ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಢಲಿಪಿ ಕಾಯ್ಡೆ ಕರಡು ಹಿಂಪಡೆದ ಮೋದಿ ಸರ್ಕಾರ

By Mahesh
|
Google Oneindia Kannada News

ನವದೆಹಲಿ, ಸೆ.22: ರಾಷ್ಟ್ರೀಯ ಗೂಢಲಿಪಿ ಕಾಯ್ದೆ(National Encryption Policy) ಕರಡನ್ನು ವಾಪಸ್ ಪಡೆಯಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರ್ಕಾರ ಎಂದಿಗೂ ಅಡ್ಡಿ ಬರುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಹಲವಾರು ವಿವಾದಾತ್ಮಕ ಅಂಶಗಳನ್ನು ಒಳಗೊಂಡಿದ್ದ ರಾಷ್ಟ್ರೀಯ ಗೂಢಲಿಪಿ ಕಾಯ್ದೆಯ ಕರಡು ಪ್ರತಿಯನ್ನು ತಿದ್ದುಪಡಿ ಮಾಡಿಕೊಂಡು ಮತ್ತೊಂದು ಬಗೆಯಲ್ಲಿ ಜಾರಿಗೊಳಿಸುವ ಸುಳಿವು ಕೂಡಾ ಸಿಕ್ಕಿದೆ.

ಅದರೆ, ಯಾವುದೇ ಕಾರಣಕ್ಕೂ ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ವಾಟ್ಸಪ್, ಜೀ ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೀಚಾಟ್ ಮುಂತಾದವುಗಳನ್ನು ಬಳಸುವ ಸಾರ್ವಜನಿಕರ ಸ್ವಾತಂತ್ರ್ಯ ಹರಣವಾಗುವುದಿಲ್ಲ ಎಂಬ ಭರವಸೆಯಂತೂ ಸಿಕ್ಕಿದೆ. [ನಿಯಮ ಜಾರಿಗೊಂಡರೆ ಏನಾಗಲಿದೆ?]

ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆ ಆಧಾರದ ಮೇಲೆ ಹೊಸ ಗೂಢಲಿಪಿ ಕಾಯ್ದೆ (ನ್ಯಾಷನಲ್ ಎನ್ಕ್ರಿಪ್ಷನ್ ಪಾಲಿಸಿ) ಜಾರಿಗೆ ತರಲು ಮೋದಿ ಸರ್ಕಾರ ಮುಂದಾಗಿತ್ತು.

National Encryption Policy draft withdrawn

ಇತ್ತೀಚಿನ ದಿನಗಳಲ್ಲಿ ಆನ್​ಲೈನ್ ವಹಿವಾಟು ಹೆಚ್ಚಾಗುತ್ತಿದೆ. ಜತೆಗೆ ಸೈಬರ್ ಅಪರಾಧಗಳು ಕೂಡ ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ ಅವುಗಳನ್ನು ನಿಯಂತ್ರಿಸಲು ಒಂದು ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಿತ್ತು. ಜೊತೆಗೆ ಗೂಢಲಿಪಿ ಬಳಸುವ ಎಲ್ಲಾ ಸಂದೇಶಗಳನ್ನು 90 ದಿನ ಕಾಯ್ದಿಟ್ಟುಕೊಳ್ಳುವುದು ಕಡ್ಡಾಯಗೊಳಿಸಲಾಗುತ್ತಿದೆ ಎಂದು ಕಾಯ್ದೆಯ ಕರಡು ಪ್ರತಿಯಲ್ಲಿ ತಿಳಿಸಲಾಗಿತ್ತು.

ಸಾರ್ವಜನಿಕರ ಖಾಸಗಿತನಕ್ಕೆ ಬೆಲೆ ನೀಡುತ್ತೇವೆ. ಸಾಮಾಜಿಕ ಜಾಲ ತಾಣಗಳ ಸದ್ಬಳಕೆ ಬಗ್ಗೆ ಪ್ರಧಾನಿ ಮೋದಿ ಅವರೇ ಮಾದರಿಯಾಗಿದ್ದಾರೆ.

ಪ್ರಸ್ತುತ ಕಾಯ್ದೆಯ ಕರಡಿನಲ್ಲಿರುವ ಹಲವಾರು ಅಂಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಅದನ್ನು ವಾಪಸು ಪಡೆಯುವಂತೆ ಸಲಹೆ ನೀಡಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಭಾರತದ ಹೊರಗಿನಿಂದ ಗೂಢಲಿಪಿ ಬಳಕೆ ಮಾಡಿ ಕಾರ್ಯನಿರ್ವಹಿಸುತ್ತಿರುವ ಸಂದೇಶವಾಹಕ ಸಂಸ್ಥೆಗಳೂ ಭಾರತದಲ್ಲಿ ಕಾರ್ಯಾಚರಣೆ ಪ್ರಾರಂಭಿಸುವ ಮುನ್ನ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ, ಈ ನಿಯಮಕ್ಕೆ ಅನೇಕ ಸಂಸ್ಥೆಗಳು ಒಪ್ಪದ ಕಾರಣ ಕರಡು ಹಿಂಪಡೆಯುವುದು ಅನಿವಾರ್ಯ ಎಂದು ಸೈಬರ್ ಕಾನೂನು ತಜ್ಞ ಪವನ್ ದುಗ್ಗಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
The draconian draft of the National Encryption Policy has been withdrawn, informed Union Minister Ravi Shankar Prasad.The Depart of Electronics and Information Technology (DeitY) had come under a lot of flak due to this draft policy and experts have slammed it terming it as draconian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X