ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ಗೆ 'ಥ್ಯಾಂಕ್ಸ್' ಹೇಳಿದ ಪ್ರಧಾನಿ ನರೇಂದ್ರ ಮೋದಿ

|
Google Oneindia Kannada News

Recommended Video

ನರೇಂದ್ರ ಮೋದಿ ಕಾಂಗ್ರೆಸ್ ಗೆ ಥ್ಯಾಂಕ್ಸ್ ಹೇಳಿದ ಕಾರಣ? | Oneindia Kannada

ನವದೆಹಲಿ, ಜುಲೈ 31: ಲೋಕಸಭೆಯಲ್ಲಿ ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ನಡೆಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವಿರೋಧ ಪಕ್ಷಗಳ ವಂಚನೆ ಮತ್ತು ಹುಳುಕುಗಳನ್ನು ತೆರೆದಿಡುವುದಕ್ಕೆ ಕಾಂಗ್ರೆಸ್ ಅವಕಾಶ ನೀಡಿದೆ ಎಂದು ಮೋದಿ ಹೇಳಿದ್ದಾರೆ.

ವಿಶ್ವಾಸ ಗೆದ್ದಿದ್ದಕ್ಕೆ ಜನತೆಗೆ ಟ್ವಿಟ್ಟರ್ ನಲ್ಲಿ ಮೋದಿ ಕೃತಜ್ಞತೆವಿಶ್ವಾಸ ಗೆದ್ದಿದ್ದಕ್ಕೆ ಜನತೆಗೆ ಟ್ವಿಟ್ಟರ್ ನಲ್ಲಿ ಮೋದಿ ಕೃತಜ್ಞತೆ

ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಮೋದಿ, ತಮ್ಮ ಸರ್ಕಾರದ ವಿರುದ್ಧ ವಿರೋಧಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವು ಅದರ ರಾಜಕೀಯ ಅಪ್ರಬುದ್ಧತೆ ಮತ್ತು ಹೊಂದಾಣಿಕೆ ಹಾಗೂ ಬೆಂಬಲದ ಕೊರತೆ ಹೊಂದಿರುವುದನ್ನು ಬಹಿರಂಗಪಡಿಸಿತು ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

narendra modi thanked congress for no confidence motion

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ಸರ್ಕಾರವು ತನ್ನ ಬಹುಮತ ಕಳೆದುಕೊಂಡಾಗ ಅಥವಾ ದೇಶದಲ್ಲಿ ಅಶಾಂತಿ ನೆಲೆಸಿದ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲಾಗುತ್ತದೆ.

ಪ್ರಧಾನಿ ಮೋದಿಗೆ ಮಾತಿನ ಮೊನಚಿನಲ್ಲೇ ಚುಚ್ಚಿದ ರಾಹುಲ್ ಗಾಂಧಿ!ಪ್ರಧಾನಿ ಮೋದಿಗೆ ಮಾತಿನ ಮೊನಚಿನಲ್ಲೇ ಚುಚ್ಚಿದ ರಾಹುಲ್ ಗಾಂಧಿ!

ಆದರೆ, ಇಲ್ಲಿ ಅಂತಹ ನಿರ್ಣಯ ಮಂಡಿಸಲು ಯಾವುದೇ ಸೂಕ್ತ ಕಾರಣವಿರಲಿಲ್ಲ. ಇದು 326 ಅದರ ವಿರುದ್ಧ ಹಾಗೂ ಕೇವಲ 126 ಮಂದಿ ಅದರ ಪರವಾಗಿ ಮತ ಹಾಕಿದ ಹೀನಾಯ ಸೋಲಾಗಿದೆ ಎಂದು ಹೇಳಿದ್ದಾಗಿ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

ಸಚಿವರಾದ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್ ಮುಂತಾದವರು ಸಭೆಯಲ್ಲಿ ಮಾತನಾಡಿದರು.

English summary
BJP parlialmentary meeting: Prime Minister Narendra Modi said that he was thankfull to Congress over no confidence motion as it was allowed him to expose the opposition's hollowness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X