ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 2ರ ಕಾರ್ಮಿಕ ಸಂಘಟನೆಗಳ ಮುಷ್ಕರ ಯಾಕೆ?

By Madhusoodhan
|
Google Oneindia Kannada News

ಬೆಂಗಳೂರು, ಆಗಸ್ಟ್, 31: ವಿವಿಧ ಕಾರ್ಮಿಕ ಸಂಘಟನೆಗಳು ಸೆಪ್ಟೆಂಬರ್ 2 ಶುಕ್ರವಾರ ದೇಶವ್ಯಾಪಿ ಮುಷ್ಕರಕ್ಕೆ ಸಿದ್ಧವಾಗಿವೆ. ಹಿಂದೊಮ್ಮೆ ಪಿಎಫ್ ನೀತಿಯನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ್ದಾಗ ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಗಳು ಬೀದಿಗೆ ಇಳಿದಿದ್ದವು.

ಹಾಗಾದರೆ ಕಾರ್ಮಿಕ ಸಂಘಟನೆಗಳು ಯಾವ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರಕ್ಕೆ ಮುಂದಾಗಿವೆ. ಕೇಂದ್ರ ಸರ್ಕಾರಕ್ಕೆ ಸಂಘಟನೆಗಳು ಮಾಡುತ್ತಿರುವ ಒತ್ತಾಯವೇನು? ಮಾಡುತ್ತಿರುವ ಆರೋಪಗಳೇನು? ಎಂಬುದನ್ನು ಒಂದು ಸಲ ವಿಶ್ಲೇಷಣೆ ಮಾಡಬೇಕಾಗುತ್ತದೆ.[ಸೆ.2: ಸಾರಿಗೆ ಮುಷ್ಕರ, ಸರ್ಕಾರಿ ಬಸ್ ಕೂಡಾ ಸ್ಥಗಿತ]

ಬೆಲೆ ಏರಿಕೆ ನಿಯಂತ್ರಣ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ನಿರುದ್ಯೋಗ ತಪ್ಪಿಸಲು ನಿರ್ದಿಷ್ಟ ಕ್ರಮ, ರಾಷ್ಟ್ರವ್ಯಾಪಿ ಏಕರೂಪ ವೇತನ ನಿಗದಿ ಕಾರ್ಮಿಕ ಸಂಘಟನೆಗಳು ಸರ್ಕಾರದ ಮುಂದೆ ಇಟ್ಟಿರುವ ಪ್ರಮುಖ ಬೇಡಿಕೆಗಳು...[ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

350 ರು. ದಿನಗೂಲಿ ಏತಕ್ಕೆ ಸಾಕು?

350 ರು. ದಿನಗೂಲಿ ಏತಕ್ಕೆ ಸಾಕು?

ಸರ್ಕಾರ ನಿಗದಿಪಡಿಸಿರುವ 350 ರು. ದಿನಗೂಲಿ ಅಸಮರ್ಪಕವಾಗಿದೆ. 26 ದಿನ ಕೆಲಸ ಮಾಡಿದರೆ 9, 100 ರು. ಆಗುತ್ತದೆ. ನಾವು ಬೇಡಿಕೆ ಇಟ್ಟಿರುವುದು 18 ಸಾವಿರಕ್ಕೆ ಎಂದು ಕಾರ್ಮಿಕ ಸಂಘಟನೆಗಳು ಹೇಳಿವೆ.

ಸಮಾನ ಕನಿಷ್ಠ ವೇತನ

ಸಮಾನ ಕನಿಷ್ಠ ವೇತನ

ಕಾರ್ಮಿಕರಿಗೆ ರಾಷ್ಟ್ರವ್ಯಾಪಿ ಸಮಾನ ಕನಿಷ್ಠ ವೇತನ ನಿಗದಿಯಾಗಬೇಕು. 15 ಸಾವಿರ ರು. ಕನಿಷ್ಠ ವೇತನ ನಿಗದಿ ಮಾಡಬೇಕು. ಇದು ಎಲ್ಲ ಕಾರ್ಮಿಕ ವರ್ಗಕ್ಕೂ ಅನ್ವಯವಾಗಬೇಕು.

ಪಿಂಚಣಿ ನೀತಿ ಬದಲಾವಣೆ

ಪಿಂಚಣಿ ನೀತಿ ಬದಲಾವಣೆ

ಕನಿಷ್ಠ 3 ಸಾವಿರ ರು. ಪಿಂಚಣಿ, ಬೋನಸ್, ಭವಿಷ್ಯ ನಿಧಿ, ಉಪಧನದ ಮಿತಿಯನ್ನು ಹೆಚ್ಚಳ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟವನ್ನು ನಿಲ್ಲಿಸಬೇಕು. ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ನಿಧಿ ಸ್ಥಾಪನೆ, ಕಲ್ಯಾಣ ಯೋಜನೆಗಳ ಜಾರಿಗೆ ಅಗತ್ಯ ಹಣ ಮೀಸಲಿಡಬೇಕು.

11 ಪ್ರಮುಖ ಸಂಘಟನೆಗಳು

11 ಪ್ರಮುಖ ಸಂಘಟನೆಗಳು

ಎಐಯುಟಿಯುಸಿ(All India United Trade Union Centre) ನೇತೃತ್ವದಲ್ಲಿ 11 ಕಾರ್ಮಿಕ ಸಂಘಟನೆಗಳು ಈಗಾಗಲೇ ಮುಷ್ಕರಕ್ಕೆ ಬೆಂಬಲ ನೀಡಿವೆ. ಕೆಎಸ್ ಆರ್ ಟಿಸಿ ಸಂಚಾರ ಸಹ ಬಂದ್ ಆಗಲಿದೆ.

ಅಸಂಘಟಿತ ಕಾರ್ಮಿಕರ ಬೇಡಿಕೆ

ಅಸಂಘಟಿತ ಕಾರ್ಮಿಕರ ಬೇಡಿಕೆ

ಕಟ್ಟಡ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯ ಕರ್ತೆಯರು, ಬಿಸಿಯೂಟ ನೌಕರರು, ಹಮಾಲಿಗಳು. ಆಟೋ ಕಾರ್ಮಿಕರಿಗೆ ಹಾನಿ ಮಾಡುತ್ತಿರುವ ಕೆಲ ನೀತಿಯನ್ನು ಕೈ ಬಿಡಬೇಕು ಎಂದು ಕಾರ್ಮಿಕ ಸಂಘಟನೆಗಳು ಆಗ್ರಹ ಮಾಡಲಿವೆ.

English summary
Trade unions said they will go ahead with nation-wide strike on September 2, rejecting as "completely inadequate" the government's 42 per cent hike in minimum wage to Rs 350 per day. Here is the demands of trade unions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X