ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿಗ್ವಿಜಯದ ಬಳಿಕ ಪ್ರಧಾನಿ ಮೋದಿ ಮೊದಲ ವಿದೇಶ ಭೇಟಿ ಮಾಲ್ಡೀವ್ಸ್‌ಗೆ?

|
Google Oneindia Kannada News

Recommended Video

ಎರಡನೇ ಬಾರಿಗೆ ಪ್ರಧಾನಿಯಾದ ಮೋದಿ ಮೊದಲ ವಿದೇಶ ಭೇಟಿ ಈ ದೇಶಕ್ಕೆ

ನವದೆಹಲಿ, ಮೇ 27: ಭಾರಿ ಬಹುಮತದೊಂದಿಗೆ ಎರಡನೆಯ ಅವಧಿಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ಅವಧಿಯ ಮೊದಲ ವಿದೇಶ ಪ್ರವಾಸವನ್ನು ಮಾಲ್ಡೀವ್ಸ್‌ನಿಂದ ಆರಂಭಿಸಲಿದ್ದಾರೆ ಎನ್ನಲಾಗಿದೆ.

ದ್ವಿಪಕ್ಷೀಯ ಮಾತುಕತೆಗಾಗಿ ಮೋದಿ ಅವರು ಮಾಲ್ಡೀವ್ಸ್‌ಗೆ ಭೇಟಿ ನೀಡಲಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ಹಾಗೂ ಮಾಲ್ಡೀವ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.

ಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ ಮೇ 30ರ ಗುರುವಾರ ರಾತ್ರಿ 7ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಮಾಣ ವಚನ

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಮೋದಿ ಅವರು ತಮ್ಮ ಪ್ರಥಮ ವಿದೇಶ ಪ್ರವಾಸವನ್ನು ಭೂತಾನ್‌ನಿಂದ ಆರಂಭಿಸಿದ್ದರು.

Narendra Modi may visit maldives in june as first visit after poll victory

ಜೂನ್ ಮೊದಲಾರ್ಧದಲ್ಲಿ ಪ್ರಧಾನಿ ಅವರು ಮಾಲ್ಡೀವ್ಸ್ ರಾಜಧಾನಿ ಮಾಲೆಗೆ ಪ್ರಯಾಣಿಸಲಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ಮಾಲ್ಡೀವ್ಸ್ ಮಾಧ್ಯಮಗಳ ವರದಿ ಪ್ರಕಾರ ಜೂನ್ 7-8ರಂದು ಮೋದಿ ಅಲ್ಲಿಗೆ ಭೇಟಿ ನೀಡಲಿದ್ದಾರೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಾರ್ಚ್ ತಿಂಗಳಿನಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಕಳೆದ ವರ್ಷದ ನವೆಂಬರ್‌ನಲ್ಲಿ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೋಲಿಹ್ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದ್ವೀಪರಾಷ್ಟ್ರದೊಂದಿಗೆ ಸುಷ್ಮಾ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.

'ನಮ್ಮ ಗೆಲುವು ಪಶ್ಚಿಮ ಬಂಗಾಲದ ತನಕ ಕೇಳಿಸುವಂತೆ ಜೋರಾಗಿ ಕೂಗಿ' 'ನಮ್ಮ ಗೆಲುವು ಪಶ್ಚಿಮ ಬಂಗಾಲದ ತನಕ ಕೇಳಿಸುವಂತೆ ಜೋರಾಗಿ ಕೂಗಿ'

ಸೋಲಿಹ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕಾಗಿ ಮೋದಿ ಅವರು ನವೆಂಬರ್‌ನಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಈ ಮೂಲಕ ಮಾಲ್ಡೀವ್ಸ್ ಮತ್ತು ಭಾರತದ ಬಾಂಧವ್ಯದ ಮಹತ್ವವನ್ನು ಬಿಂಬಿಸಿದ್ದರು. ಮಾಲ್ಡೀವ್ಸ್‌ನಲ್ಲಿ ಚೀನಾ ತನ್ನ ಪ್ರಭಾವವನ್ನು ಬೀರಲು ಪ್ರಯತ್ನಿಸುತ್ತಿದೆ.

ಮೋದಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ ಜಗನ್ ಮೋದಿಯನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಿದ ಜಗನ್

ಕಳೆದ ವರ್ಷದ ಫೆಬ್ರವರಿ 5ರಂದು ಆಗಿನ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಹೇರಿದ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹಳಸಿತ್ತು. ಈ ನಿರ್ಧಾರವನ್ನು ಭಾರತ ಕಟುವಾಗಿ ಟೀಕಿಸಿತ್ತು. ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಚುನಾವಣಾ ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಯಥಾಸ್ಥಿತಿಗೆ ತರುವ ಮೂಲಕ ವಿಶ್ವಾಸಾರ್ಹತೆ ಉಳಿಸಿಕೊಳ್ಳುವಂತೆ ಒತ್ತಡ ಹೇರಿತ್ತು. 45 ದಿನಗಳ ಬಳಿಕ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಗಿತ್ತು.

ಅಧ್ಯಕ್ಷೀಯ ಚುನಾವಣೆಯಲ್ಲಿ ಯಮೀನ್ ಅವರನ್ನು ಸೋಲಿಸಿ ಸೋಲಿಹ್ ಅಧಿಕಾರಕ್ಕೆ ಬಂದಿದ್ದರು.

English summary
Prime Minister Narendra Modi expected to visit Maldives in June. This will be his first travel after retaining power in the Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X