ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ 66ನೇ ಹುಟ್ಟುಹಬ್ಬ ಗಿನ್ನಿಸ್ ದಾಖಲೆಗಳ ಪಟ್ಟಿಗೆ!

By Ramesh
|
Google Oneindia Kannada News

ನವದೆಹಲಿ, ಸೆ. 16 : ಪ್ರಧಾನಿ ನರೇಂದ್ರ ಮೋದಿ ತಮ್ಮ 66ನೇ ಹುಟ್ಟುಹಬ್ಬವನ್ನು ಗುಜರಾತ್ ನಲ್ಲಿ ಅಂಗವಿಕಲ ಮಕ್ಕಳೊಂದಿಗೆ ಆಚರಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಇವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಲು ಇವರ ಅಭಿಮಾನಿಗಳು ಗುಜರಾತ್ ನಲ್ಲಿ ಎಲ್ಲಾ ರೀತಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಸೆ.17 ರಂದು ಗುಜರಾತ್ ನ ಗಾಂಧಿನಗರಕ್ಕೆ ತೆರಳಿ ಮೊದಲು ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದು ಕುಟುಂಬದವರನ್ನು ಭೇಟಿಯಾಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನ ನಿಮಿತ್ತ ದೆಹಲಿ ಸೇರಿದಂತೆ ವಿವಿಧೆಡೆ ಅವರ ಜನ್ಮದಿನವನ್ನು ವಿಭಿನ್ನವಾಗಿ ಅಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಅಷ್ಟೇ ಅಲ್ಲದೆ ಪ್ರಧಾನಿ ಮೋದಿ ಜನ್ಮದಿನದಂದು ನಾಲ್ಕು ಗಿನ್ನಿಸ್ ವಿಶ್ವದಾಖಲೆಗಳನ್ನು ಸೃಷ್ಟಿಸಲು ವೇದಿಕೆ ಸಹ ಸಜ್ಜಾಗಿದೆ.

ಲಾಂಛನವನ್ನು ರೂಪಿಸಿ ಗಿನ್ನಿಸ್ ದಾಖಲೆ

ಲಾಂಛನವನ್ನು ರೂಪಿಸಿ ಗಿನ್ನಿಸ್ ದಾಖಲೆ

ಗುಜರಾತ್ ನ ನವಸಾರಿ ಜಿಲ್ಲೆಯಲ್ಲಿ 11,000 ವಿಕಲಚೇತನರಿಗೆ ವಿಶೇಷವಾಗಿ ವಿನ್ಯಾಸ ಪಡಿಸಿದ ಕಿಟ್‍ ಗಳನ್ನು ಮೋದಿ ವಿತರಿಸಲಿದ್ದಾರೆ. ಗಾಲಿಕುರ್ಚಿಯಲ್ಲಿ ಗರಿಷ್ಠ ಸಂಖ್ಯೆಯ ಸುಮಾರು 1,000 ಜನರು ಒಂದೆಡೆ ಸೇರಿ ಒಂದು ಚಿತ್ರ ಅಥವಾ ಲಾಂಛನವನ್ನು ರೂಪಿಸಿ ಗಿನ್ನಿಸ್ ದಾಖಲೆ ಮಾಡಲು ಹೊರಟಿದ್ದಾರೆ.

1,000 ಕಿವುಡರಿಗೆ ಮಶಿನ್ ವಿತರಣೆ

1,000 ಕಿವುಡರಿಗೆ ಮಶಿನ್ ವಿತರಣೆ

1,000 ಶ್ರವಣ ಸಾಧನಗಳನ್ನು ನೀಡಿ ಆಸ್ಟ್ರೇಲಿಯಾದ ದಾಖಲೆಯನ್ನು ಮುರಿಯಲಿದ್ದಾರೆ. ಹಾಗೆಯೇ ಫಲಾನುಭವಿಗಳಿಗೆ ಗಾಲಿಕುರ್ಚಿಗಳು, ಟ್ರೈಸೈಕಲ್ ಗಳು, ಸೆರೆಬ್ರಲ್ ಪಾಸ್ಲಿ ರೋಗಿಗಳಿಗೆ ವಿಶೇಷ ಕುರ್ಚಿಗಳು ಹಾಗೂ ಶೈಕ್ಷಣಿಕ ಕಿಟ್‍ ಗಳನ್ನು ನೀಡಲಾಗುವುದು.

1000 ವಿಕಲಚೇತನರು ದೀಪಾ ಹಚ್ಚಲಿದ್ದಾರೆ.

1000 ವಿಕಲಚೇತನರು ದೀಪಾ ಹಚ್ಚಲಿದ್ದಾರೆ.

ಈ ಹಿಂದೆ ಅಮೆರಿಕದಲ್ಲಿ 346 ಜನರು ದೀಪಾ ಬೆಳಗಿದ ದಾಖಲೆಯಾಗಿತ್ತು. ಈ ದಾಖಲೆಯನ್ನು ಮೋದಿ ಅವರ ಹುಟ್ಟುಹಬ್ಬದ ದಿನದಂದು ಒಂದೇ ಸ್ಥಳದಲ್ಲಿ 1000 ದೀಪಗಳನ್ನು ಬೆಳಗಿಸಿ ವಿಶ್ವ ದಾಖಲೆ ನಿರ್ಮಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

1 ಟನ್ ಎತ್ತರದ ಪಿರಮಿಡ್ ಕೇಕ್.

1 ಟನ್ ಎತ್ತರದ ಪಿರಮಿಡ್ ಕೇಕ್.

ಇಷ್ಟು ಮಾತ್ರವಲ್ಲದೇ ಹುಟ್ಟುಹಬ್ಬಕ್ಕೆ ಸುಮಾರು 1 ಟನ್ ತೂಕವಿರುವ ವಿಶ್ವದಲ್ಲಿಯೇ ಅತ್ತೀ ಎತ್ತರ ಪಿರಮಿಡ್ ಆಕೃತಿಯ ಕೇಕ್ ಗೆ ಸೂರತ್ ನಲ್ಲಿ ಮೋದಿ ಅವರಿಂದ ಕತ್ತರಿ ಬೀಳಿದೆ. ಇದು ಸಹ ಗಿನ್ನಿಸ್ ದಾಖಲೆಗಳ ಪಟ್ಟಿಗೆ ಸೇರಲಿದೆ.

ಬುಕ್ ಆಫ್ ರೆಕಾರ್ಡ್ ನ ಅಧಿಕಾರಿಗಳು ಭಾಗಿ

ಬುಕ್ ಆಫ್ ರೆಕಾರ್ಡ್ ನ ಅಧಿಕಾರಿಗಳು ಭಾಗಿ

ಇವರ ಜನ್ಮದಿನ ಕಾರ್ಯಕ್ರಮಗಳಲ್ಲಿ ಬ್ರಿಟನ್ನಿನ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನ ಅಧಿಕಾರಿಗಳು ಭಾಗವಹಿಸಿ ಮೋದಿ ಅವರ ಮಹತ್ತರ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳಲ್ಲಿದ್ದಾರೆ.

English summary
Celebrations in connection with Prime Minister Narendra Modi's 66th birthday on September 17 at Navasari district in Gujarat will aim to set three Guinness World Records and one at the national level, the organisers said on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X