ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಸ್ವೀಕರಿಸಿದ ವಾರದಲ್ಲೇ ಮೋದಿ ವಿದೇಶ ಪ್ರವಾಸ

|
Google Oneindia Kannada News

ಬೆಂಗಳೂರು, ಮೇ 31: ನರೇಂದ್ರ ಮೋದಿ ಅವರ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ನಿನ್ನೆ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಒಂದು ವಾರದಲ್ಲೇ ಮೋದಿ ಅವರು ತಮ್ಮ ಮೊದಲ ವಿದೇಶ ಪ್ರವಾಸ ಹೊರಡುತ್ತಿದ್ದಾರೆ.

ಜೂನ್ 7 ಮತ್ತು 8ನೇ ತಾರೀಖಿನಂದು ಮೋದಿ ಅವರು ಶ್ರೀಲಂಕಾ ಮತ್ತು ಮಾಲ್ಡಿವ್ಸ್‌ಗೆ ಪ್ರವಾಸ ಹೊರಟಿದ್ದು, ಮೊದಲಿಗೆ ಮಾಲ್ಡಿವ್ಸ್‌ಗೆ ಭೇಟಿ ನೀಡಿ ಆ ನಂತರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದ್ದಾರೆ.

ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

ಸಂಸತ್ತನ್ನು ಉದ್ದೇಶಿಸಿ ಮಾತನಾಡುವಂತೆ ಮಾಲ್ಡಿವ್ಸ್‌ ನ ಅಧ್ಯಕ್ಷ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಹಾಗಾಗಿ ಮೋದಿ ಅವರು ಮೊದಲು ಮಾಲ್ಡಿವ್ಸ್‌ಗೆ ಭೇಟಿ ನೀಡಿ ಆ ನಂತರ ಶ್ರೀಲಂಕಾಕ್ಕೆ ತೆರಳಲಿದ್ದಾರೆ.

Narendra Modi visiting Maldives and Sri Lanka on June 7-8

ಮೋದಿ ಅವರ ಶ್ರೀಲಂಕಾ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೆ ಭಾರಿ ಭಯೋತ್ಪಾದಕ ದಾಳಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ದಾಳಿಯಾದ ಕೆಲವೇ ದಿನಗಳ ಅವಧಿಯಲ್ಲಿ ಮೋದಿ ಭೇಟಿ ನೀಡುತ್ತಿದ್ದಾರೆ. ಇದು ಆ ದೇಶದ ಸ್ಥೈರ್ಯ ಹೆಚ್ಚಿಸಿ ಶ್ರೀಲಂಕಾ ಮತ್ತು ಭಾರತದ ಬಾಂದವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಭವ ಇದೆ.

ಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿಪ್ರಧಾನಿಯಾದ ಬಳಿಕ ಮೊದಲ ಮಹತ್ವದ ನಿರ್ಧಾರ ಪ್ರಕಟಿಸಿದ ಮೋದಿ

ಮೋದಿ ಅವರು ಕಳೆದ ಅವಧಿಯಲ್ಲಿ ಸಾಕಷ್ಟು ವಿದೇಶ ಪ್ರವಾಸ ಮಾಡಿದ್ದರು, ಇದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಗೌರವವನ್ನು ತಂದುಕೊಟ್ಟಿತ್ತು, ಬಂಡವಾಳದ ಹರಿವೂ ತಂದಿತ್ತು. ಅದರ ಜೊತೆಗೆ ಟೀಕೆಗಳಿಗೂ ಗುರಿಯಾಗಿತ್ತು.

English summary
Prime minister visiting the Maldives and Sri Lanka on June 7-8 this is his first foreign tour after he took oath as PM for the second time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X