ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಳ:NFHS ಸಮೀಕ್ಷೆ

|
Google Oneindia Kannada News

ನವದೆಹಲಿ, ನವೆಂಬರ್ 25: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್‌ಎಫ್‌ಎಚ್‌ಎಸ್) ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದೆ.

ಭಾರತವು ಈಗ ಪ್ರತಿ 1000 ಪುರುಷರಿಗೆ 1020 ಮಹಿಳೆಯರನ್ನು ಹೊಂದಿದೆ, ಇನ್ನುಮುಂದೆ ಜನಸಂಖ್ಯಾ ಸ್ಫೋಟದ ಬೆದರಿಕೆ ಇಲ್ಲ ಎಂದು ಸಮೀಕ್ಷೆ ಹೇಳಿದೆ.

ಕೋವಿಡ್-19 ಪ್ರಾರಂಭವಾಗುತ್ತಿದ್ದಂತೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಹೆಚ್‌ಎಸ್) ಕೆಲಸ ನಿಲ್ಲಿಸಲಾಗಿತ್ತು. ಕಳೆದ ವರ್ಷ 2020ರ ಜುಲೈ ವೇಳೆಗೆ ಬಿಡುಗಡೆಯಾಗಬೇಕಿದ್ದ ಎನ್‌ಎಫ್‌ಹೆಚ್‌ಎಸ್-5ರ ಡೇಟಾವನ್ನು ಭಾರತದ ಆರೋಗ್ಯ ಸಚಿವಾಲಯವು ಡಿಸೆಂಬರ್ 12, 2020ರಂದು ಬಿಡುಗಡೆ ಮಾಡಿತ್ತು. ಇದೀಗ ಈ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

National Family And Health Survey: More Women Than Men In India

ಎನ್‌ಎಫ್‌ಎಚ್‌ಎಸ್ ಒಂದು ಮಾದರಿ ಸಮೀಕ್ಷೆಯಾಗಿದೆ, ಮುಂದಿನ ರಾಷ್ಟ್ರೀಯ ಜನಗಣತಿ ನಡೆಸಿದಾಗ ಖಚಿತವಾಗಿ ಹೇಳಬಹುದು. 1990ರ ವೇಳೆಗೆ ಭಾರತದಲ್ಲಿ 1000 ಪುರುಷರಿಗೆ 927 ಮಹಿಳೆಯರಿದ್ದರು, 2005-06ರ ಸಮೀಕ್ಷೆಯ ಸಂದರ್ಭದಲ್ಲಿ 1000:1000 ಮಹಿಳೆಯರಿದ್ದರು, 2015-16ರ ಸಮೀಕ್ಷೆ ಸಂದರ್ಭದಲ್ಲಿ ಅದು ಇಳಿಕೆಯಾಗಿ 1000 ಪುರುಷರಿಗೆ 991 ಮಹಿಳೆಯರಿದ್ದರು. ಎನ್‌ಎಫ್‌ಎಚ್‌ಎಸ್‌ನ ಸಮೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಐದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಗಳು :

ಎನ್‌ಎಫ್‌ಹೆಚ್‌ಎಸ್ -1: 1992-93

ಎನ್‌ಎಫ್‌ಹೆಚ್‌ಎಸ್ -2: 1998-99

ಎನ್‌ಎಫ್‌ಹೆಚ್‌ಎಸ್ -3: 2005-06

ಎನ್‌ಎಫ್‌ಹೆಚ್‌ಎಸ್ -4: 2015-16

ಎನ್‌ಎಫ್‌ಹೆಚ್‌ಎಸ್ -5: 2019-20

ಎನ್‌ಎಫ್‌ಎಚ್‌ಎಸ್-6: 2020-2021

ಎನ್‌ಎಫ್‌ಹೆಚ್‌ಎಸ್-5 : ಕಳೆದ ವರ್ಷ ಎನ್‌ಎಫ್‌ಹೆಚ್‌ಎಸ್-5 ಪ್ರಾರಂಭಿಸಲಾಯಿತು. ಜನಸಂಖ್ಯೆ ಮತ್ತು ಮನೆಯ ವಿವರ, ಮದುವೆ ಮತ್ತು ಮಕ್ಕಳು, ಕುಟುಂಬ ಯೋಜನೆ, ಗರ್ಭನಿರೋಧಕ, ತಾಯಿಯ ಮತ್ತು ಮಕ್ಕಳ ಆರೋಗ್ಯ, ಬಾಣಂತಿ ಹಾಗೂ ಮಗುವಿನ ಆರೈಕೆ, ವ್ಯಾಕ್ಸಿನೇಷನ್ ಮತ್ತು ಬಾಲ್ಯದ ಕಾಯಿಲೆಗಳ ಚಿಕಿತ್ಸೆ, ಪೋಷಣೆ ಮತ್ತು ಆಹಾರ ಪದ್ಧತಿಗಳು, ರಕ್ತಹೀನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ಚಿಕಿತ್ಸೆ ಸೇರಿದಂತೆ 67 ವಿಚಾರಗಳ ಮಾಹಿತಿಯನ್ನು ಏಳು ದಶಲಕ್ಷ ಕುಟುಂಬಗಳು ನೀಡಿವೆ.

ಎನ್‌ಎಫ್‌ಹೆಚ್‌ಎಸ್-5 ಮತ್ತು ಮಕ್ಕಳ ಆರೋಗ್ಯ, ಕುಟುಂಬ ಯೋಜನೆ, ಆರೋಗ್ಯ ವಿಮೆ ಮತ್ತು ಪೋಷಣೆಯ ಕುರಿತು ಅಗತ್ಯ ಮಾಹಿತಿ ಒದಗಿಸುತ್ತದೆ. ಎನ್‌ಎಫ್‌ಹೆಚ್‌ಎಸ್ -5 2019-2020ರ ಅವಧಿಯದ್ದಾಗಿದೆ. ಭಾರತ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜನಸಂಖ್ಯೆ, ಆರೋಗ್ಯ ಮತ್ತು ಪೋಷಣೆಯ ಕುರಿತಾದ ವಿವರವಾದ ಮಾಹಿತಿ ನೀಡಿದೆ.

ಈ ಸಮೀಕ್ಷೆಯ ಬಳಿಕ ಅಪೌಷ್ಟಿಕತೆಯು ಕಳವಳಕಾರಿಯಾಗಿದೆ ಎಂದು ತಿಳಿದು ಬಂದಿದೆ. ಯಾಕೆಂದರೆ, 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪೈಕಿ 5ರಲ್ಲಿ ಆಹಾರ ವ್ಯರ್ಥ ಮಾಡುವ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ ಎಂದು ಎನ್‌ಎಫ್‌ಹೆಚ್‌ಎಸ್ -5 ತಿಳಿಸಿದೆ.

ಎನ್‌ಎಫ್‌ಎಚ್‌ಎಸ್‌ ಅನ್ನು 2019-2021ರ ನಡುವೆ ಎರಡು ಹಂತಗಳಲ್ಲಿ ನಡೆಸಲಾಯಿತು, ದೇಶದ 707 ಜಿಲ್ಲೆಗಳಿಂದ 650,000 ಕುಟುಂಬಗಳನ್ನು ಈ ಸಮೀಕ್ಷೆ ಒಳಗೊಂಡಿದೆ.

ಎರಡನೇ ಸಮೀಕ್ಷೆಯಲ್ಲಿ ಅರುಣಾಚಲಪ್ರದೇಶ, ಚಂಡೀಗಢ, ಹರ್ಯಾಣ, ಜಾರ್ಖಂಡ್, ಮಧ್ಯಪ್ರದೇಶ, ದೆಹಲಿ, ಒಡಿಶಾ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳನ್ನು ಒಳಗೊಂಡಿದೆ.

ಕಳೆದ ಸಮೀಕ್ಷೆಯ ಕುರಿತು ಮಾಹಿತಿ: ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶೇ.30ರಷ್ಟು ಮಹಿಳೆಯರು ದೈಹಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ. 5 ನೇ ಹಂತದ ರಾಷ್ಟ್ರೀಯ ಕುಟುಂಬ ಆಯೋಗ ಸಮೀಕ್ಷೆಯಿಂದ ಈ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈ ಸಮೀಕ್ಷೆಯನ್ನು ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಟಿಕತೆ ಸಂಬಂಧಿತ ಸೂಚಕಗಳ ಮಾಹಿತಿ ಸಂಗ್ರಹಿಸುವ ಸಲುವಾಗಿ ಕುಟುಂಬ ಮಟ್ಟದ ಸಂದರ್ಶನಗಳನ್ನು ಒಳಗೊಂಡಂತೆ 6 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಒಳಗೊಂಡತೆ ಸಮೀಕ್ಷೆಯನ್ನು ನಡೆಸಲಾಗಿದೆ.

ಮಕ್ಕಳು, ಪುರುಷರು, ಹೆಣ್ಣುಮಕ್ಕಳ ಆರೋಗ್ಯ ಆಘಾತಕಾರಿ ಸ್ಥಿತಿಯಲ್ಲಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ರಕ್ತ ಹೀನತೆಯಿಂದ ಬಾಲಕೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಳಲುತ್ತಿದ್ದಾರೆ 49% ಬಾಲಕೀಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. 2015-16ರಲ್ಲಿ ಬಿಡುಗಡೆಯಾಗಿದ್ದ ಅಂಕಿ ಅಂಶದಲ್ಲಿಯೂ 45.3% ಯುವತಿಯರು ರಕ್ತಹೀನತೆಯಿಂದ ಬಳಲುತ್ತಿದ್ದರು. ಶಿಶು ಮರಣ ಪ್ರಮಾಣ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿವೆ. ಕೊರೊನಾ ಸಂದರ್ಭದಲ್ಲಂತೂ ಈ ಸಂಕಷ್ಟ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದಲ್ಲಿ ಬಾಲ್ಯ ವಿವಾಹ ಪದ್ದತಿ ಇನ್ನೂ ಹಾಗೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. 2019 ರಲ್ಲಿ 21.3% ಬಾಲ್ಯವಿವಾಹಗಳು ನಡೆದಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆದ ಬಗ್ಗೆ ವರದಿಯಾಗಿದೆ. ತಂಬಾಕು ಬಳಕೆ ಪ್ರಮಾಣದಲ್ಲಿ ಮಹಿಳೆಯರು 8.5 % ರಷ್ಟು ತಂಬಾಕು ಸೇವನೆ ಮಾಡಿದರೆ, ಪುರುಷರು 27.1% ರಷ್ಟು ಜನ ತಂಬಾಕು ಸೇವನೆ ಮಾಡುತ್ತಿದ್ದಾರೆ.

Recommended Video

ACB ದಾಳಿ ವೇಳೆ ನೀರಿನ ಪೈಪ್ ನಿಂದ ಹಣ ತೆಗೆದಿದ್ದು ಹೇಗೆ ನೋಡಿ | Oneindia Kannada

English summary
India now has 1,020 women for every 1000 men, is not getting any younger, and no longer faces the threat of a population explosion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X