ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಮಟ್ಟದ ಈಜುಗಾರ್ತಿ ನೇಣುಬಿಗಿದುಕೊಂಡು ಆತ್ಮಹತ್ಯೆ

By Mahesh
|
Google Oneindia Kannada News

ಕೋಲ್ಕತಾ, ಮೇ 01: ರಾಷ್ಟ್ರಮಟ್ಟದ ಈಜುಗಾರ್ತಿ ಮೌಪ್ರಿಯಾ ಮಿತ್ರ ಅವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರಮಟ್ಟದ ಡೈವಿಂಗ್ ಪಟುವಾಗಿದ್ದರು.

ಕೋಲ್ಕತ್ತಾದಿಂದ 50 ಕಿ.ಮೀ ದೂರದ ಹೂಗ್ಲಿ ಜಿಲ್ಲೆಯ ತಮ್ಮ ನಿವಾಸದಲ್ಲಿ 15 ವರ್ಷ ವಯಸ್ಸಿನ ಮೌಪ್ರಿಯಾ ಮಿತ್ರ ಅವರು ಸೋಮವಾರದಂದು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಐಐಟಿ - ಕಾನ್ಪುರದ ದಲಿತ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಐಐಟಿ - ಕಾನ್ಪುರದ ದಲಿತ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ

ಅವರನ್ನು ಚಿನ್ಸುರಾ ಇಮಾಂಬರ ಆಸ್ಪತ್ರೆಯಲ್ಲಿ ಮರಣೋತ್ತರ ಚಿಕಿತ್ಸೆ ನಡೆಸಲಾಗಿದ್ದು, ಅಟಾಪ್ಸಿ ವರದಿಗಾಗಿ ಕಾಯಲಾಗುತ್ತಿದೆ. ಮೌಪ್ರಿಯಾ ಅವರು ಬಂಡೆಲ್ ಮನ್ಸುಪುರ ಪ್ರದೇಶದಲ್ಲಿರುವ ತಮ್ಮ ಮನೆಯ ರೂಮಿನಲ್ಲಿರುವ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

National-Level Swimmer Allegedly Commits Suicide In Bengal

ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ.

ಮೌಪ್ರಿಯಾ ಮಿತ್ರ ಅವರು ದಕ್ಷಿಣ ಏಷ್ಯಾ ಈಜು ಸ್ಪರ್ಧೆ(SAAC) ಯಲ್ಲಿ ಭಾರತವನ್ನು ಪ್ರತಿನಿಧಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಮಾನಸಿಕ ಒತ್ತಡ ತಾಳಲಾರದೆ ವಾರ್ತಾವಾಚಕಿ ಆತ್ಮಹತ್ಯೆ ಮಾನಸಿಕ ಒತ್ತಡ ತಾಳಲಾರದೆ ವಾರ್ತಾವಾಚಕಿ ಆತ್ಮಹತ್ಯೆ

10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೌಪ್ರಿಯಾ ಅವರು ಜಿಮ್ನಾಸ್ಟಿಕ್ ಪಟುವಾಗಿದ್ದರು. ಆದರೆ, ಅಪಘಾತವೊಂದರಲ್ಲಿ ಕಾಲಿಗೆ ಪೆಟ್ಟಾಗಿದ್ದರಿಂದ ಜಿಮ್ನಾಸ್ಟಿಕ್ ಅಭ್ಯಾಸ ನಿಲ್ಲಿಸಿದ್ದರು. ನಂತರ ಈಜುಪಟುವಾಗಿ ಡೈವಿಂಗ್ ಅಭ್ಯಾಸ ಮಾಡಿದ್ದರು.

English summary
National-Level Swimmer Moupriya Mitra Allegedly Commits Suicide In Bengal. She Was 15. A national level diver from West Bengal allegedly committed suicide at her residence in Hoogly district, 50 km from Kolkata, police said on Monday. The police recovered her body and sent it to Chinsura Imambara Hospital for an autopsy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X