ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

National Daughters Day 2022 : ಇತಿಹಾಸ, ಮಹತ್ವ, ಸ್ಫೂರ್ತಿದಾಯಕ ಸಂದೇಶ ಮತ್ತು ಆಚರಣೆಗಳು

|
Google Oneindia Kannada News

ಹೆಣ್ಣುಮಕ್ಕಳ ಸಬಲೀಕರಣದತ್ತ ಕೊಂಡೊಯ್ಯುವ ಉದ್ದೇಶದಿಂದ ಪ್ರತಿವರ್ಷ ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಇಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಹೆಣ್ಣಿನ ಸುರಕ್ಷಿತೆ, ಶಿಕ್ಷಣದ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ದಿನ. ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

2014-15ರಲ್ಲಿ ಪ್ರತಿ ಸಾವಿರ ಬಾಲಕರಿಗೆ 918 ಬಾಲಕಿಯರ ಅನುಪಾತವಿತ್ತು. ಈ ಪ್ರಮಾಣ 2019-20ರ ವೇಳೆಗೆ ಹೆಣ್ಣು ಮಕ್ಕಳ ಅನುಪಾತ 934ಕ್ಕೆ ಏರಿಕೆಯಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ವರ್ತನೆಯಲ್ಲೂ ಅಪಾರವಾದ ಸುಧಾರಣೆಗಳು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿವೆ.

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಇತಿಹಾಸ

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಇತಿಹಾಸ

ಈ ದಿನವು ಹೇಗೆ ಅಸ್ತಿತ್ವಕ್ಕೆ ಬಂದಿತು ಎಂಬುದಕ್ಕೆ ಯಾವುದೇ ನಿಜವಾದ ಮೂಲವಿಲ್ಲದಿದ್ದರೂ, ಭಾರತ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ, ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಕುಟುಂಬಗಳು ಗಂಡು ಮಗುವಿಗೆ ಆದ್ಯತೆ ನೀಡುತ್ತವೆ. ವರದಕ್ಷಿಣೆ, ಹೆಣ್ಣು ಶಿಶುಹತ್ಯೆ ಮತ್ತು ಭ್ರೂಣಹತ್ಯೆಯಂತಹ ಸಮಸ್ಯೆಗಳು ಇಂದಿಗೂ ಅಸ್ತಿತ್ವದಲ್ಲಿವೆ. ಆದ್ದರಿಂದ, ಹೆಣ್ಣು ಮಗುವಿನ ಮೇಲಿನ ಕಳಂಕವನ್ನು ಹೊರಹಾಕಲು ಮತ್ತು ಅಪರಾಧಗಳನ್ನು ತೊಡೆದುಹಾಕಲು ಈ ದಿನವನ್ನು ಪರಿಚಯಿಸಲಾಯಿತು.

ಹೆಣ್ಣು ಮಕ್ಕಳ ಹಕ್ಕುಗಳನ್ನು ಗುರುತಿಸಿದ ಮತ್ತು ಮಾತನಾಡಿದ ಮೊದಲ ಸಮ್ಮೇಳನವೆಂದರೆ ಬೀಜಿಂಗ್ ಘೋಷಣೆ. 1995ರಲ್ಲಿ, ಬೀಜಿಂಗ್‌ನಲ್ಲಿ ನಡೆದ ಮಹಿಳಾ ವಿಶ್ವ ಸಮ್ಮೇಳನದಲ್ಲಿ, ದೇಶಗಳು ಸರ್ವಾನುಮತದಿಂದ ಬೀಜಿಂಗ್ ಘೋಷಣೆಗಳನ್ನು ಅಳವಡಿಸಿಕೊಂಡವು. ಇದು ಕೇವಲ ಮಹಿಳೆಯರು ಮಾತ್ರವಲ್ಲದೇ, ಹುಡುಗಿಯರ ಹಕ್ಕುಗಳನ್ನು ಮುಂದುವರಿಸುವ ಅತ್ಯಂತ ಪ್ರಗತಿಪರ ನೀಲನಕ್ಷೆಯಾಗಿದೆ.

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಮಹತ್ವ

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಮಹತ್ವ

ಈ ದಿನವನ್ನು ಆಚರಿಸುವ ಮೂಲಕ ಸಂಸ್ಥೆಗಳು ಮತ್ತು ಸರ್ಕಾರ ಲಿಂಗ ಅಂತರವನ್ನು ತೊಡೆದು ಹಾಕಲು ಮತ್ತು ಸಮಾಜಕ್ಕೆ ಸಮಾನ ಅವಕಾಶವನ್ನು ಒದಗಿಸಲು ಶ್ರಮಿಸುತ್ತವೆ. ಮಹಿಳೆಯರಿಗೆ ಎಲ್ಲದರಲ್ಲೂ ಸಮಾಜ ಹಕ್ಕು ಸಿಗಬೇಕು ಎಂದು ಹೇಳಲಾಗುತ್ತಿದೆಯಾದರೂ ಹಲವೆಡೆ ಇದು ಸಾಧ್ಯವಾಗಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ, ಕಡೆಗಣಿಸುವಿಕೆ ಮುದುವರೆದಿದೆ. ಪುರುಷರು ಮಾತ್ರ ಕಲಿಯಬೇಕು, ಕೆಲಸ ಮಾಡಬೇಕು ಎನ್ನುವ ಆಲೋಚನೆಗಳನ್ನು ದೂರ ಮಾಡುವ ದೃಷ್ಟಿಯಿಂದ ಇದನ್ನು ಆಚರಿಸುವುದಿದೆ. ಸಮಾಜ ಮತ್ತು ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳನ್ನು ಸಮಾನ ನೆಲೆಯಲ್ಲಿ ನೋಡುವುದು ಇದರ ಉದ್ದೇಶವಾಗಿದೆ.

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ಉಲ್ಲೇಖಗಳು

ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನ: ಉಲ್ಲೇಖಗಳು

"ಹೆಣ್ಣುಮಕ್ಕಳು ನಮಗೆ ಕೊನೆಯಿಲ್ಲದ ಪ್ರೀತಿ ನೀಡಲು ಮೇಲಿನಿಂದ ಕಳುಹಿಸಲ್ಪಟ್ಟ ದೇವತೆಗಳು" - ಜೆ. ಲೀ

"ನೀವು ನನ್ನ ದೇವತೆ, ನೀವು ಈ ಜಗತ್ತಿನಲ್ಲಿ ಒಳ್ಳೆಯತನವನ್ನು ನೆಲೆಸುತ್ತೀರಿ ಮತ್ತು ಶ್ರೇಷ್ಠವಾಗಲು ನನ್ನನ್ನು ಪ್ರೇರೇಪಿಸುತ್ತೀರಿ." - ಸ್ಟೀವ್ ಮರಬೋಲಿ

"ಯಾವುದೇ ತಾಯಿ ಮತ್ತು ಮಗಳು ಎಂದಿಗೂ ಬೇರೆಯಾಗಿ ವಾಸಿಸುವುದಿಲ್ಲ, ಅವರ ನಡುವಿನ ಅಂತರ ಏನೇ ಇರಲಿ." - ಕ್ರಿಸ್ಟಿ ವ್ಯಾಟ್ಸನ್

"ತಾಯಿಯ ಮಕ್ಕಳ ಜೀವನದ ವಿವರಗಳನ್ನು ಹೆಚ್ಚು ತಿಳಿದಿರುತ್ತಾಳೆ, ಅದನ್ನು ಯಾರೂ ತಿಳಿಯಲಾಗದು" - ಅನಿತಾ ಡೈಮಂಟ್

"ನಾನು ಕೇಳಿದ ಅತ್ಯುತ್ತಮ ಸಂಗೀತವೆಂದರೆ ನನ್ನ ಮಗಳ ನಗುವಿನ ಧ್ವನಿ." - ದೇಸಿಶ್ ಮೃಧಾ

ದಿನವನ್ನು ಹೇಗೆ ಆಚರಿಸಲಾಗುತ್ತದೆ?

ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಹೆಣ್ಣುಮಕ್ಕಳು ಜನರ ಜೀವನದಲ್ಲಿ ತರುವ ಸಂತೋಷಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದು ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಗುರಿಯಾಗಿದೆ. ಪೂರ್ವಾಗ್ರಹ ಮತ್ತು ಹೆಣ್ಣು ಭ್ರೂಣ ಹತ್ಯೆಯಂತಹ ಸಮಸ್ಯೆಗಳನ್ನು ನಿಭಾಯಿಸಲು ಅನೇಕ ಸಂಸ್ಥೆಗಳು ಸಮ್ಮೇಳನಗಳು ಮತ್ತು ಚಟುವಟಿಕೆಗಳನ್ನು ಯೋಜಿಸುತ್ತವೆ. ನಿಮ್ಮ ಮಗಳನ್ನು ವಿಶೇಷ ವಿಹಾರಕ್ಕೆ ಕರೆದೊಯ್ಯುವ ಮೂಲಕ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ನೀವು ಈ ದಿನವನ್ನು ವಿಶೇಷವಾಗಿಸಬಹುದು.

English summary
The International Day of the Girl Child is celebrated annually on October 11 to empower and amplify the voices of young girls around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X