ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ಮನ್ ಕೀ ಬಾತ್‌ನಲ್ಲಿ ಹೇಳಿದ ಮೋದಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 69ನೇ ಕಾರ್ಯಕ್ರಮ ಇದಾಗಿತ್ತು.

ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, "ಮಕ್ಕಳಿಗೆ ಕಥೆಯನ್ನು ಹೇಳಬೇಕು. ಕಥೆ ಹೇಳುವ ದೊಡ್ಡ ಪರಂಪರೆ ನಮ್ಮ ದೇಶದಲ್ಲಿದೆ. ರಾಮಾಯಣ, ಪಂಚತಂತ್ರದ ಕಥೆಗಳನ್ನು ನಾವು ಕೇಳಿದ್ದೇವೆ. ಅದನ್ನು ಮಕ್ಕಳಿಗೂ ಹೇಳಿಕೊಡಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್ ಮಸೂದೆಗಳು ರೈತ ವಿರೋಧಿ ಎಂದೇ ಇಲ್ಲ: ಉಲ್ಟಾ ಹೊಡೆದ ಹರ್ಸಿಮ್ರತ್ ಕೌರ್

"ತಮಿಳುನಾಡು ಮತ್ತು ಕೇರಳದಲ್ಲಿ ಮಕ್ಕಳಿಗೆ ಕಥೆ ಹೇಳಿ ಕೊಡುವ ದೊಡ್ಡ ಸಂಪ್ರದಾಯವಿದೆ. ಇಂದು ವೈಜ್ಞಾನಿಕ ಕಥೆಗಳನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಇಂಡಿಯನ್ ಸ್ಟೋರಿ ಟೆಲ್ಲಿಂಗ್ ನೆಟ್‌ ವರ್ಕ್‌ನಲ್ಲಿ ಹಲವಾರು ಕಥೆಗಳಿವೆ. ಬೆಂಗಳೂರಿನ ವಿಕ್ರಂ ಶೀಧರ್ ಬಾಪುವಿನ ಕುರಿತ ಕಥೆಗಳನ್ನು ಸಂಗ್ರಹ ಮಾಡಿದ್ದಾರೆ" ಎಂದು ನರೇಂದ್ರ ಮೋದಿ ಹೇಳಿದರು.

'ಮನ್ ಕೀ ಬಾತ್' ನಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಧಾನಿ ಮೋದಿ ಮಾತು'ಮನ್ ಕೀ ಬಾತ್' ನಲ್ಲಿ ಚನ್ನಪಟ್ಟಣ ಗೊಂಬೆಗಳ ಬಗ್ಗೆ ಪ್ರಧಾನಿ ಮೋದಿ ಮಾತು

Narendra Modi Mann Ki Baat September 30 Highlights

ನರೇಂದ್ರ ಮೋದಿ ಅವರು 'ಬೆಂಗಳೂರು ಸ್ಟೋರಿ ಟೆಲ್ಲಿಂಗ್ ಸೊಸೈಟಿ'ಯ ಅರ್ಪಣಾ ಅತ್ರೇಯ, ಶೈಲಜಾ ಸಂಪತ್, ಸೌಮ್ಯಾ ಶ್ರೀನಿವಾಸನ್, ಅರ್ಪಣಾ ಜೈಶಂಕರ್ ಜೊತೆ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅರ್ಪಣಾ ಅತ್ರೇಯ ಅವರು ಕೃಷ್ಣ ದೇವರಾಯ ಮತ್ತು ತೆನಾಲಿ ರಾಮನ ಕಥೆಯನ್ನು ಮನ್ ಕೀ ಬಾತ್ ಕೇಳುಗರಿಗಾಗಿ ಮೋದಿ ಅವರ ಕೋರಿಯಂತೆ ಕೇಳಿದರು. ಈ ಕಥೆಯನ್ನು ನರೇಂದ್ರ ಮೋದಿ ಅಪ್ಲಿಕೇಶನ್‌ನಲ್ಲಿ ಹಾಕುವುದಾಗಿ ಮೋದಿ ಹೇಳಿದರು.

ಮನ್ ಕೀ ಬಾತ್‌; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ ಮನ್ ಕೀ ಬಾತ್‌; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆಯುತ್ತಿರುವ ಹಿನ್ನಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ದಾಯಕ ಕಥೆಗಳನ್ನು ಹೇಳಿಕೊಡಬೇಕು. ನೀವೆಲ್ಲರೂ ಈ ಕೆಲಸವನ್ನು ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್‌ ಪರಿಸ್ಥಿತಿಯಲ್ಲಿ ನಮ್ಮ ಕೃಷಿಕರ ಜೀವನ ನಮಗೆ ಸ್ಪೂರ್ತಿ. ರೈತರು ಇಂತಹ ಸಮಯದಲ್ಲಿ ಎಷ್ಟು ಕಷ್ಟಪಡುತ್ತಿದ್ದಾರೆ. ಆತ್ಮ ನಿರ್ಭರ ಭಾರತಕ್ಕೆ ರೈತರ ಕೊಡುಗೆಯೂ ಅಪಾರವಾಗಿದೆ.

ರೈತ ಸಂಘದವರ ಜೊತೆ ನಾನು ಮಾತನಾಡುವಾಗ ಅವರು ಇಂದಿನ ದಿನಗಳಲ್ಲಿ ಹೇಗೆ ಕೃಷಿಯಲ್ಲಿ ಬದಲಾವಣೆಗಳು ಆಗುತ್ತಿವೆ ಎಂದು ಮಾಹಿತಿ ನೀಡುತ್ತಾರೆ.

ರೈತರು ಬೆಳೆಯುತ್ತಿರುವ ಸ್ವೀಟ್ ಕಾರ್ನ್, ಬೇಬಿ ಕಾರ್ನ್ ನೇರವಾಗಿ ಹೋಟೆಲ್‌ಗಳಿಗೆ ಸರಬರಾಜು ಆಗುತ್ತಿದೆ. ಇದರಿಂದಾಗಿ ರೈತರು 1 ರಿಂದ 2 ಲಕ್ಷದ ತನಕ ಆದಾಯವನ್ನು ಪಡೆಯುತ್ತಿದ್ದಾರೆ. ಪಾಲಿ ಹೌಸ್‌ನಲ್ಲಿ ಟೊಮೆಟೋ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಎಂದು ಮೋದಿ ಹೇಳಿದರು.

ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಕುಟುಂಬಗಳ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಕುಟುಂಬ ಸದಸ್ಯರನ್ನು ಮತ್ತಷ್ಟು ಹತ್ತಿರಕ್ಕೆ ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಕ್ಟೋಬರ್ ನಮಗೆ ವಿಶೇಷ ತಿಂಗಳಾಗಿದೆ. ನಾವು ಮಹಾತ್ಮ ಗಾಂಧಿಜೀ, ಜಯಪ್ರಕಾಶ್ ನಾರಾಯಣ್ ಅವರನ್ನು ನೆನಪು ಮಾಡಿಕೊಳ್ಳುತ್ತೇವೆ. ಆತ್ಮ ನಿರ್ಭರ ಭಾರತದ ಪಾಠವನ್ನು ಮೊದಲು ಹೇಳಿಕೊಟ್ಟಿದ್ದು ಮಹಾತ್ಮ ಗಾಂಧಿ ಎಂದು ಮೋದಿ ಬಣ್ಣಿಸಿದರು.

ಕೋವಿಡ್ ಪರಿಸ್ಥಿತಿಯಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿ. ದೇಶದ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ರಕ್ಷಣೆಗಾಗಿ ಎಲ್ಲರೂ ಸಹಕಾರ ನೀಡಿ. ಲಸಿಕೆ ಸಿಗುವ ತನಕ ಮುಂಜಾಗ್ರತೆಯೇ ದಾರಿ ಎಂದು ಮೋದಿ ಕರೆ ನೀಡಿದರು.

English summary
Prime minister of India Narendra Modi Mann ki baat radio program September 27, 2020. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X