ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಮನ್ ಕೀ ಬಾತ್; 82ನೇ ಸಂಚಿಕೆ ಮುಖ್ಯಾಂಶಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 24; ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 82ನೇ ಕಾರ್ಯಕ್ರಮ ಇದಾಗಿತ್ತು.

ಕೋವಿಡ್ ಲಸಿಕೆಯ ಕುರಿತು ಮಾತನ್ನು ಆರಂಭಿಸಿದ ಮೋದಿ 100 ಕೋಟಿ ಡೋಸ್ ಲಸಿಕೆ ನೀಡಿರುವುದಕ್ಕೆ ಆರೋಗ್ಯ ಕಾರ್ಯಕರ್ತರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು. ದೇಶಕ್ಕೆ ಸೋಂಕಿನ ವಿರುದ್ಧ ಹೋರಾಟ ಮಾಡಲು ಹೊಸ ಶಕ್ತಿ ಸಿಕ್ಕಿದೆ ಎಂದು ಮೋದಿ ಹೇಳಿದರು.

ಮೋದಿ ಮನ್ ಕೀ ಬಾತ್; ನದಿಗಳ ಮಹತ್ವ ತಿಳಿಸಿದ ಪ್ರಧಾನಿ ಮೋದಿ ಮನ್ ಕೀ ಬಾತ್; ನದಿಗಳ ಮಹತ್ವ ತಿಳಿಸಿದ ಪ್ರಧಾನಿ

Narendra Modi Mann Ki Baat October 24 Highlights in Kannada

"ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಭಾರತ ಸಾಧಿಸಿದ ಪ್ರಗತಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಸಾಬೀತು ಮಾಡಿದೆ. ನಮ್ಮ ದೇಶದ ಜನರ ಸಹಕಾರ, ಆರೋಗ್ಯ ಕಾರ್ಯಕರ್ತರ ಶ್ರಮದಿಂದ ಲಸಿಕೆ ನೀಡುವ ವಿಚಾರದಲ್ಲಿ ಐತಿಹಾಸಿಕ ಸಾಧನೆ ಮಾಡಲಾಗಿದೆ" ಎಂದು ಮೋದಿ ಬಣ್ಣಿಸಿದರು.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಯಾವುದಾದರೂ ಕಾರಯಕ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು ಆಗಸ್ಟ್ 29; ನರೇಂದ್ರ ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು

ಜಮ್ಮು ಮತ್ತು ಕಾಶ್ಮೀರದಲ್ಲಿನ ಇಬ್ಬರು ಸಹೋದರಿಯರು ಭಾರತೀಯ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ರಾಷ್ಟ್ರಧ್ವಜ ತಯಾರು ಮಾಡುತ್ತಾರೆ. ಸಹೋದರಿಯ ಕಾರ್ಯವನ್ನು ಮೋದಿ ಶ್ಲಾಘಿಸಿದರು.

ಮೋದಿ ಭಾಷಣದ ಮುಖ್ಯಾಂಶಗಳು

* ನವೆಂಬರ್ 15ರಂದು ಭಗವಾನ್ ಬಿರ್ಸಾ ಮುಂಡ ಜನ್ಮ ದಿನೋತ್ಸವ ಇದೆ. ಅವರನ್ನು 'ದರ್ತಿ ಅಬಾ' ಎಂದು ಕರೆಯುತ್ತಿದ್ದರು. ಹೀಗೆಂದರೆ ಭೂಮಿಯ ತಂದೆ ಎಂದು ಅರ್ಥ ಎಂದು ಹೇಳಿದರು.

* ರಂಗೋಲಿ ಕುರಿತು ಮಾತನಾಡಿದ ಮೋದಿ ವಿವಿಧ ರಾಜ್ಯಗಳಲ್ಲಿ ರಂಗೋಲಿಯನ್ನು ವಿವಿಧದ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತಿ ಸಚಿವಾಲಯ ಈ ಕುರಿತು ರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಲಿದೆ ಎಂದು ಹೇಳಿದರು.

* ಐಕ್ಯತಾ ದಿನದ ಅಂಗವಾಗಿ ತ್ರಿಪುರ ಪೊಲೀಸರು ತ್ರಿಪುರದಿಂದ ಏಕತಾ ಪ್ರತಿಮೆ ತನಕ ಬೈಕ್ ಜಾಥಾ ಆಯೋಜನೆ ಮಾಡಿದ್ದಾರೆ. ಇದರಿಂದದ ಪೂರ್ವ ಮತ್ತು ಪಶ್ಚಿಮವನ್ನು ಬೆಸೆದಂತೆ ಆಗುತ್ತದೆ ಎಂದರು.

* ಡ್ರೋಣ್ ಮೂಲಕ ಸಮೀಕ್ಷೆ ನಡೆಸಿ ಭೂ ದಾಖಲೆಗಳನ್ನು ಸಿದ್ಧಪಡಿಸಿ ನೀಡುವ ವಿಶ್ವದ ಮೊದಲ ರಾಷ್ಟ್ರ ಭಾರತವಾಗಿದೆ. ಡ್ರೋನ್‌ಗಳನ್ನು ಸಾಗಣೆಗೆ ಬಳಕೆ ಮಾಡುವತ್ತ ಸಹ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

ಸರ್ದಾರ್ ಪಟೇಲ್ ನೆನಪಿಸಿಕೊಂಡ ಮೋದಿ; ಮನ್ ಕೀ ಬಾತ್‌ನಲ್ಲಿ ಮೋದಿ ಸರ್ದಾರ್ ಪಟೇಲ್ ನೆನಪು ಮಾಡಿಕೊಂಡರು. ಮುಂದಿನ ರವಿವಾರ 31 ಅಕ್ಟೋಬರ್ ಗೆ ಸರ್ದಾರ್ ಪಟೇಲರ ಜಯಂತಿಯಿದೆ ಎಂದು ನಿಮಗೆ ತಿಳಿದಿದೆ. ಎಲ್ಲರ ಪರವಾಗಿ ಮತ್ತು ನನ್ನ ಪರವಾಗಿ ನಾನು ಉಕ್ಕಿನ ಮನುಷ್ಯನಿಗೆ ನಮನ ಸಲ್ಲಿಸುತ್ತೇನೆ.

31 ಅಕ್ಟೋಬರ್ ರಾಷ್ಟ್ರೀಯ ಏಕತೆಯ ದಿನವಾಗಿದೆ. ಏಕತೆಯ ಸಂದೇಶವನ್ನು ಸಾರುವ ಒಂದಲ್ಲ ಒಂದು ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಛ್‌ನ ಲಖಪತ್ ಕೋಟೆಯಿಂದ ಏಕತಾ ಪ್ರತಿಮೆವರೆಗೆ ಗುಜರಾತ್ ಪೋಲಿಸರು ಬೈಕ್ ಜಾಥಾ ಆರಂಭಿಸಿರುವುದು ನಿಮಗೆ ತಿಳಿದಿರಬಹುದು. ತ್ರಿಪುರಾ ಪೋಲಿಸರು ಏಕತಾ ದಿನದಾಚರಣೆಗೆ ತ್ರಿಪುರಾದಿಂದ ಏಕತಾ ಪ್ರತಿಮೆವರೆಗೆ ಬೈಕ್ ಜಾಥಾ ಹಮ್ಮಿಕೊಂಡಿದ್ದಾರೆ.

ಅಂದರೆ ಪೂರ್ವದಿಂದ ಪಶ್ಚಿಮದವರೆಗೆ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರದ ಪೋಲಿಸರು ಕೂಡ ಉರಿಯಿಂದ ಪಠಾನ್ ಕೋಟ್ ವರೆಗೆ ಇಂಥದ್ದೇ ಬೈಕ್ ಜಾಥಾ ಹಮ್ಮಿಕೊಂಡು ದೇಶದ ಏಕತೆಯ ಸಂದೇಶ ನೀಡುತ್ತಿದ್ದಾರೆ.

ಈ ಎಲ್ಲ ಪೋಲಿಸ್ ಪಡೆಗೆ ನಾನು ನಮನ ಸಲ್ಲಿಸುತ್ತೇನೆ. ಜಮ್ಮು ಕಾಶ್ಮೀರದ ಕುಪ್ವಾಡಾ ಜಿಲ್ಲೆಯ ಬಹಳಷ್ಟು ಸೋದರಿಯರ ಬಗ್ಗೆ ನನಗೆ ಒಂದು ವಿಷಯ ತಿಳಿದಿದೆ. ಈ ಸೋದರಿಯರು ಕಾಶ್ಮೀರದಲ್ಲಿ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಈ ಕೆಲಸ ದೇಶ ಭಕ್ತಿಯ ಭಾವನೆಯಿಂದ ತುಂಬಿದೆ. ನಾನು ಈ ಸೋದರಿಯರ ಉತ್ಸಾಹವನ್ನು ಪ್ರಶಂಸಿಸುತ್ತೇನೆ. ನೀವೂ ಭಾರತದ ಏಕತೆಗಾಗಿ, ಭಾರತದ ಶ್ರೇಷ್ಠತೆಗಾಗಿ ಏನನ್ನಾದರೂ ಖಂಡಿತ ಮಾಡಬೇಕು ಎಂದು ಹೇಳಿದರು.

English summary
Prime minister of India Narendra Modi Mann ki baat radio program October 24, 2021. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X