ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಭ್ಯತೆ,ಸ್ವಾತಂತ್ರ್ಯ, ರೈತರ ಏಳಿಗೆ 'ಖಾದಿ' ಯಲ್ಲಿದೆ: ಮೋದಿ

By Mahesh
|
Google Oneindia Kannada News

ನವದೆಹಲಿ, ಜ. 31: ದೇಶದ ಸಭ್ಯತೆ, ಧಾರ್ಮಿಕತೆ, ಸ್ವಾತಂತ್ರ್ಯ, ರೈತರ ಏಳಿಗೆ ಎಲ್ಲವೂ ಖಾದಿಯಲ್ಲಿದೆ ಎಂದು ಸರ್ದಾರ್ ಪಟೇಲ್ ಅವರು ಹೇಳಿದ್ದರು. ಮಹಾತ್ಮ ಗಾಂಧೀಜಿ ಅವರು ಖಾದಿಗೆ ಮಹತ್ವ ತಂದರು. ಈಗ ಯುವ ಪೀಳಿಗೆ ಇಂದಿನ ಫ್ಯಾಷನ್, ಹೆಗ್ಗುರತು ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಜನವರಿ 31, ಬೆಳಗ್ಗೆ ಆಕಾಶವಾಣಿ ಮೂಲಕ 16ನೇ ಬಾರಿಗೆ ತಮ್ಮ ಮನದ ಮಾತು ಬಿಚ್ಚಿಟ್ಟ ಪ್ರಧಾನಿ ಅವರು ಖಾದಿ, ಸ್ಟಾರ್ಟ್ ಅಪ್ ಇಂಡಿಯಾ, ರೈತರಿಗೆ ತಂತ್ರಜ್ಞಾನ, ಮಹಾತ್ಮಾ ಗಾಂಧೀಜಿ, ಸರ್ದಾರ್ ಪಟೇಲ್, ಹುತಾತ್ಮ ಯೋಧರ ಬಗ್ಗೆ ಮಾತನಾಡಿದರು.

ಮನ್ ಕಿ ಬಾತ್ ಈಗ ಮೊಬೈಲಿನಲ್ಲಿ ಯಾವಾಗಾದರೂ ಕೇಳಿಸಿಕೊಳ್ಳಬಹುದು. ಸದ್ಯಕ್ಕೆ ಇದು ಹಿಂದಿ ಭಾಷೆಯಲ್ಲಿದೆ. ಸದ್ಯದಲ್ಲೇ ನಿಮ್ಮ ಮಾತೃಭಾಷೆಯಲ್ಲಿ ಕೇಳಿಸಿಕೊಳ್ಳಬಹುದು ಎಂದು ಮೋದಿ ಭರವಸೆ ನೀಡಿದರು.

Narendra Modi's All India Radio show

ಪ್ರಧಾನಿ ಅವರ ಮನದ ಮಾತಿನ ಮುಖ್ಯಾಂಶಗಳು:
* ಮಹಾತ್ಮ ಗಾಂಧೀಜಿ ಅವರ ಸ್ಮರಣೆಯಲ್ಲಿ ನಾವು ಹುತಾತ್ಮರನ್ನು ಜನವರಿ 30ರಂದು ಸ್ಮರಿಸಿದೆವು. ನಮಗಾಗಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳಿಗಾಗಿ ನಾವು 2 ನಿಮಿಷ ಮೌನಚಾರಣೆ ಮಾಡುವುದು ಮಹತ್ಕಾರ್ಯ ಎಂದು ನಾನು ನಂಬಿದ್ದೇನೆ.
* ಒಟ್ಟಿಗೆ ಸಾಗೋಣ, ಒಕ್ಕೊರಲ ದನಿಗೂಡಿಸೋಣ ಈಗ ಒಂದೇ ಮನಸ್ಸಿನಿಂದ ದೇಶದ ಉನ್ನತಿಗೆ ದುಡಿಯೋಣ.


* ಖಾದಿ ಈಗ ದೇಶದ ಹೆಗ್ಗುರತಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ. ಕೋಟ್ಯಂತರ ಕುಟುಂಬಗಳ ದೈನಂದಿನ ಬದುಕಿನ ಆಸರೆಯಾಗಿದೆ.
* ಈ ದಿನ ಸೌರಶಕ್ತಿಯಿಂದ ಚರಕ ಚಲಾಯಿಸಲಾಗುತ್ತಿದೆ. ನನಗೆ ಇದರ ಬಗ್ಗೆ ಜನರು ಪತ್ರ ಬರೆಯುತ್ತಾರೆ. ಯಾವುದೇ ಕ್ಷೇತ್ರದ ಹೊಸ ಆವಿಷ್ಕಾರ, ಜನೋಪಯೋಗಿ ಸಾಧನಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ನಾನು ಜನತೆಯ ಮುಂದಿಡುತ್ತೇನೆ.
* ಬೇಟಿ ಬಚಾವೋ ಬೇಟಿ ಪಠಾವೋ ಯೋಜನೆ ಮೂಲಕ ಹರ್ಯಾಣ ಹಾಗೂ ಗುಜರಾತಿನಲ್ಲಿ ಭಾರಿ ಬದಲಾವಣೆ ತರಲಾಗಿದೆ. ಹೆಣ್ಣು ಮಕ್ಕಳಿಗೆ ಗೌರವದ ರಕ್ಷಣೆ ದೇಶದೆಲ್ಲೆಡೆ ಸಿಗಬೇಕಿದೆ.

* ರೈತರಿಗೆ ಕೃಷಿ ಸಾಲದ ಜೊತೆಗೆ ಕೃಷಿ ವಿಮೆ ಯೋಜನೆ ಬಗ್ಗೆ ಪ್ರೀಮಿಯಂ ಕಟ್ಟುವುದರ ಬಗ್ಗೆ ಇರುವ ವ್ಯತ್ಯಾಸದ ಬಗ್ಗೆ ತಿಳಿಸಿ ಕೊಡಬೇಕಾಗುತ್ತದೆ.
* ಮುಂದಿನ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ ದೇಶದ ಶೇ 50ರಷ್ಟು ರೈತರಿಗೆ ತಲುಪಿಸಲು ನಿಮ್ಮೆಲ್ಲರ ಸಹಾಯ ಬೇಕಿದೆ.

English summary
Prime Minister of India, Narendra Modi shares his thoughts, discusses crucial issues with the people across the country through Mann Ki Baat programme. The 16th edition of the programme aired on All India Radio (AIR) on Sunday, Jan 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X