಕೆ ಏರಿಸಲಾಗಿದೆ ಎಂದು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (PFRDA) ಸೋಮವಾರ ಹೇಳಿದೆ.

ಸಮಾವೇಶವೊಂದರಲ್ಲಿ ಮಾತನಾಡಿದ ಪಿಎಫ್‌ಆರ್‌ಡಿಎಯ ಅಧ್ಯಕ್ಷ ಹೇಮಂತ್ ಕಾಂಟ್ರಾಕ್ಟರ್, ಈ ಬದಲಾವಣೆಗೆ ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿದೆ ಹಾಗೂ ಈ ಬಗ್ಗೆ ಶೀಘ್ರದಲ್ಲಿ ಅಧಿಸೂಚನೆ ನೀಡಲಾಗುವುದು ಎಂದರು.

National Pension Scheme upper age limit raised to 65, says regulator

ಈಗ ರಾಷ್ಟ್ರೀಯ ಪಿಂಚಣಿ ಯೋಜನೆ 18ರಿಂದ 60 ವರ್ಷದ ಜನರಿಗೆ ಮುಕ್ತವಾಗಿದೆ. ವಯೋಮಿತಿಯನ್ನು 65ಕ್ಕೆ ಏರಿಸಲು ಮಂಡಳಿ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

ಗ್ರಾಹಕ ಸ್ನೇಹಿ ಹಾಗೂ ಎನ್‌ಪಿಎಸ್ ಅನ್ನು ಹೆಚ್ಚು ಆಕರ್ಷಣೀಯಗೊಳಿಸುವ ಮೂಲಕ ಪಿಂಚಣಿ ನಿಧಿಯನ್ನು ವರ್ಗಾಯಿಸುವ ಸೌಲಭ್ಯ ಒದಗಿಸುವುದು ಇದರ ಉದ್ದೇಶ. ಪಿಂಚಣಿ ಯೋಜನೆಯಲ್ಲಿ ಸುಧಾರಣೆ ತರಲಾಗುತ್ತಿದೆ ಎಂದು ಹೇಮಂತ್ ಕಾಂಟ್ರಾಕ್ಟರ್ ಅವರು ಹೇಳಿದರು.

English summary
The Pension Fund Regulatory and Development Authority (PFRDA) on Monday announced that the upper age limit for joining the National Pension Scheme (NPS) had been raised to 65 years, from the current 60.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X