ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತುವಾ ಅತ್ಯಾಚಾರ ಖಂಡಿಸಿ ದೇಶ್ಯಾದ್ಯಂತ ತೀವ್ರಗೊಂಡ ಹೋರಾಟ:ಚಿತ್ರಗಳು

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಕತುವಾ ಜಿಲ್ಲೆಯಲ್ಲಿ ನಡೆದ 8 ವರ್ಷದ ಬಾಲಕಿಯ ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿರೋ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸಲು ಇಡೀ ದೇಶವೇ ಆಗ್ರಹಿಸುತ್ತಿದೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬಾಲಕಿಯ ಸಾವಿನ ನ್ಯಾಯಕ್ಕಾಗಿ ಕೇಳಿ ಬರುತ್ತಿರುವ ಧ್ವನಿ ಜೋರಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಜಮ್ಮುವಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಅಲ್ಲಿನ ಸರ್ಕಾರಕ್ಕೆ ಜೋರಾಗಿಯೇ ಬಿಸಿ ಮುಟ್ಟಿದೆ. ಪ್ರತಿಭಟನೆಗೆ ಬಳಿಕ ಪ್ರತಿಕ್ರಿಯಿಸಿದ ಸಿಎಂ ಮೆಹಬೂಬ್ ಮುಫ್ತಿ ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ನೀಡುವ ಭರವಸೆ ನೀಡಿದ್ದಾರೆ.

ಪತ್ರ: ಉನ್ನಾವೋ, ಕತುವಾ ಅತ್ಯಾಚಾರ ದೇಶವೇ ತಲೆತಗ್ಗಿಸುವಂಥದ್ದುಪತ್ರ: ಉನ್ನಾವೋ, ಕತುವಾ ಅತ್ಯಾಚಾರ ದೇಶವೇ ತಲೆತಗ್ಗಿಸುವಂಥದ್ದು

ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಾಗಿಯಾದ ಹಿನ್ನಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದಿದ್ದರು,ಅದೇ ರೀತಿಯಾಗಿ ಕತುವಾ ಪ್ರಕರಣದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯಳಗಿತ್ತು. ಈಗ ಈ ಎರಡು ಪ್ರಕರಣಗಳು ಜನಾಂಗ, ಧರ್ಮ, ಜಾತಿ, ಸಾಮಾಜಿಕ-ಆರ್ಥಿಕ ಹಿನ್ನೆಲೆಗಳೆಲ್ಲವನ್ನು ಮೀರಿ ಬೆಂಗಳೂರಿನಲ್ಲಿ ಜನರು ಬೀದಿ ಚಳುವಳಿಯನ್ನು ನಡೆಸಿದ್ದಾರೆ.

ಕತುವಾ ಅತ್ಯಾಚಾರ ಪ್ರಕರಣ: ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳಲು ಕೇಳುವೆಕತುವಾ ಅತ್ಯಾಚಾರ ಪ್ರಕರಣ: ಕಣ್ಣಲ್ಲಿ ಕಣ್ಣಿಟ್ಟು ಸತ್ಯ ಹೇಳಲು ಕೇಳುವೆ

ಮೊರಾದಾಬಾದ್, ಬೆಂಗಳೂರು, ಚೆನ್ನೈ, ಅಮೃತಸರದಲ್ಲಿ ಅತ್ಯಾಚಾರದ ವಿರುದ್ಧ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದರು. ಜನವರಿ ತಿಂಗಳಿನಲ್ಲಿ ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲ ಎಂಟು ವರ್ಷದ ಮಗುವನ್ನು ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ಹಲವು ದಿನಗಳ ಕಾಲ ದೇವಾಲಯವೊಂದರಲ್ಲಿಟ್ಟು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಕೊಲೆ ಮಾಡಲಾಗಿತ್ತು.

ಕತುವಾ ಅತ್ಯಾಚಾರ-ಕೊಲೆ ಪ್ರಕರಣ: ಇಂದಿನಿಂದ ಆರೋಪಿಗಳ ವಿಚಾರಣೆಕತುವಾ ಅತ್ಯಾಚಾರ-ಕೊಲೆ ಪ್ರಕರಣ: ಇಂದಿನಿಂದ ಆರೋಪಿಗಳ ವಿಚಾರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ 60 ವರ್ಷದ ನಿವೃತ್ತ ಸರ್ಕಾರಿ ನೌಕರ ಮತ್ತು ಓರ್ವ ಪೊಲಿಸ್ ಅಧಿಕಾರಿ ಸೇರಿದಂತೆ ಎಂಟು ಜನರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದೆ. ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(SIT)ವನ್ನು ರಚಿಸಿದೆ.

ಕತುವಾ ಉನ್ನಾವೋ ಬಾಲಕಿ ಕುಟುಂಬಕ್ಕೆ ನ್ಯಾಯಬೇಕು

ಕತುವಾ ಉನ್ನಾವೋ ಬಾಲಕಿ ಕುಟುಂಬಕ್ಕೆ ನ್ಯಾಯಬೇಕು

ಜಮ್ಮು ಕಾಶ್ಮೀರದ ಕತುವಾ ಪ್ರದೇಶದಲ್ಲ ಎಂಟು ವರ್ಷದ ಮಗುವನ್ನು ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ಹಲವು ದಿನಗಳ ಕಾಲ ದೇವಾಲಯವೊಂದರಲ್ಲಿಟ್ಟು ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಕೊಲೆ ಮಾಡಲಾಗಿತ್ತು. ಆ ಬಾಲಕಿ ಕುಟುಂಬಕ್ಕೆ ನ್ಯಾಯ ಒಗದಿಸುವಂತೆ ದೇಶದಲ್ಲಿ ಹಲವಾರು ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಮೊರಾದಾಬಾದ್ ನಲ್ಲಿ ಭಾನುವಾರ ನಡೆದ ಪ್ರತಿಭಟನೆಯ ಒಂದು ದೃಶ್ಯವನ್ನು ನೀವು ನೋಡಬಹುದು.

 ಬಾಲಕಿ ಸಾವಿಗೆ ಮಕ್ಕಳ ಕಂಬನಿ

ಬಾಲಕಿ ಸಾವಿಗೆ ಮಕ್ಕಳ ಕಂಬನಿ

ಕತುವಾ ಜಿಲ್ಲೆಯಲ್ಲಿ ನಡೆದ ಬಾಲಕಿ ಅತ್ಯಾಚಾರ ಹಾಗೂ ಹತ್ಯೆಗೆ ಸಂಬಂಧಿಸಿದಂತೆ ಇಡೀ ದೇಶವೇ ಮರುಗುತ್ತಿದೆ. ಸಂತಾಪ ಸೂಚಿಸುತ್ತಿದೆ. ಆರೋಪಿಗಳನ್ನು ಬಂಧಿಸಲು ಆಗ್ರಹಿಸುತ್ತಿವೆ. ಹಾಗೆಯೇ ಚೆನ್ನೈನಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮಗುವೊಂದು ಬಾಲಿಕೆ ನ್ಯಾಯ ಒದಗಿಸಿಕೊಡಿ ಫಲಕವನ್ನು ಹಿಡಿದು ಕಣ್ಣೀರಿಟ್ಟ ಮಕ್ಕಳು.

ಬಾಲಕಿ ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಪ್ರತಿಭಟನೆ

ಬಾಲಕಿ ಅತ್ಯಾಚಾರ ವಿರೋಧಿಸಿ ಕ್ಯಾಂಡಲ್ ಪ್ರತಿಭಟನೆ

ದೇಶವನ್ನೇ ಬೆಚ್ಚಿಬೀಳಿಸುವ ಎರಡು ಪೈಶಾಚಿಕ ಘಟನೆಗಳು ಇತ್ತೀಚೆಗೆ ನಡೆದಿವೆ. ಜಮ್ಮುವಿನ ಅಲೆಮಾರಿ ಜನಾಂಗದ ಎಂಟು ವರ್ಷದ ಅಮಾಯಕ ಬಾಲೆಯೊಬ್ಬಳನ್ನು ಅಪಹರಿಸಿ, ನಾಲ್ಕು ದಿನಗಳ ಕಾಲ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಸರಣಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಂದ ಹೀನಾತಿಹೀನ, ಮನುಕುಲವೇ ತಲೆ ತಗ್ಗಿಸುವಂತಹ ಹೇಯಕರ ಘಟನೆ. ಇನ್ನೊಂದೆಡೆ ಉತ್ತರಪ್ರದೇಶದ ಉನ್ನಾವೋದಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿದ್ದು, ಸ್ಥಳೀಯ ಬಿಜೆಪಿ ಶಾಸಕನ ಮೇಲೆಯೆ ಆರೋಪ ಮಾಡಲಾಗಿದೆ. ಮಾತ್ರವಲ್ಲದೆ ಸಂತ್ರಸ್ತೆಯ ತಂದೆ ಪೋಲಿಸ್ ಠಾಣೆಯಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಮೇಲಿನ ಎರಡೂ ಘಟನೆಗಳು ಭಾರತೀಯ ಸಮಾಜವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದೆ. .ಅಮೃತಸರದಲ್ಲಿ ಭಾನುವಾರ ಕ್ಯಾಂಡಲ್ ಮಾರ್ಚ್ ನಡೆಸಿ ಮೃತ ಬಾಲಕಿ ಆತ್ಮಕ್ಕೆ ಶಾಂತಿ ಕೋರಿದರು ಜತೆಗೆ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದರು.

 ಅತ್ಯಾಚಾರ ವಿರೋಧಿಸಿ ಪ್ರತಿಭಟನೆ

ಅತ್ಯಾಚಾರ ವಿರೋಧಿಸಿ ಪ್ರತಿಭಟನೆ

ಇತ್ತೀಚೆಗೆ ನಡೆದ ಕತುವಾ ಅತ್ಯಾಚಾರ ವಿರೋಧಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಬಳಿ ಕ್ಯಾಂಡಲ್ ಮಾರ್ಚ್ ನಡೆಸಿ ಭಾನುವಾರ ಪ್ರತಿಭಟನೆ ನಡೆಸಿದರು.

 ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿ ಅತ್ಯಾಚಾರ ವಿರುದ್ಧ ಪ್ರತಿಭಟನೆ

ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿ ಅತ್ಯಾಚಾರ ವಿರುದ್ಧ ಪ್ರತಿಭಟನೆ

ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿ ಯುವಜನತೆ ಪ್ರತಿಭಟನೆ ನಡೆಸಿದರು. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಾಗಿಯಾದ ಹಿನ್ನಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂಜರಿದಿದ್ದರು,ಅದೇ ರೀತಿಯಾಗಿ ಕತುವಾ ಪ್ರಕರಣದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲಾಗಿತ್ತು.. ಈಗ ಈ ಎರಡು ಪ್ರಕರಣಗಳು ಜನಾಂಗ, ಧರ್ಮ, ಜಾತಿ, ಸಾಮಾಜಿಕ-ಆರ್ಥಿಕ ಹಿನ್ನೆಲೆಗಳೆಲ್ಲವನ್ನು ಮೀರಿ ಜನರು ಬೀದಿ ಚಳುವಳಿಯನ್ನು ನಡೆಸಿದ್ದಾರೆ.

English summary
Agitation seeking justice for Kathua and Unnao rape victims various parts of the country. Protestors in Jammu and Kashmir sought CBI inquiry in Kathua rape case while police were delayed file FIR in Unnao case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X