ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಮೋದಿ ವಿಶೇಷ ಪ್ರಾರ್ಥನೆ

By Mahesh
|
Google Oneindia Kannada News

ತಿರುಮಲ, ಮೇ.1: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನರೇಂದ್ರ ಮೋದಿ ಅವರೊಂದಿಗೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ಸನ್ನಿಧಿ ಸುಮಾರು 20 ನಿಮಿಷಗಳ ಕಾಲ ಮೋದಿ ಅವರು ಪ್ರಾರ್ಥನೆಯಲ್ಲಿ ತೊಡಗಿದ್ದರು. ತಿರುಪತಿ ತಿರುಮಲ ದೇವಸ್ಥಾನಂ ವತಿಯಿಂದ ಮೋದಿ ಅವರಿಗೆ ಭವ್ಯ ಸ್ವಾಗತ ನೀಡಲಾಗಿದೆ. ವೇದ ಘೋಷಗಳ ಮೂಲಕ ಆಶೀರ್ವದಿಸಲಾಗಿದೆ.

Modi in Tirupati

ತಿರುಪತಿಗೆ ಆಗಮಿಸುವುದಕ್ಕೂ ಮುನ್ನ ಮೋದಿ, ನಾಯ್ಡು ಹಾಗೂ ಪವನ್ ಅವರು ಶ್ರೀಕಾಳಹಸ್ತಿಯಲ್ಲಿ ವಾಯುಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರುಮೋದಿ, ನಾಯ್ಡು ಹಾಗೂ ಪವನ್ ಮೂವರು ತಿರುಪತಿಯಿಂದ 100 ಕಿ.ಮೀ ದೂರದಲ್ಲಿರುವ ಮದನಪಲ್ಲಿಗೆ ತೆರಳಿದ್ದಾರೆ.

ಆಂಧ್ರಪ್ರದೇಶದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮೋದಿ ಅವರು ನಿರತರಾಗಿದ್ದಾರೆ. ಹೈದರಾಬಾದಿನಲ್ಲಿ ನಾಯ್ಡು ಹಾಗೂ ಪವನ್ ಜತೆ ವೇದಿಕೆ ಹಂಚಿಕೊಂಡ ಮೋದಿ ಅವರು ಮತ್ತೊಮ್ಮೆ ಎನ್ ಡಿಎ ಮೈತ್ರಿ ಬಲಗೊಳಿಸಲು ಆಂಧ್ರಪ್ರದೇಶದಲ್ಲಿ ಮತ್ತೊಮ್ಮೆ ಮೋದಿ ಕಾಣಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಈ ಹಿಂದೆ ಕಾಶಿ ವಿಶ್ವನಾಥ, ಪುರಿ ಜಗನ್ನಾಥ ದೇಗುಲಕ್ಕೂ ಭೇಟಿ ನೀಡಿ ಆಶೀರ್ವಾದ ಬೇಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

English summary
BJP's prime ministerial candidate Narendra Modi today offered worship at the famous hill shrine of Lord Venkateswara near Tirupati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X