ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನ್ ಕೀ ಬಾತ್; ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ

|
Google Oneindia Kannada News

ನವದೆಹಲಿ, ಏಪ್ರಿಲ್ 25; "ಕೋವಿಡ್ ನಮ್ಮ ಧೈರ್ಯವನ್ನು ಪರೀಕ್ಷೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನಾನು ಮನ್ ಕೀ ಬಾತ್ ಮೂಲಕ ನಿಮ್ಮ ಜೊತೆ ಮಾತನಾಡುತ್ತಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಏಪ್ರಿಲ್ 25ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

75ನೇ ಮನ್ ಕೀ ಬಾತ್; ಕೇಳುಗರಿಗೆ ಧನ್ಯವಾದ ಅರ್ಪಿಸಿದ ಮೋದಿ 75ನೇ ಮನ್ ಕೀ ಬಾತ್; ಕೇಳುಗರಿಗೆ ಧನ್ಯವಾದ ಅರ್ಪಿಸಿದ ಮೋದಿ

"ಕೋವಿಡ್ 2ನೇ ಅಲೆ ತಡೆಯಲು ನಾನು ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಮಾತನಾಡುತ್ತಿದ್ದೇನೆ. ಲಸಿಕೆ ಉತ್ಪಾದನೆ, ವೈದ್ಯರ ಜೊತೆ ಮಾತನಾಡಿದ್ದೇನೆ" ಎಂದು ಹೇಳಿದರು.

ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ! ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ!

 Narendra Modi Mann Ki Baat April 25th Highlights in Kannada

ಮುಂಬೈನ ವೈದ್ಯರಾದ ಡಾ.ಶಶಾಂಕ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್‌ನಲ್ಲಿ ಮಾತನಾಡಿದರು. ಕೋವಿಡ್ 2ನೇ ಅಲೆ ಬಗ್ಗೆ ಮಾತನಾಡಿದರು. "ಮೊದಲಿಗಿಂತ ವೇಗದಲ್ಲಿ 2ನೇ ಅಲೆ ಹೆಚ್ಚುತ್ತಿದೆ. ಗುಣಮುಖ ಕೂಡಾ ಬೇಗ ಆಗುತ್ತಿದ್ದಾರೆ" ಎಂದರು.

ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು ಭಾರತ; 24 ಗಂಟೆಯಲ್ಲಿ 3,49,691 ಹೊಸ ಕೋವಿಡ್ ಪ್ರಕರಣ ದಾಖಲು

"ಕೋವಿಡ್ ಚಿಕಿತ್ಸೆಯಲ್ಲಿ ಮೂರು ವಿಧಗಳಿವೆ. ರೋಗಿಯ ಸೋಂಕಿನ ಲಕ್ಷಣದ ಮೇಲೆ ಇದನ್ನು ತೀರ್ಮಾನ ಮಾಡಲಾಗುತ್ತದೆ. ಸರ್ಕಾರ ನೀಡುವ ಸೂಚನೆಗಳನ್ನು ಜನರು ಪಾಲನೆ ಮಾಡಬೇಕು" ಎಂದು ಶಶಾಂಕ್ ಕರೆ ನೀಡಿದರು.

"ರೆಮ್ಡೆಸಿವಿರ್ ಲಸಿಕೆ ಹಿಂದೆ ಜನರು ಓಡುವುದನ್ನು ನಿಲ್ಲಿಸಬೇಕು. ಹಲವಾರು ರೀತಿಯ ಚಿಕಿತ್ಸೆಗಳನ್ನು ನಾವು ನೀಡುತ್ತಿದ್ದೇವೆ. ವಿಶ್ವದ ವಿವಿಧ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಉತ್ತಮ ಚಿಕಿತ್ಸೆ ಲಭ್ಯವಿದೆ. ಗುಣಮುಖ ಪ್ರಮಾಣವೂ ಹೆಚ್ಚಿದೆ. ಜನರು ಆತಂಕಗೊಳ್ಳುವ ಅಗತ್ಯವಿಲ್ಲ" ಎಂದು.

ಮೋದಿ ಭಾಷಣದ ಮುಖ್ಯಾಂಶಗಳು

* ಕೋವಿಡ್ ಕಠಿಣ ಪರಿಸ್ಥಿತಿಯಲ್ಲಿ ಹಲವಾರು ವೈದ್ಯರು ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಪ್ ಮೂಲಕ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಜನರಿಗೆ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ.

* ಶ್ರೀನಗರದ ಡಾ. ನವೀದ್ ಅವರು ಸಹ ಮೋದಿ ಅವರ ಜೊತೆ ಮನ್ ಕೀ ಬಾತ್ ಮೂಲಕ ಮಾತನಾಡಿದರು.

* ಮೊದಲ ಅಲೆಗೆ ಹೋಲಿಕೆ ಮಾಡಿದರೆ ಜನರಲ್ಲಿ ಕೋವಿಡ್ ಕುರಿತ ಆತಂಕ ಕಡಿಮೆ ಆಗಿದೆ ಎಂದು ಡಾ. ನವೀದ್ ಹೇಳಿದರು.

* ನಮ್ಮ ಬಳಿ ಕೋವಿಡ್ ವಿರುದ್ಧದ 2 ಲಸಿಕೆಗಳು ಲಭ್ಯವಿದೆ. ಲಸಿಕೆ ತೆಗೆದುಕೊಂಡರೂ ನಾವು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಕೈಗಳನ್ನು ಸ್ವಚ್ಛಗೊಳಿಸುವುದು ಮುಂದುವರೆಸಬೇಕು.

* ಕೋವಿಡ್ ಲಸಿಕೆ ಪಡೆದ ಮೇಲೆಯೂ ಜನರಿಗೆ ಕೋವಿಡ್ ಸೋಂಕು ತಗುಲಬಹುದು. ಆದರೆ, ಸೋಂಕಿನ ತೀವ್ರತೆ ಕಡಿಮೆ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಕುರಿತು ಹಲವು ಸುಳ್ಳು ವದಂತಿಗಳು ಹರಿದಾಡುತ್ತಿವೆ ಎಂದು ಡಾ. ನವೀದ್ ಹೇಳಿದರು.

* ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡಲಾಗುತ್ತದೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲಸಿಕೆ ನೀಡಲು ಇದನ್ನು ಉಪಯೋಗಿಸಿಕೊಳ್ಳಬಹುದು.

* ಉಚಿತವಾಗಿ ಕೋವಿಡ್ ಲಸಿಕೆ ನೀಡುವ ಸರ್ಕಾರದ ಕಾರ್ಯಕ್ರಮ ಮೇ 1ರ ನಂತರವೂ ಮುಂದುವರೆಯಲಿದೆ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

* ರಾಯ್ ಪುರದ ಭಾವನಾ ಎಂಬ ನರ್ಸ್‌ ಕೋವಿಡ್ ಕರ್ತವ್ಯ ಹೇಗಿರುತ್ತದೆ? ಎಂದು ಮನ್ ಕೀ ಬಾತ್‌ನಲ್ಲಿ ಅನುಭವ ಹಂಚಿಕೊಂಡರು.

* ಬೆಂಗಳೂರಿನ ಕೆ. ಸಿ. ಜನರಲ್ ಆಸ್ಪತ್ರೆ ಸೀನಿಯರ್ ನರ್ಸಿಂಗ್ ಸ್ಟಾಫ್ ಸುರೇಖಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದರು. ಕೋವಿಡ್ ಬಂದರೆ ಆತಂಕಗೊಳ್ಳಬೇಡಿ ಎಂದು ಸುರೇಖಾ ಕರೆ ನೀಡಿದರು.

* ಕೋವಿಡ್ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೇಟು ಹಾಕಬೇಡಿ, ಯಾವುದೇ ಲಸಿಕೆ ಕೆಲಸ ಮಾಡಲು ಕೆಲವು ದಿನ ಬೇಕಾಗುತ್ತದೆ ಎಂದು ಹೇಳಿದರು.

* ಆಂಬ್ಯುಲೆನ್ಸ್‌ ಚಾಲಕರಾದ ಪ್ರೇಮ್ ವರ್ಮಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮನ್ ಕೀ ಬಾತ್‌ನಲ್ಲಿ ಮಾತನಾಡಿದರು. ನಾವು ರೋಗಿಗಳ ಬಳಿ ಹೋಗುತ್ತೇವೆ. ಕಿಟ್ ಧರಿಸಿಕೊಂಡು ರೋಗಿಯ ಬಳಿ ಹೋಗುತ್ತೇವೆ. ನಾವು ಎರಡು ಡೋಸ್‌ ಲಸಿಕೆ ಪಡೆದುಕೊಂಡಿದ್ದೇವೆ. ನಮ್ಮ ತಾಯಿ ಕೆಲಸ ಬಿಡಲು ಹೇಳಿದರು. ಆದರೆ, ನಾನು ರೋಗಿಗಳ ಸಹಾಯಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದೆ.

* ಹಲವಾರು ಜನರು ಕೋವಿಡ್ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅದೇ ರೀತಿ ಹಲವಾರು ಜನರು ಗುಣಮುಖಗೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೋವಿಡ್‌ನಿಂದ ಗುಣಮುಖಗೊಂಡ ಕೃತಿ ಅವರ ಜೊತೆ ಮೋದಿ ಮಾತನಾಡಿದರು.

* ಇಂತಹ ಸಂದರ್ಭದಲ್ಲಿ ಸ್ವಯಂ ಸೇವಾ ಸಂಘಟನೆಗಳು ಗ್ರಾಮಗಳಲ್ಲಿ ಹಲವಾರು ಕಾರ್ಯಗಳನ್ನು ಮಾಡುತ್ತಿವೆ. ಕೋವಿಡ್ ಸೋಂಕು ಹೆಚ್ಚಾಗದಿರಲಿ ಎಂದು ಯುವಕರು ಸಹ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

* ಇಂದಿನ ಮನ್ ಕೀ ಬಾತ್ ಕಾರ್ಯಕ್ರಮವನ್ನು ನಾವು ಸಂಪೂರ್ಣ ಕೋವಿಡ್‌ ಬಗ್ಗೆ ಮಾತನಾಡಲು ಮೀಸಲಿಟ್ಟೆವು. ಇದು ಇಂದಿನ ಸಮಯದ ಅಗತ್ಯವೂ ಆಗಿತ್ತು ಎಂದು ಮೋದಿ ಹೇಳಿದರು.

* ನನಗೆ ವಿಶ್ವಾಸವಿದೆ, ನಮ್ಮೆಲ್ಲರ ಪ್ರಯತ್ನದಿಂದ ನಾವು ಶೀಘ್ರವೇ 2ನೇ ಅಲೆಯನ್ನು ನಿಯಂತ್ರಣಕ್ಕೆ ತರಲಿದ್ದೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

English summary
Prime minister of India Narendra Modi Mann ki baat radio program April 25th, 2021. Modi addressed the nation. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X