ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

|
Google Oneindia Kannada News

Recommended Video

Chandrayaan 2 : ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ | Oneindia Kannada

ನವದೆಹಲಿ, ಸೆಪ್ಟೆಂಬರ್ 27:ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದೆ ಎನ್ನಲಾದ ಸ್ಥಳದ ಚಿತ್ರವನ್ನು ನಾಸಾದ ಲೂನಾರ್ ಆರ್ಬಿಟರ್ ಕಳುಹಿಸಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಹಗುರವಾಗಿ ಇಳಿದು, ಅಧ್ಯಯನ ನಡೆಸಬೇಕಿದ್ದ ಚಂದ್ರಯಾನ 2 ಗಗನನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಮೇಲೆ ಅಪ್ಪಳಿಸದೆ ಎನ್ನುವ ಮಾಹಿತಿ ಲಭ್ಯವಾಗಿತ್ತು.

ನಾಸಾದ ಲೂನಾರ್ ಆರ್ಬಿಟರ್‌ಗೆ ವಿಕ್ರಮ್ ಲ್ಯಾಂಡರ್ ಪತ್ತೆ ಯಾಕೆ ಸಾಧ್ಯವಾಗಿಲ್ಲ ಎಂಬುದಕ್ಕೆ ನಾಸಾ ಸ್ಪಷ್ಟನೆ ನೀಡಿದೆ.

ವಿಕ್ರಂ ಲ್ಯಾಂಡರ್‌ಗೆ ಕಠಿಣ ಲ್ಯಾಂಡಿಂಗ್‌ನಿಂದಲೇ ಸಮಸ್ಯೆಯಾಗಿದೆ. ವಿಕ್ರಮ್ ಲ್ಯಾಂಡರ್ ಇಳಿಯಬೇಕಾದ ನಿಗದಿತ ಸ್ಥಳದಲ್ಲಿ ಇಳಿದಿಲ್ಲ ಎಂದು ತಿಳಿಸಿದ್ದಾರೆ.

ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

ನಾಸಾದಿಂದ ಲ್ಯಾಂಡರ್ ಇಳಿಯಬೇಕಿದ್ದ ಸ್ಥಳದ ಚಿತ್ರ ಬಿಡುಗಡೆ ಮಾಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿತ ಸ್ಥಳದಲದಲ್ಲಿ ಲ್ಯಾಂಡರ್ ಇಳಿದಿಲ್ಲ. ನೆರಳು ಆವರಿಸಿಕೊಂಡಿರುವುದರಿಂದ ವಿಕ್ರಂ ಲ್ಯಾಂಡರ್ ಪತ್ತೆ ಸಾಧ್ಯವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನಾಸಾದ ಲೂನಾರ್ ರೆಕಾನೈಸನ್ಸ್ ಆರ್ಬಿಟರ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೆ.17ರಂದು ನಾಸಾ ಲೂನಾರ್ ಆರ್ಬಿಟರ್ ಚಿತ್ರವನ್ನು ಸೆರೆ ಹಿಡಿದು ರವಾನಿಸಿತ್ತು.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ವಿಕ್ರಮ್ ಲ್ಯಾಂಡರ್ ಪತ್ತೆಗೆ ಮತ್ತೆ ನಾಸಾ ವಿಜ್ಞಾನಿಗಳು ಪ್ರಯತ್ನ ಮುಂದುವರೆಸಿದ್ದಾರೆ.

 ನೆರಳು ಸರಿದ ನಂತರ ಇನ್ನಷ್ಟು ಚಿತ್ರಗಳು ಲಭ್ಯ

ನೆರಳು ಸರಿದ ನಂತರ ಇನ್ನಷ್ಟು ಚಿತ್ರಗಳು ಲಭ್ಯ

ಹೆಚ್ಚು ನೆರಳು ಆವರಿಸಿಕೊಂಡಿರುವ ಕಾರಣ ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಲು ನಾಸಾಗೆ ಸಾಧ್ಯವಾಗಿಲ್ಲ, ಆದರೆ ಅಕ್ಟೋಬರ್‌ನಲ್ಲಿ ನೆರಳು ಸರಿದ ಬಳಿಕ ಹೆಚ್ಚು ಚಿತ್ರಗಳನ್ನು ತೆಗೆದಯಲು ಸಾಧ್ಯವಾಗುವುದು ಎಂದು ನಾಸಾ ತಿಳಿಸಿದೆ.

 ವಿಕ್ರಮ್ ಲ್ಯಾಂಡರ್ ಸೆ.6ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯಬೇಕಿತ್ತು

ವಿಕ್ರಮ್ ಲ್ಯಾಂಡರ್ ಸೆ.6ರಂದು ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯಬೇಕಿತ್ತು

ವಿಕ್ರಮ್ ಲ್ಯಾಂಡರ್ ಸೆ.6 ರಂದು ಸಂಜೆ 4.24ಕ್ಕೆ ಚಂದ್ರನ ದಕ್ಷಿಣ ಭಾಗದಲ್ಲಿ ಇಳಿಯಬೇಕಿತ್ತು. ಆದರೆ ಕೊನೆಯ ಸಮಯದಲ್ಲಿ ವಿಕ್ರಮ್ ಲ್ಯಾಂಡ್ ಗೋಚರಿಸಲೇ ಇಲ್ಲ. ಬಳಿಕ ನಾಸಾವು ವಿಕ್ರಮ್ ಲ್ಯಾಂಡರ್ ಪತ್ತೆಗೆ ಲೂನಾರ್ ಆರ್ಬಿಟರ್‌ನ್ನು ಕಳುಹಿಸಿದೆ. ಅದು ಅಕ್ಟೋಬರ್‌ನಲ್ಲಿ ಇನ್ನಷ್ಟು ಮಾಹಿತಿಯನ್ನು ನೀಡಲಿದೆ.

 ಏಳು ವರ್ಷಗಳ ಕಾಲ ಆರ್ಬಿಟರ್ ಕಾರ್ಯ ನಿರ್ವಹಿಸಲಿದೆ

ಏಳು ವರ್ಷಗಳ ಕಾಲ ಆರ್ಬಿಟರ್ ಕಾರ್ಯ ನಿರ್ವಹಿಸಲಿದೆ

ಆರ್ಬಿಟರ್ ಸುಮಾರು ಏಳು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದು, ಪೇಲೋಡ್ ಆಪರೇಶನ್ ಗಳೂ ಯಶಸ್ವಿಯಾಗಿ ನಡೆಯುತ್ತಿವೆ. ಆದರೆ ಲ್ಯಾಂಡರ್ ಕಡೆಯಿಂದ ಯಾವುದೇ ಸಿಗ್ನಲ್ ಲಭ್ಯವಾಗಿಲ್ಲ. ಲ್ಯಾಂಡರ್ ಸಂಪರ್ಕ ಕಡಿತಕ್ಕೆ ಕಾರಣವೇನು ಎಂಬ ಬಗ್ಗೆ ಈ ಸಮಿತಿ ವರದಿ ನೀಡಲಿದೆ. ನಾವು ಈಗ ಇಸ್ರೋದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಬಗ್ಗೆ ತಯಾರಿ ನಡೆಸುತ್ತಿದ್ದೇವೆ ಎಂದು ಶಿವನ್ ತಿಳಿಸಿದ್ದಾರೆ.

 ಚಂದ್ರಯಾನ ಶೇ.98ರಷ್ಟು ಯಶಸ್ವಿ

ಚಂದ್ರಯಾನ ಶೇ.98ರಷ್ಟು ಯಶಸ್ವಿ

ಚಂದ್ರಯಾನ 2 ಬಹುಪಾಲು ಯಶಸ್ಇಯಾಗಿದೆ, ಅಂತ್ಯದಲ್ಲಿ ಲ್ಯಾಂಡರ್ ಸಂಪರ್ಕ ಕಳೆದುಕೊಂಡರೂ ಶೇ.98 ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಹೇಳಿದೆ. ಆರ್ಬಿಟರ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಚಂದ್ರನ ದಕ್ಷಿಣ ಧ್ರುವದ ಕುರಿತು ಅದೇ ಅಗತ್ಯ ಮಾಹಿತಿಗಳನ್ನು ನೀಡಲಿದೆ.

English summary
Nasa mission imaged the targeted landing site of India’s Chandrayaan-2 lander, Vikram. The images were taken at dusk, and the team was not able to locate the lander. More images will be taken in October during a flyby in favorable lighting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X