ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ 28; ಮೋದಿ ಮನ್ ಕೀ ಬಾತ್ ಮುಖ್ಯಾಂಶಗಳು

|
Google Oneindia Kannada News

ನವದೆಹಲಿ, ನವೆಂಬರ್ 28; ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 83ನೇ ಕಾರ್ಯಕ್ರಮ ಇದಾಗಿತ್ತು.

ಸ್ನೇಹಿತರೇ ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂಚಾಯಿತಿ ಇಂದ ಪಾರ್ಲಿಮೆಂಟ್ ತನಕ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಮೋದಿ ಹೇಳಿದರು.

'ಅಜಾದಿ ಕಿ ಕಹಾನಿ ಬಚ್ಚೋಂ ಕಿ ಜುಬಾನಿ' ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಕ್ಕಳು ಸ್ವಾತಂತ್ರ್ಯ ಸಂಗ್ರಾಮದ ವಿವಿಧ ಕಥೆಗಳನ್ನು ಹೇಳುತ್ತಿದ್ದಾರೆ. ಇದರಲ್ಲಿ ಗಮನಿಸಬೇಕಾ ಅಂಶವೆಂದರೆ ಭಾರತ ಮಾತ್ರವಲ್ಲ ನೇಪಾಳ, ತಾಂಜೇನಿಯಾ, ನ್ಯುಜಿಲೆಂಡ್, ಫಿಜಿಯಲ್ಲಿನ ಮಕ್ಕಳು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೋದಿ ತಿಳಿಸಿದರು.

Narendra Modi Mann Ki Baat November 28 Highlights In Kannada

ಎರಡು ದಿನದಲ್ಲಿ ಡಿಸೆಂಬರ್ ತಿಂಗಳು ಆರಂಭವಾಗುತ್ತಿದೆ. ಹೊಸ ವರ್ಷಕ್ಕೆ ನಾವು ಹೊಸ ಚಿಂತನೆಯನ್ನು ಹಣೆಯಲು ಆರಂಭಿಸುತ್ತೇವೆ. ಡಿಸೆಂಬರ್‌ನಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ನಡೆಯುತ್ತದೆ. ನಾನು ಸೈನಿಕರಿಗೆ ಗೌರವ ಸೂಚಿಸುತ್ತೇನೆ, ಅವರನ್ನು ಹೆತ್ತ ತಾಯಂದರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ಮನ್ ಕೀ ಬಾತ್‌ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿ ಎಂದು ದೇಶದ ವಿವಿಧ ಕಡೆಗಳಿಂದ ಸಲಹೆಗಳು ಬಂದಿವೆ. ಹಲವಾರು ಯುಕವಕರು ಸ್ಟಾರ್ಟ್ ಅಪ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ರಾಷ್ಟ್ರಗೀತೆಗಳನ್ನು ಬರೆಯುವುದು, ರಂಗೋಲಿ ಬರೆಯುವುದು, ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು.

ನಾವು ಪ್ರಕೃತಿಯನ್ನು ಸಂರಕ್ಷಿಸಿದರೆ ಅದು ನಮಗೆ ಸಂರಕ್ಷಣೆ ಮತ್ತು ಸುರಕ್ಷತೆಯನ್ನು ಒದಗಿಸುತ್ತದೆ. ತಮಿಳುನಾಡಿನ ತೂತುಕುಡಿಯಲ್ಲಿ ಕೆಲವು ದ್ವೀಪಗಳು ಮುಳುಗುವ ಆತಂಕದಲ್ಲಿದ್ದವು. ಇಲ್ಲಿನ ಸ್ಥಳೀಯರು ಇದಕ್ಕೆ ಪರಿಹಾರ ಕಂಡು ಕೊಂಡರು. ದ್ವೀಪಗಳಲ್ಲಿ ತಾಳೆ ಗಿಡಗಳನ್ನು ಬೆಳೆದಿದ್ದಾರೆ. ಇದು ಚಂಡಮಾರುತದ ಸಂದರ್ಭದಲ್ಲಿ ಸುರಕ್ಷತೆಯನ್ನು ನೀಡುತ್ತದೆ.

ನಮ್ಮ ರಾಜ್ಯದ ಅನೇಕ ರಾಜ್ಯದಲ್ಲಿ ಜನರು ಪ್ರಾಕೃತಿಕ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ. ಈ ಮೂಲಕ ಪ್ರಕೃತಿಯ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ. ನಾವು ಇಂತಹ ಮಾಹಿತಿಯನ್ನು ತಿಳಿಯೋಣ, ಪ್ರಕೃತಿ ಸಂರಕ್ಷಣೆ ನಮ್ಮ ಕೊಡುಗೆಯನ್ನು ಸಹ ನೀಡೋಣ.

ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜೇಶ್ ಕುಮಾರ್ ಪ್ರಜಾಪತಿ ಹೃದ್ರೋಗ ಸಮಸ್ಯೆಗೆ ಚಿಕಿತ್ಸೆ ಪಡೆದರು. ಈ ಕುರಿತು ಮನ್ ಕೀ ಬಾತ್‌ನಲ್ಲಿ ಅವರು ಮಾಹಿತಿಯನ್ನು ಹಂಚಿಕೊಂಡರು. ಜನರಿಗೆ ಆಯುಷ್ಮಾನ್ ಕಾರ್ಡ್‌ ಯೋಜನೆಯ ಉಪಯೋಗ, ಕಾರ್ಡ್ ಹೇಗೆ ಉಪಯೋಗಕ್ಕೆ ಬರುತ್ತದೆ ಎಂದು ಮಾಹಿತಿ ತಿಳಿಸಿ ಎಂದು ಮೋದಿ ಕರೆ ನೀಡಿದರು.

English summary
Prime minister of India Narendra Modi Mann ki baat radio program November 28, 2021. Modi addressed the nation with 83rd edition of radio program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X