ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ರಾಷ್ಟ್ರಪತಿ, ನರೇಂದ್ರ ಮೋದಿ ಭೇಟಿ : ಸರಕಾರ ರಚನೆ ಹಕ್ಕು ಮಂಡನೆ

|
Google Oneindia Kannada News

ನವದೆಹಲಿ, ಮೇ 25 : ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಶನಿವಾರ ಸಂಜೆ 8 ಗಂಟೆಗೆ ಭೇಟಿಯಾಗಲಿದ್ದು, ಹೊಸ ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ಶುಕ್ರವಾರವೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಂಪುಟದ ಎಲ್ಲ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆಗಳನ್ನು ರಾಷ್ಟ್ರಪತಿಗಳು ಸ್ವೀಕರಿಸಿದ್ದು, ಹೊಸ ಸರಕಾರ ರಚನೆಗೆ ಹಾದಿ ಸುಗಮವಾಗಿಸಿದ್ದಾರೆ.

ರಾಷ್ಟ್ರಪತಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ನರೇಂದ್ರ ಮೋದಿ ರಾಷ್ಟ್ರಪತಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ ನರೇಂದ್ರ ಮೋದಿ

ಕೇಂದ್ರ ಸಂಪುಟದ ಶಿಫಾರಸಿನ ಮೇರೆಗೆ ಶನಿವಾರ ಬೆಳಿಗ್ಗೆ 16ನೇ ಲೋಕಸಭೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಔಪಚಾರಿಕವಾಗಿ ವಿಸರ್ಜಿಸಿದರು. ಲೋಕಸಭೆಯನ್ನು ವಿಸರ್ಜಿಸಲು ಶುಕ್ರವಾರವೇ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು.

Narendra Modi to meet President to stake claim to form new government

ಆದರೆ, ಹೊಸ ಸರಕಾರ ರಚನೆಯಾಗಿ ಮಂತ್ರಿ ಮಂಡಳ ರಚನೆಯಾಗುವವರೆಗೆ ಮುಂದುವರಿಯುವಂತೆ ರಾಷ್ಟ್ರಪತಿಗಳು ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಬರುವ ವಾರ ನರೇಂದ್ರ ಮೋದಿಯವರು ಮಂತ್ರಿ ಮಂಡಳದ ಸಮೇತ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೂರತ್ ಅಗ್ನಿ ದುರಂತ: ಮೃತ ವಿದ್ಯಾರ್ಥಿಗಳಿಗಾಗಿ ಮೋದಿ ಕಣ್ಣೀರು ಸೂರತ್ ಅಗ್ನಿ ದುರಂತ: ಮೃತ ವಿದ್ಯಾರ್ಥಿಗಳಿಗಾಗಿ ಮೋದಿ ಕಣ್ಣೀರು

ಎನ್ಡಿಎದ ಸಂಸದರು ಶನಿವಾರ ಸಂಜೆ 5 ಗಂಟೆಗೆ ಸಭೆ ಸೇರಲಿದ್ದು, ನರೇಂದ್ರ ಮೋದಿಯವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಲಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಈಗಾಗಲೆ ರಾಷ್ಟ್ರಪತಿಗಳಿಗೆ ಎಲ್ಲ ಸಂಸದರ ಪಟ್ಟಿಯನ್ನು ಹಸ್ತಾಂತರಿಸಿದೆ. ಎನ್ಡಿಎದ ನಾಯಕರು ಕೂಡ 7 ಗಂಟೆಗೆ ರಾಷ್ಟ್ರಪತಿಯನ್ನು ಭೇಟಿ ಮಾಡಲಿದ್ದಾರೆ.

ಮುಖ್ಯ ಅತಿಥಿಗಳು : ಮೇ ಕೊನೆಯ ವಾರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದ್ದು, ವಿದೇಶದ ರಾಜಕಾರಣಿಯೊಬ್ಬರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿಯ ಬಗ್ಗೆ, ನಮಗೆ ಈ ಕುರಿತು ಯಾವುದೇ ಮಾಹಿತಿ ಬಂದಿಲ್ಲ, ಬಂದರೆ ಖಚಿತಪಡಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014ರಲ್ಲಿ ನರೇಂದ್ರ ಮೋದಿಯವರು ಸಾರ್ಕ್ ರಾಷ್ಟ್ರಗಳ ನಾಯಕರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದರು. ಪಾಕಿಸ್ತಾನದ ಅಂದಿನ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಬಾರಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗಿಯಾಗುವ ಸಂಭವನೀಯತೆಯಿದೆ.

ಯಾರ್ಯಾರಿಗೆ ಮಂತ್ರಿಗಿರಿ : ಪ್ರಮುಖ ಹುದ್ದೆಗಳಾದ ಗೃಹ ಖಾತೆ, ಹಣಕಾಸು ಸೇರಿದಂತೆ ಯಾವ ಖಾತೆ ಯಾರಿಗೆ ಸಿಗಲಿದೆ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಗೃಹ ಖಾತೆಗೆ ಅಮಿತ್ ಶಾ ಅವರ ಹೆಸರು ಕೇಳಿಬರುತ್ತಿದ್ದರೆ, ಹಣಕಾಸು ಖಾತೆಗೆ ಪಿಯೂಶ್ ಗೋಯಲ್ ಅವರ ಹೆಸರು ಹರಿದಾಡುತ್ತಿದೆ. ಕರ್ನಾಟಕದಿಂದ 25 ಸಂಸದರು ಆಯ್ಕೆಯಾಗಿರುವುದರಿಂದ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

ಮೇ 23ರಂದು ನಡೆದ 17ನೇ ಲೋಕಸಭಾ ಚುನಾವಣೆಯ ಮತಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷ 303 ಕ್ಷೇತ್ರಗಳಲ್ಲಿ ಗೆದ್ದಿದೆ ಮತ್ತು ಎನ್ಡಿಎ ಒಟ್ಟಾರೆಯಾಗಿ 353 ಸ್ಥಾನಗಳನ್ನು ಬಾಚಿಕೊಂಡಿದೆ. ಎರಡನೇ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಕೇವಲ 52 ಸೀಟುಗಳನ್ನು ತನ್ನದಾಗಿಸಿಕೊಂಡಿದೆ.

English summary
Prime minister Narendra Modi to meet President Ram Nath Kovind to stake claim to form new government, after stupendous victory in Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X