ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಆಪ್‌ನಲ್ಲಿ ಮಹಿಳೆಯರನ್ನು ಹಾಡಿ ಹೊಗಳಿದ ಪ್ರಧಾನಿ

By Manjunatha
|
Google Oneindia Kannada News

ನವದೆಹಲಿ, ಜುಲೈ 12: ಆರ್ಥಿಕ ಸ್ವಾವಲಂಬಿ ಮಹಿಳೆಯರು ಸಾಮಾಜಿಕ ಕೆಡುಕುಗಳಿಗೆ ಅಡ್ಡಗೋಡೆಯಾಗಿ ನಿಲ್ಲುವ ಶಕ್ತಿ ಹೊಂದಿರುತ್ತಾರೆ, ಆ ಮೂಲಕ ಸಮಾಜವನ್ನು ಸ್ವಚ್ಛ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನರೇಂದ್ರ ಮೋದಿ ಆಪ್ ಮೂಲಕ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸ್ವ-ಸಹಾಯ ಗುಂಪುಗಳ ಮಹಿಳೆಯರೊಂದಿಗೆ ಅವರು ಮಾತನಾಡಿದರು. ಸಂವಾದದಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ತಂದಿರುವ ಯೋಜನೆಗಳ ಬಗ್ಗೆ ಮೋದಿ ಅವರು ಮಾಹಿತಿ ನೀಡಿದರು.

ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!ಮೋದಿ ಸರ್ಕಾರಕ್ಕೆ ಹಿತ ಸುದ್ದಿ: ಜಿಡಿಪಿ ಪ್ರಗತಿಯಲ್ಲಿ ಫ್ರಾನ್ಸ್ ಹಿಂದಿಕ್ಕಿದ ಭಾರತ!

ಮಹಿಳೆಯರ ಅಭಿವೃದ್ಧಿಗೆ ಅವರು ಆರ್ಥಿಕವಾಗಿ ಸಬಲರಾಗುವುದು ಅತ್ಯಂತ ಅವಶ್ಯಕ ಎಂದ ಅವರು, ಮಹಿಳೆಯರಿಗೆ ಕಲಿಸುವ ಅಗತ್ಯವಿಲ್ಲ ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಟ್ಟರೆ ಸಾಕು ಎಂದರು.

Narendra Modi today interact with self help groups members

2014 ರಿಂದ ಕೇಂದ್ರ ಸರ್ಕಾರವು 20 ಲಕ್ಷ ಸ್ವಸಹಾಯ ಗುಂಪು ತೆರೆಯಲು ಸಹಾಯ ಮಾಡಿದೆ. 20 ಕೋಟಿ ಕುಟುಂಬಗಳು ಈ ಸ್ವಸಹಾಯ ಗುಂಪುಗಳಿಂದ ಲಾಭ ಪಡೆದಿವೆ ಎಂದು ಮೋದಿ ಅವರು ಮಾಹಿತಿ ನೀಡಿದರು.

ಆರ್ಥಿಕತೆಯನ್ನು ಹಾಳುಗೆಡವಿದ್ದು ಯಾರು ಗೊತ್ತೆ? ಮೋದಿ ಮಾತಲ್ಲಿ ಕೇಳಿ! ಆರ್ಥಿಕತೆಯನ್ನು ಹಾಳುಗೆಡವಿದ್ದು ಯಾರು ಗೊತ್ತೆ? ಮೋದಿ ಮಾತಲ್ಲಿ ಕೇಳಿ!

ದೇಶದ 45 ಲಕ್ಷ ಮಹಿಳಾ ಸ್ವ ಸಹಾಯ ಗುಂಪುಗಳು ಒಟ್ಟು 5 ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರನ್ನು ಹುಟ್ಟು ಹಾಕಿವೆ ಎಂದ ಅವರು, ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ಅವರು ಮಹಿಳಾ ಗುಣಗಾನ ಮಾಡಿದರು.

ಮಹಿಳಾ ಸ್ವ ಸಹಾಯ ಗುಂಪುಗಳು ಗ್ರಾಮೀಣ ಭಾಗಗಳ ಮಹಿಳೆಯರ ಸಬಲೀಕರಣದ ಬೇರುಗಳು. ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಭಾಗದಲ್ಲಿ ಮಹಿಳಾ ಶಿಕ್ಷಣಕ್ಕೆ ಈ ಸ್ವ ಸಹಾಯ ಗುಂಪುಗಳು ಪರೋಕ್ಷ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.

English summary
Prime minister Narendra Modi today interact with women of self help groups. more than one crore women participated in the interaction from many states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X