ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಗೆಳೆಯರಿಗೆ ಭಾರತೀಯರ 1 ಲಕ್ಷ ಕೋಟಿ: ರಾಹುಲ್ ಆರೋಪ ಏನಿದು?

|
Google Oneindia Kannada News

ನವದೆಹಲಿ, ಜುಲೈ 28: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಲೇವಡಿ ಮಾಡಿದ್ದಾರೆ. ರಫೇಲ್ ವ್ಯವಹಾರದಲ್ಲಿ ಪ್ರಧಾನಿಗಳ ಸ್ನೇಹಿತರಿಗೆ ಸಿಗುವ ವಾಸ್ತವ ಲಾಭ ಇಪ್ಪತ್ತು ಬಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಿದ್ದಾರೆ.

ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮತ್ತು ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಕಾಂಗ್ರೆಸ್ ನಿರಂತರ ವಾಗ್ದಾಳಿ ನಡೆಸುತ್ತಿದೆ. ರಿಲಯನ್ಸ್ ಡಿಫೆನ್ಸ್ ಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಪ್ಪಂದದಲ್ಲಿ ಬದಲಾವಣೆ ಮಾಡಲಾಗಿದೆ. ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಬಹಳ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ರಫೇಲ್ ಒಪ್ಪಂದದಲ್ಲಿ ಮಾಡಿಕೊಟ್ಟಿರುವುದು 16 ಬಿಲಿಯನ್ ಅಮೆರಿಕನ್ ಡಾಲರ್ ಅಂತ ಹೇಳಿದ್ದೆ. ಆದರೆ ನನ್ನಿಂದ ತಪ್ಪಾಗಿದೆ. ಕ್ಷಮೆ ಕೇಳ್ತೇನೆ. ಅದರಿಂದ ಆಗುವ ಲಾಭ 20 ಬಿಲಿಯನ್ ಅಮೆರಿಕನ್ ಡಾಲರ್. ಅಂದರೆ 1,30,000 ಕೋಟಿ ರುಪಾಯಿಗೆ ಸಮ ಎಂದಿದ್ದಾರೆ.

Narendra Modis friend got benefit of 20 billion dollar in Rafale deal: Rahul

ಮುಂದಿನ ಐವತ್ತು ವರ್ಷದಲ್ಲಿ ಭಾರತದ ತೆರಿಗೆದಾರರ ಹಣ ಒಂದು ಲಕ್ಷ ಕೋಟಿ ರುಪಾಯಿಯು ಮೂವತ್ತಾರು ರಫೇಲ್ ಜೆಟ್ ಗಳ ನಿರ್ವಹಣೆಗೆ ಅಂತಲೇ ಹೋಗುತ್ತದೆ. ಈ ಆರೋಪ ನಿರಾಕರಿಸುವುದಕ್ಕೆ ರಕ್ಷಣಾ ಸಚಿವರು ಒಂದು ಪತ್ರಿಕಾಗೋಷ್ಠಿ ಮಾಡ್ತಾರೆ. ಆದರೆ ಸತ್ಯವನ್ನು ಇಲ್ಲಿ ತೆರೆದಿಡಲಾಗಿದೆ ಎಂದು ರಿಲಯನ್ಸ್ ನ ಪ್ರೆಸೆಂಟೇಷನ್ ಮಾಹಿತಿ ನೀಡಲಾಗಿದೆ.

ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆಯೇ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ನಿಂದ ಹಕ್ಕು ಚ್ಯುತಿ ಮಂಡಿಸಲು ನೋಟಿಸ್ ನೀಡಲಾಗಿದೆ.

English summary
PM Narendra Modi's friend got benefit of 20 billion dollar in Rafale deal, alleged by Congress president Rahul Gandhi. He alleged against defence minister Nirmala Sitaraman also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X