ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕೀ ಬಾತ್ ಮಾತು; ಕೋವಿಡ್ ಲಸಿಕೆ ಬಗ್ಗೆ ಮೋದಿ ವಿವರಣೆ

|
Google Oneindia Kannada News

ನವದೆಹಲಿ, ಜನವರಿ 31; "ಇಂದು ಜನವರಿ 31. ಕೆಲವೇ ದಿನಗಳ ಹಿಂದೆ ಹೊಸ ವರ್ಷ ಆರಂಭವಾದಂತೆ ಇತ್ತು. ಈಗ ಒಂದು ತಿಂಗಳು ಮುಗಿದೇ ಹೋಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತದ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ಭಾನುವಾರ ದೇಶವನ್ನು ಉದ್ದೇಶಿಸಿ ಮಾತನಾಡಿದರು. "ಜನವರಿಯಲ್ಲಿ ನಾವು ಸಂಕ್ರಾಂತಿ, ಪೊಂಗಲ್ ಸೇರಿದಂತೆ ಹಲವಾರು ಹಬ್ಬಗಳನ್ನು ಆಚರಣೆ ಮಾಡಿದ್ದೇವೆ" ಎಂದು ಮೋದಿ ತಿಳಿಸಿದರು.

ನರೇಂದ್ರ ಮೋದಿ ಮನ್ ಕೀ ಬಾತ್; ಮೋದಿ ಭಾಷಣದ ಮುಖ್ಯಾಂಶಗಳುನರೇಂದ್ರ ಮೋದಿ ಮನ್ ಕೀ ಬಾತ್; ಮೋದಿ ಭಾಷಣದ ಮುಖ್ಯಾಂಶಗಳು

2021ನೇ ವರ್ಷದ ಮನ್ ಕೀ ಬಾತ್ ಸರಣಿಯ ಮೊದಲ ಕಾರ್ಯಕ್ರಮ ಭಾನುವಾರ ಪ್ರಸಾರವಾಯಿತು. "ಮನ್ ಕೀ ಬಾತ್ ಮೂಲಕ ಮಾತನಾಡಿದಾಗ ನನಗೆ ನಿಮ್ಮ ಕುಟುಂಬದ ಜೊತೆಯೇ ಮಾತನಾಡುತ್ತಿದ್ದೇನೆ" ಎಂದು ಅನ್ನಿಸುತ್ತದೆ.

ಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ಮನ್ ಕೀ ಬಾತ್‌ನಲ್ಲಿ ಹೇಳಿದ ಮೋದಿಮಕ್ಕಳಿಗೆ ಕಥೆ ಹೇಳುವ ಮಹತ್ವವನ್ನು ಮನ್ ಕೀ ಬಾತ್‌ನಲ್ಲಿ ಹೇಳಿದ ಮೋದಿ

"ಈ ವರ್ಷದ ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ. ನಿಜವಾದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡುವ ಕೆಲಸ ಕೆಲವು ವರ್ಷಗಳಿಂದ ಆರಂಭವಾಗಿದೆ. ಇಂತಹ ಸಾಧಕರ ಬಗ್ಗೆ ನೀವು ತಿಳಿದುಕೊಳ್ಳಬೇಕು. ಅದನ್ನು ಬೇರೆಯವರಿಗೂ ತಿಳಿಸಬೇಕು" ಎಂದು ನರೇಂದ್ರ ಮೋದಿ ಹೇಳಿದರು.

ಲಸಿಕೆ ಹಾಕಿಸಿಕೊಂಡ ನಂತರ ಸೋಂಕು; ಸಚಿವ ಸುಧಾಕರ್ ಸ್ಪಷ್ಟನೆಲಸಿಕೆ ಹಾಕಿಸಿಕೊಂಡ ನಂತರ ಸೋಂಕು; ಸಚಿವ ಸುಧಾಕರ್ ಸ್ಪಷ್ಟನೆ

ಮೋದಿ ಮನ್ ಕೀ ಬಾತ್

ಮೋದಿ ಮನ್ ಕೀ ಬಾತ್

"ನಮ್ಮ ಕ್ರಿಕೆಟ್ ತಂಡದ ಸ್ಫೂರ್ತಿ ನೋಡಿ. ಆಸ್ಟ್ರೇಲಿಯಾದಲ್ಲಿ ಅವರು ಎಂತಹ ಸಾಧನೆ ಮಾಡಿದ್ದಾರೆ. ಈ ತಿಂಗಳ ಜನವರಿ 26ರಂದು ದೆಹಲಿಯಲ್ಲಿ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ" ಎಂದರು.

'ಕೋವಿಡ್ ವಿರುದ್ಧದ ನಮ್ಮ ಹೋರಾಟ ಒಂದು ವರ್ಷ ಪೂರ್ಣಗೊಳಿಸಿದೆ. ವಿಶ್ವದಲ್ಲೇ ದೊಡ್ಡದಾದ ಕೋವಿಡ್ ವ್ಯಾಕ್ಸಿನ್ ಅಭಿಯಾನವನ್ನು ನಾವು ಮಾಡುತ್ತಿದ್ದೇವೆ.

"ದೇಶಿಯ ನಿರ್ಮಿತ ಕೋವಿಡ್ ವ್ಯಾಕ್ಸಿನ್ ನಮ್ಮ ಆತ್ಮನಿರ್ಭರ ಭಾರತದ ಕನಸಾಗಾಗಿದೆ.

ಕೋವಿಡ್ ವ್ಯಾಕ್ಸಿನ್

ಕೋವಿಡ್ ವ್ಯಾಕ್ಸಿನ್

'ಕೋವಿಡ್ ವ್ಯಾಕ್ಸಿನ್ ಅಭಿಯಾನವನ್ನು ನಾವು ಮಾಡುತ್ತಿದ್ದೇವೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಅಭಿಯಾನವಾಗಿದೆ. ಕೋವಿಡ್ ವಾರಿಯರ್‌ಗಳಿಗೆ ನಾವು ವ್ಯಾಕ್ಸಿನ್ ನೀಡುತ್ತಿದ್ದೇವೆ" ಎಂದು ಮೋದಿ ತಿಳಿಸಿದರು.

"ದೇಶಿಯ ನಿರ್ಮಿತ ಕೋವಿಡ್ ವ್ಯಾಕ್ಸಿನ್ ನಮ್ಮ ಆತ್ಮನಿರ್ಭರ ಭಾರತದ ಕನಸಾಗಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಬೇರೆ ದೇಶಗಳಿಗೆ ಸಹಕಾರ ನೀಡುತ್ತಿರುವುದು ನಮ್ಮ ಹೆಮ್ಮೆಯಾಗಿದೆ. ಇದಕ್ಕೆ ಬೇರೆ ದೇಶಗಳು ಸಹ ಧನ್ಯವಾದಗಳನ್ನು ಸಲ್ಲಿಸಿದ್ದಾರೆ" ಎಂದರು.

* ನಮೋ ಅಪ್ಲಿಕೇಶನ್, ಪತ್ರಗಳ ಮೂಲಕ ಪ್ರತಿ ತಿಂಗಳು ನನಗೆ ಹಲವಾರು ಮಾಹಿತಿಗಳು ಬರುತ್ತವೆ. ಈ ಬಾರಿ ಕೋವಿಡ್ ಲಸಿಕೆ ಕಂಡು ಹಿಡಿದ ಆತ್ಮನಿರ್ಭರ ಭಾರತದ ಸಾಧನೆಗೆ ಹಲವಾರು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಇದು ದೇಶದ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ.

ಭಾರತ 75 ಎಂಬ ಅಭಿಯಾನ

ಭಾರತ 75 ಎಂಬ ಅಭಿಯಾನ

* ನಮ್ಮ ದೇಶದ ಯುವ ಜನರಿಗೆ ಕರೆ ನೀಡುತ್ತೇನೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡವರ ಬಗ್ಗೆ ಲೇಖನಗಳನ್ನು ಬರೆಯಿರಿ. ಇದು ಒಂದು ಉತ್ತಮವಾದ ಮಾಹಿತಿಯಾಗತ್ತದೆ.

* ಯುವ ಬರಹಗಾರರಿಗಾಗಿ 'ಭಾರತ 75' ಎಂಬ ಅಭಿಯಾನ ನಡೆಸಲಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡವರ ಬಗ್ಗೆ ಬರೆಯಿರಿ. ಇದಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಕುರಿತ ಮಾಹಿತಿ ಶಿಕ್ಷಣ ಇಲಾಖೆ ವೆಬ್ ಸೈಟ್‌ನಲ್ಲಿ ಶೀಘ್ರವೇ ನಮಗೆ ಸಿಗಲಿದೆ.

* ಮನ್ ಕೀ ಬಾತ್‌ನಲ್ಲಿ ನನಗೆ ಮಾತನಾಡಲು ಹಲವಾರು ವಿಚಾರಗಳು ಸಿಗುತ್ತವೆ. ಹೈದರಾಬಾದ್‌ನ ಒಂದು ತರಕಾರಿ ಮಾರುಕಟ್ಟೆಯಲ್ಲಿ ಕೊಳೆತ ತರಕಾರಿಗಳಿಂದ ವಿದ್ಯುತ್ ತಯಾರಿಕೆ ಮಾಡಲಾಗುತ್ತದೆ. ಕಸವನ್ನು ರಸ ಮಾಡುವುದು ಎಂದರೇ ಇದೆ ಆಗಿದೆ. ಪ್ರತಿನಿತ್ಯ ಬಯೋಗ್ಯಾಸ್ ಸಹ ತಯಾರಾಗುತ್ತಿದೆ.

* ಹರ್ಯಾಣದಲ್ಲಿ ಪರಿಸರ ರಕ್ಷಣೆಗೆ ಒಂದು ಉಪಾಯ ಮಾಡಲಾಗಿದೆ. ಗ್ರಾಮಗಳಿಂದ ಬರುವ ಕೊಳಚೆ ನೀರನ್ನು ಒಂದು ಕಡೆ ಸಂಗ್ರಹ ಮಾಡಲಾಗುತ್ತಿದೆ. ಅದನ್ನು ಶುದ್ಧೀಕರಿಸಿ ಕೃಷಿಗೆ ಉಪಯೋಗ ಮಾಡಲಾಗುತ್ತಿದೆ. ಇದು ನೀರನ್ನು ಉಳಿಸುವ ಒಂದು ಪ್ರಯತ್ನವಾಗಿದ್ದು, ಇತರ ತಾಲೂಕು, ಜಿಲ್ಲೆಗಳಿಗೆ ಮಾದರಿಯಾಗಿದೆ.

ಹೊಸ ಇತಿಹಾಸವನ್ನು ಬರೆದಿದ್ದಾರೆ

ಹೊಸ ಇತಿಹಾಸವನ್ನು ಬರೆದಿದ್ದಾರೆ

* ಕೇರಳದ ಕೊಟ್ಟಾಯಂನ ಅಂಗವಿಕಲ ರಾಜಪ್ಪನ್ ಅವರು ಪರಿಸರ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ದೋಣಿಯಲ್ಲಿ ನದಿಯಲ್ಲಿ ಸಾಗಿ ನದಿಗೆ ಎಸೆದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹ ಮಾಡುತ್ತಿದ್ದಾರೆ.

* ಭಾರತದ ಮಹಿಳಾ ಪೈಲೆಟ್‌ಗಳು ಹೊಸ ಇತಿಹಾಸವನ್ನು ಬರೆದಿದ್ದಾರೆ. 10 ಸಾವಿರ ಕಿ. ಮೀ. ವಿಮಾನವನ್ನು ತೆಗೆದುಕೊಂಡು ಹೋಗಿ 225 ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆ ತಂದಿದ್ದಾರೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿಯೂ ಮಹಿಳಾಮಣಿಗಳು ಪಾಲ್ಗೊಂಡಿದ್ದರು.

* ಝಾನ್ಸಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಸ್ಟ್ರಾಬೆರಿ ಮೇಳ ಆರಂಭವಾಗಲಿದೆ. ಝಾನ್ಸಿಯಲ್ಲಿ ಸ್ಟ್ರಾಬೆರಿ ಬೆಳೆಯಲಾಗುತ್ತದೆಯೇ? ಎಂದು ನಿಮಗೆ ಆಶ್ಚರ್ಯವಾಗುತ್ತದೆ. ಇಲ್ಲಿ ಈಗ ಟೆರಾಸ್ ಗಾರ್ಡನ್‌ ನಲ್ಲಿಯೂ ಸ್ಟ್ರಾಬೆರಿ ಬೆಳೆಯಲಾಗುತ್ತಿದೆ. ಯುವಕರು ಸಹ ಈ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ.

* ಕೃಷಿಯನ್ನು ಆಧುನೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ. ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಪ್ರಯತ್ನಗಳು ಇನ್ನೂ ಮುಂದುವರೆಯಲಿವೆ ಎಂದು ನರೇಂದ್ರ ಮೋದಿ ಹೇಳಿದರು.

ರಸ್ತೆ ಸುರಕ್ಷತೆಗೆ ಆದ್ಯತೆ

ರಸ್ತೆ ಸುರಕ್ಷತೆಗೆ ಆದ್ಯತೆ

* ಪಶ್ಚಿಮ ಬಂಗಾಳದಲ್ಲಿ ಪ್ರವಾಸೋದ್ಯಮ ಇಲಾಖೆ ಕರಕುಶಲ ಮೇಳವನ್ನು ಆಯೋಜನೆ ಮಾಡುತ್ತಿದೆ. ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜನರು ಬಿಡಿಸಿದ ಚಿತ್ರಗಳನ್ನು ಸಹ ಇಲ್ಲಿ ಮಾರಾಟ ಮಾಡಲಾಗುತ್ತದೆ. ರಾಮಾಯಣದ ಬಗ್ಗೆ ಬರೆದ ಚಿತ್ರವೊಂದು ಇಲ್ಲಿ 2 ಲಕ್ಷ ರೂ. ಗಳಿಗೆ ಮಾರಾಟವಾಗಿದೆ.

* ಜಾರ್ಖಂಡ್‌ನಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಗ್ರಾಮದ ಗೋಡೆಗಳನ್ನು ಇಂಗ್ಲಿಶ್ ಮತ್ತು ಹಿಂದಿ ಅಕ್ಷರಗಳಿಂದ ತುಂಬಿಸಿದ್ದಾರೆ. ಇಂತಹ ಪ್ರಯತ್ನಗಳನ್ನು ಕಂಡಾಗ ಸಂತಸವಾಗುತ್ತದೆ.

* ಭಾರತದಿಂದ ಚಿಲೆ ತಲುಪಲು ಹೆಚ್ಚು ಸಮಯಬೇಕಾಗುತ್ತದೆ. ಅಲ್ಲಿ ಭಾರತೀಯ ಸಂಸ್ಕೃತಿಯನ್ನು ಪಾಲಿಸಲಾಗುತ್ತಿದೆ. ಚಿಲೆಯಲ್ಲಿ ಯೋಗ ತರಬೇತಿಯನ್ನು ನೀಡಲಾಗುತ್ತದೆ. ರಾಜಧಾನಿಯಲ್ಲಿಯೇ ಹಲವು ಯೋಗ ತರಬೇತಿ ಕೇಂದ್ರಗಳಿವೆ. ಅಂತರಾಷ್ಟ್ರೀಯ ಯೋಗ ದಿನವನ್ನು ಅಲ್ಲಿ ಆಚರಣೆ ಮಾಡಲಾಗುತ್ತದೆ. ನವೆಂಬರ್ 4ರಂದು ಅಲ್ಲಿ ರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲು ಸಂಸತ್‌ನಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.

* ಚಿಲೆಯ ಉಪಾಧ್ಯಕ್ಷರ ಹೆಸರು ರವೀಂದ್ರನಾಥ್ ಎಂದು ಆರಂಭವಾಗುತ್ತದೆ. ರವೀಂದ್ರನಾಥ್ ಠಾಗೋರ್ ಅವರನ್ನು ನಾವು ಇಂದು ನೆನಪು ಮಾಡಿಕೊಳ್ಳಬೇಕಿದೆ.

* ರಸ್ತೆ ಸುರಕ್ಷತೆ ಬಗ್ಗೆ ಮನ್ ಕೀ ಬಾತ್‌ನಲ್ಲಿ ನಾನು ಮಾತನಾಡಬೇಕು ಎಂದು ಆಗ್ರಹಿಸಲಾಗಿದೆ. ಸರ್ಕಾರದ ಜೊತೆ ರಸ್ತೆ ಸುರಕ್ಷತೆಗೆ ಜನರು ಕೈಜೋಡಿಸಬೇಕು. ಜನರ ಜೀವ ಹಾನಿಯನ್ನು ಸಹ ತಪ್ಪಿಸಬೇಕು. ರಸ್ತೆ ಸುರಕ್ಷತೆ ಬಗ್ಗೆ ನೀವು ಘೋಷವಾಕ್ಯಗಳನ್ನು ಬರೆದು ಕಳಿಸಬಹುದು. ರಸ್ತೆ ಸುರಕ್ಷತೆ ಸಪ್ತಾಹದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

* ಫಾಸ್ಟ್‌ ಟ್ಯಾಗ್ ಕ್ರಮದಿಂದಾಗಿ ಟೋಲ್ ಬೂತ್‌ಗಳಲ್ಲಿ ಕಾಯುವ ಸಮಯ ಕಡಿತವಾಗಿದೆ ಜೊತೆಗೆ ಇಂಧನವೂ ಸಹ ಉಳಿತಾಯವಾಗುತ್ತಿದೆ.

English summary
Prime minister of India Narendra Modi addressed the nation by his Mann ki baat radio program on January 31, 2021. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X