ನರೋಡಾ ಹತ್ಯಾಕಾಂಡ: ಮಾಯಾ ಪರ ಸಾಕ್ಷಿ ಹೇಳಿದ ಅಮಿತ್ ಶಾ!

Posted By:
Subscribe to Oneindia Kannada

ಅಹಮದಾಬಾದ್, ಸೆ. 18: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನರೋಡಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಎಸ್ಐಟಿ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಬೆಳಗ್ಗೆ ಹಾಜರಾಗಿದ್ದಾರೆ.

ಮೋದಿ ಆಪ್ತೆ ಮಾಯಾ ಕೊಡ್ನಾನಿ ಮತ್ತೆ ಬಚಾವ್!

ಗುಜರಾತಿನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರ ಸಾಕ್ಷ್ಯ ಹೇಳಲು ಕೋರ್ಟಿಗೆ ಬಂದಿರುವ ಅಮಿತ್ ಅವರು, ಘಟನೆ ನಡೆದ ಸಂದರ್ಭ(ಫೆಬ್ರವರಿ 28, 2002)ದಲ್ಲಿ ಮಾಯಾ ಅವರು ಗುಜರಾತಿನ ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿದ್ದರು ಎಂದು ಸೆಷನ್ಸ್ ಕೋರ್ಟಿನಲ್ಲಿ ಹೇಳಿದ್ದಾರೆ.

Maya Kodnani was not in Naroda Gam on day riots broke out, Amit Shah tells court

ಗೋಧ್ರಾತ್ತರ ಹಿಂಸಾಚಾರ ಪ್ರಕರಣದಿಂದ ಬಚಾವಾಗಿರುವ ಬಿಜೆಪಿಯ ಹಾಲಿ ಅಧ್ಯಕ್ಷ ಅಮಿತ್ ಶಾ ಅವರಿಗೆ ದಿಂದ ಸಮನ್ಸ್ ಜಾರಿಯಾಗಿತ್ತು. ನರೋಡಾ ಗಾಮ್ ಹಿಂಸಾಚಾರ ಪ್ರಕರಣದ ಸಂಬಂಧ ಸಾಕ್ಷಿಯಾಗಿ ಕೋರ್ಟಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

ನರಮೇಧ: ಬಿಜೆಪಿ ಮಾಜಿ ಸಚಿವೆಗೆ 28 ವರ್ಷ ಶಿಕ್ಷೆ

ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಯಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ವೃತ್ತಿಯಿಂದ ಸ್ತ್ರೀರೋಗ ತಜ್ಞೆಯಾಗಿರುವ ಮಾಯಾ ಅವರು ಘಟನೆ ನಡೆದ ದಿನದಂದು ಅಹ್ಮದಾಬಾದ್ ನಗರದ ಅಸರ್ವ ಪ್ರದೇಶದಲ್ಲಿ ನರ್ಸಿಂಗ್ ಹೋಂನಲ್ಲಿದ್ದರು ಎಂದು ವಾದಿಸಲಾಗಿದ್ದು, ಇದಕ್ಕೆ ಅಮಿತ್ ಹಾಗೂ ಇತರೆ 13 ಮಂದಿಗೆ ಸಮನ್ಸ್ ನೀಡುವಂತೆ ಮಾಯಾ ಕೋರಿದ್ದರು.

ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 11 ಮುಸ್ಲಿಮರ ಹತ್ಯೆಯಾಗಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು. ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP national president Amit Shah on Monday informed a sessions court in Ahmedabad that the former Gujarat minister Maya Kodnani was not present in Naroda Gam on the day riots broke out.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ