• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವಿರುದ್ಧ ಹೋರಾಡುವ ನೇಸಲ್‌ ಸ್ಪ್ರೇ ಶೀಘ್ರ ಭಾರತದಲ್ಲಿ ಲಭ್ಯ

|
Google Oneindia Kannada News

ನವದೆಹಲಿ, ಆಗಸ್ಟ್‌ 02: ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ನೇಸಲ್ ಸ್ಪ್ರೇ ಶೀಘ್ರದಲ್ಲೇ ಭಾರತದಲ್ಲಿ ಲಭ್ಯವಾಗಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕೋವಿಡ್ -19 ಚಿಕಿತ್ಸೆಯಲ್ಲಿ ಈ ನೈಟ್ರಿಕ್ ಆಕ್ಸೈಡ್ ನೇಸಲ್ ಸ್ಪ್ರೇ (NONS) ಪರಿಣಾಮಕಾರಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಹೇಳಿದೆ. ಅಲ್ಲದೆ ಇದು ವಿಶೇಷವಾದ ದೀರ್ಘಾವಧಿಯ ಕಾರ್ಯತಂತ್ರದ ಪಾಲುದಾರಿಕೆಯಾಗಿರಲಿದೆ ಎಂದೂ ಸ್ಪಷ್ಟಪಡಿಸಿದೆ.

ನಾಸಲ್ ಸ್ಪ್ರೇ ಯಾವಾಗ ಲಭ್ಯ, BBV154 ಮಕ್ಕಳು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯೇ?ನಾಸಲ್ ಸ್ಪ್ರೇ ಯಾವಾಗ ಲಭ್ಯ, BBV154 ಮಕ್ಕಳು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯೇ?

ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೆನಡಿಯನ್ ಬಯೋಟೆಕ್ ಸಂಸ್ಥೆ ಸ್ಯಾನೋಟೈಜ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆ ಈ ನಾಸಲ್ ಸ್ಪ್ರೇಯನ್ನು ಸಂಶೋಧಿಸಿದ್ದು, ಶೀಘ್ರದಲ್ಲೇ ಭಾರತ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಇದು ಲಭ್ಯವಾಗುವ ನಿರೀಕ್ಷೆ ಇದೆ.

ಈಗಾಗಲೇ ಹಲವು ದೇಶಗಳು ತಮ್ಮ ಕೋವಿಡ್ ಚಿಕಿತ್ಸೆಯಲ್ಲಿ ಈ ನಾಸಲ್ ಸ್ಪ್ರೇಯನ್ನು ಅಳವಡಿಸಿಕೊಳ್ಳಲು ಉತ್ಸುಕತೆ ತೋರಿವೆ. ಏಷ್ಯಾದ ಇತರೆ ಮಾರುಕಟ್ಟೆಗಳು ಅಂದರೆ ಸಿಂಗಾಪುರ, ಮಲೇಷ್ಯಾ, ಹಾಂಕಾಂಗ್, ತೈವಾನ್, ನೇಪಾಳ, ಬ್ರೂನಿ, ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್, ಶ್ರೀಲಂಕಾ, ಟಿಮೋರ್-ಲೆಸ್ಟೆ ಮತ್ತು ವಿಯೆಟ್ನಾಂ ದೇಶಗಳು ಈ ಔಷಧಿ ಖರೀದಿಗೆ ಮುಂದಾಗಿವೆ.

ಮೊದಲ 24 ಗಂಟೆಗಳಲ್ಲಿ, NONS ಸರಾಸರಿ ವೈರಲ್ ಲೋಡ್ ಅನ್ನು ಸುಮಾರು ಶೇ.95 ರಷ್ಟು ಕಡಿಮೆ ಮಾಡಿತು ಮತ್ತು ನಂತರ 72 ಗಂಟೆಗಳಲ್ಲಿ 99 ಪ್ರತಿಶತಕ್ಕಿಂತ ಹೆಚ್ಚು ಕಡಿಮೆ ಮಾಡಿತು. ಬ್ರಿಟನ್ ಮತ್ತು ಕೆನಡಾ ಕ್ಲಿನಿಕಲ್ ಪ್ರಯೋಗಗಳ ಭಾಗವಾಗಿ ಆರೋಗ್ಯವಂತ ಸ್ವಯಂಸೇವಕರು ಮತ್ತು ರೋಗಿಗಳಲ್ಲಿ ಇದನ್ನು ಪರೀಕ್ಷಿಸಲಾಗಿದೆ.

ಸರಳವಾದ ಮೂಗಿನ ಸಿಂಪಡಣೆಯ ರೂಪದಲ್ಲಿ ಇದು ಲಭ್ಯವಿದೆ. ಇದು ಶ್ವಾಸಕೋಶವನ್ನು ಬಿಸಿಯಾಗಿಸಿ ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಮೂಲಕ ಮೇಲ್ಭಾಗದ ಶ್ವಾಸನಾಳದಲ್ಲಿ ವೈರಸ್ ಅನ್ನು ಕೊಲ್ಲುವಂತೆ ವಿನ್ಯಾಸಗೊಳಿಸಲಾಗಿದೆ. ಇದು ನೈಟ್ರಿಕ್ ಆಕ್ಸೈಡ್ (NO) ಅನ್ನು ಆಧರಿಸಿದೆ, ಸಾಬೀತಾದ ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ನೈಸರ್ಗಿಕ ನ್ಯಾನೊ-ಅಣು, ಮತ್ತು ಇದು SARS-CoV-2 ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಕಳೆದ ಮಾರ್ಚ್‌ನಲ್ಲಿ, ಈ ಸ್ಯಾನೋಟೈಸ್‌ನ ಕ್ಲಿನಿಕಲ್ ಪ್ರಯೋಗಗಳಿಂದ ಈ ಸ್ಪ್ರೇ ಕೋವಿಡ್ -19 ರ ಹರಡುವಿಕೆಯನ್ನು ತಡೆಗಟ್ಟಲು ನೆರವಾಗಲಿದೆ ಎಂದು ತೋರಿಸಿತ್ತು. ಕೋವಿಡ್ ಔಷಧಿಗಳ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಲು ಈ ಔಷಧಿ ಸುರಕ್ಷಿತ ಮತ್ತು ಪರಿಣಾಮಕಾರಿ ಆಂಟಿ-ವೈರಲ್ ಚಿಕಿತ್ಸೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಈ ಲಸಿಕೆಗೆ ಸೂಜಿಯ ಅಗತ್ಯವಿಲ್ಲದ ಕಾರಣ ಅಡ್ಡಪರಿಣಾಮಗಳೂ ಕೂಡ ಕಡಿಮೆ ಎನ್ನಲಾಗಿದೆ, ಲಸಿಕೆಗಾಗಿ ಜನರು ವೈದ್ಯರ ಬಳಿಗೆ ಹೋಗಬೇಕಾಗಿಲ್ಲ, ಅದನ್ನು ಮೂಗಿನ ಮೂಲಕ ಸ್ವತಃ ಹಾಕಿಕೊಳ್ಳಬಹುದಾಗಿದೆ. ಲಸಿಕೆ ಮಾರುಕಟ್ಟೆಗೆ ಬಂದ ಬಳಿಕ ಈಗಿರುವ ಲಸಿಕೆಗಳಿಗಿಂತ ಅಗ್ಗದಲ್ಲಿ ದೊರೆಯಲಿದೆ. ಮಕ್ಕಳಿಗೆ ಹಾಗೂ ವಯಸ್ಕರಿಗೆ ಸೂಕ್ತವಾಗಿದೆ ಎಂದು ಕಂಪನಿ ಹೇಳಿದೆ.

ಈ ಸ್ಪ್ರೇನಲ್ಲಿ ಇರುವುದರ ಪೈಕಿ ಅತಿ ಮುಖ್ಯವಾದ ಅಂಶ ನೈಟ್ರಿಕ್ ಆಸಿಡ್. ಇದರಲ್ಲಿ ವೈರಾಣುವಿರೋಧಿ ಸ್ವಭಾವ ಇದ್ದು, ಅದಕ್ಕೆ ಇದು ಹೆಸರುವಾಸಿ. ನಮ್ಮ ದೇಹದಲ್ಲಿ ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡುವುದಕ್ಕೆ ಕಂಡುಬರುತ್ತದೆ. ಕಾಯಿಲೆಗೆ ತಡೆ ಒಡ್ಡುವಂಥ ಔಷಧ ಇದು. ಸ್ಯಾನಿಟೈಜರ್ ರೀತಿಯಲ್ಲಿ ಇರುತ್ತದೆ. ಒಂದು ವೇಳೆ ನಿನ್ನೆಯೋ ಇಂದೋ ನಿಮ್ಮ ದೇಹ ಕಾಯಿಲೆಗೆ ತುತ್ತಾಗುವ ಸನ್ನಿವೇಶಕ್ಕೆ ಎದುರಾಗಿತ್ತು ಅಂದುಕೊಳ್ಳಿ. NONS ಸ್ಪ್ರೇ ಬಳಸುವುದರಿಂದ ಕಾಯಿಲೆ ತಡೆಯಬಹುದು.

ಮೂಗಿನಲ್ಲಿ ವೈರಾಣುಗಳನ್ನು ಈ ಸ್ಪ್ರೇ ಕೊಲ್ಲುತ್ತದೆ. ಪೂರ್ಣ ಪ್ರಮಾಣದಲ್ಲಿ ವೈರಾಣು ಹಬ್ಬುವ ಮೊದಲು ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗುವುಯದೇ ಮೂಗಿನಲ್ಲಿ. ಈ ಹಂತದಲ್ಲಿ ವೈರಾಣು ನಿಯಂತ್ರಿಸಿದರೆ ಕಾಯಿಲೆ ನಿಯಂತ್ರಣ ಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.

ಇಸ್ರೇಲ್, ಬಹರೇನ್​ನಿಂದ ಅನುಮತಿ ಸಿಕ್ಕಿದೆ. ಇತರ ಹಲವು ದೇಶಗಳ ಜತೆ ಮಾತುಕತೆ ನಡೆಯುತ್ತಿದೆ. ಎಲ್ಲ ನಾಗರಿಕರಿಗೂ ಕೈಗೆಟುಕುವ ದರದಲ್ಲಿ ಬೆಲೆಯನ್ನು ನಿಗದಿ ಮಾಡಬೇಕು ಎಂದು ಎಲ್ಲ ಭಾಗೀದಾರರ ಜತೆಗೂ ಚರ್ಚೆ ಮಾಡ್ತಿದ್ದೀವಿ ಎಂದಿದ್ದಾರೆ.

ಚುಚ್ಚುಮದ್ದಿನ ಲಸಿಕೆ ನೀಡಿದರೆ ಸಿರಿಂಜ್‌, ಸೂಜಿಯ ತ್ಯಾಜ್ಯ ಹೆಚ್ಚಬಹುದು. ಹೀಗಾಗಿ ನೇಸಲ್‌ ಸ್ಪ್ರೇ ಲಸಿಕೆ ಬಳಕೆಗೆ ಬಂದರೆ ತ್ಯಾಜ್ಯ ಕಡಿಮೆ ಮಾಡಬಹುದು ಎಂದು ಈ ಹಿಂದೆ ತಜ್ಞರು ಹೇಳಿದ್ದು ಇಲ್ಲಿ ಗಮನಾರ್ಹ.

ಗಮಲೇಯಾ ಸಂಸ್ಥೆ ಈಗಾಗಲೇ ಡಬಲ್‌ ಡೋಸ್‌ ಮತ್ತು ಸಿಂಗಲ್‌ ಡೋಸ್‌ ಸ್ಪುಟ್ನಿಕ್‌ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ ಡಬಲ್‌ ಡೋಸ್‌ ಮಾದರಿಯ ಲಸಿಕೆಯ ಉತ್ಪಾದನೆಗೆ ಈಗಾಗಲೇ ಭಾರತದಲ್ಲಿ ಚಾಲನೆ ನೀಡಲಾಗಿದೆ. ಶೀಘ್ರವೇ ಸಿಂಗಲ್‌ ಡೋಸ್‌ ಮಾದರಿಗೆ ಕೂಡ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆ ಇದೆ.

ನೂತನ ಇನ್‌ಟ್ರಾ ನೇಸಲ್ ಕೋವಿಡ್ ಲಸಿಕೆಯು ಕೊರೊನಾ ಸೋಂಕನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ಕೊರೊನಾ ಹರಡುವಿಕೆಯನ್ನು ತಡೆಯಬಲ್ಲದು ಎಂದು ತಜ್ಞರು ತಿಳಿಸಿದ್ದಾರೆ.

ಈಗಾಗಲೇ ರಷ್ಯಾದಲ್ಲಿ ಮೂಗಿನ ಮೂಲಕ ಸಿಂಪಡಿಸುವ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದು, 8-12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷಿಸಲು ಪ್ರಾರಂಭಿಸಿದೆ.
ಸೆಪ್ಟೆಂಬರ್ 15ರೊಳಗೆ ಮಕ್ಕಳಿಗೆ ಸಿದ್ಧವಾಗಲಿದೆ ಎಂದು ಗಮಾಲೆ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ಹೇಳಿದ್ದಾರೆ.

ಮಕ್ಕಳಿಗೆ ಸೂಜಿಯ ಬದಲು ಸ್ಪ್ರೇ ಮಾಡುವ ಲಸಿಕೆ ಹಾಕಲಾಗುತ್ತದೆ, ಇಲ್ಲಿಯವರೆಗೆ ಯಾವುದೇ ಅಡ್ಡಪಡಿಣಾಮಗಳು ಕಂಡುಬಂದಿಲ್ಲ. ಭಾರತದಲ್ಲಿ ಕೊರೊನಾ ವೈರಸ್ ಲಸಿಕೆ ಪರ್ಯಾಯವಾಗಿ ಮೂಗಿನ ಸಿಂಪಡಣೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಸಂಶೋಧನೆ ನಡೆಯುತ್ತಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟ್ರಾ ನೇಸಲ್ ಕೋವಿಡ್ 19 ಲಸಿಕೆಯು ಬಿಬಿವಿ 154ನ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ.

English summary
Glenmark Pharmaceuticals and Canadian biotech firm SaNOtize Research and Development Corp on Monday announced an exclusive long term strategic partnership to manufacture, market and distribute nitric oxide nasal spray (NONS) for Covid-19 treatment in India and other Asian markets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X