ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯೋತ್ಸವ ದಿನದಂದು ಮೋದಿಯಿಂದ 5 ದೊಡ್ಡ ಘೋಷಣೆ!

By Mahesh
|
Google Oneindia Kannada News

Recommended Video

ಸ್ವಾತಂತ್ರ್ಯ ದಿನದಂದು ನರೇಂದ್ರ ಮೋದಿಯವರಿಂದ 5 ದೊಡ್ಡ ಘೋಷಣೆಗಳು | Oneindia Kannada

ಬೆಂಗಳೂರು, ಜೂನ್ 14: ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಘೋಷಿಸದಂಥ ಅತಿದೊಡ್ಡ ಘೋಷಣೆಗಳನ್ನು ಸ್ವಾತಂತ್ರೋತ್ಸವ ದಿನದಂದು ನೀಡಲಿದ್ದಾರೆ. ಆದರೆ, ಇದು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿ ಐದು ಉಡುಗೊರೆಗಳಾಗಿವೆ.

ಕೇಂದ್ರ ಸರ್ಕಾರ ಆಗಸ್ಟ್ 15,2018 ರಂದು ಎರಡು ದೊಡ್ಡ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. 7ನೇ ವೇತನ ಆಯೋಗದ ಬಹು ನಿರೀಕ್ಷಿತ ಶಿಫಾರಸ್ಸುಗಳಿಗೆ ಮೋದಿ ತಂಡ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಹಾಗೆಯೇ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಏರಿಸುವ ಸಂಭವವಿದೆ. ಸುಮಾರು 1 ಕೋಟಿ ಸರ್ಕಾರಿ ನೌಕರರು ಇದ್ರ ಲಾಭ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಗಿಂತ ಹೆಚ್ಚಿನ ವೇತನ!ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಗಿಂತ ಹೆಚ್ಚಿನ ವೇತನ!

2014ರಲ್ಲಿ ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇಕಡಾ 14ರಷ್ಟು ಏರಿಕೆ ಮಾಡಲಾಗಿತ್ತು. ಆದರೆ, ಸರ್ಕಾರಿ ನೌಕರರು ಇದಕ್ಕೆ ತೃಪ್ತಿ ವ್ಯಕ್ತಪಡಿಸಿರಲಿಲ್ಲ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹೆಚ್ಚಳ ಮಾಡಬೇಕೆಂಬ ಬೇಡಿಕೆಯಿಟ್ಟಿದ್ದರು.

ಮೋದಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಮತ್ತೆ ಸಿಹಿ ಸುದ್ದಿಮೋದಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಮತ್ತೆ ಸಿಹಿ ಸುದ್ದಿ

ತುಟ್ಟಿಭತ್ಯೆ ಹೆಚ್ಚಳವು ಜನವರಿ 01, 2018ರಿಂದ ಜಾರಿಗೆ ಬರಲಿದ್ದು, 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 61 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ಲಾಭ ತರಲಿದೆ.

7ನೇ ವೇತನ ಆಯೋಗದ ಫಿಟ್ಮೆಂಟ್ ಫಾರ್ಮೂಲಾ

7ನೇ ವೇತನ ಆಯೋಗದ ಫಿಟ್ಮೆಂಟ್ ಫಾರ್ಮೂಲಾ

7ನೇ ವೇತನ ಆಯೋಗದ ಫಿಟ್ಮೆಂಟ್ ಫಾರ್ಮೂಲಾದ ಆನುಗುಣವಾಗಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಸರ್ಕಾರಿ ಬೊಕ್ಕಸಕ್ಕೆ 6,077ಕೋಟಿ ರು ಹೆಚ್ಚಿನ ಹೊರೆ ಬೀಳಲಿದೆ.

ತುಟ್ಟಿ ಭತ್ಯೆ(dearness allowance): ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ. ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.

ಗ್ರಾಮೀಣ ಅಂಚೆ ಸೇವೆ ಉದ್ಯೋಗಿಗಳ ಸಂಖ್ಯೆ ಹೆಚ್ಚಳ

ಗ್ರಾಮೀಣ ಅಂಚೆ ಸೇವೆ ಉದ್ಯೋಗಿಗಳ ಸಂಖ್ಯೆ ಹೆಚ್ಚಳ

50 ಲಕ್ಷ ಉದ್ಯೋಗಿಗಳ ಕನಿಷ್ಟ ವೇತನವನ್ನು ಸರ್ಕಾರ ಹೆಚ್ಚಳ ಮಾಡಿಲ್ಲ. ಈ ಸ್ವಾತಂತ್ರ್ಯೋತ್ಸವ ದಿನದಂದು ಗ್ರಾಮೀಣ ಅಂಚೆ ಸೇವೆಯಲ್ಲಿ ತೊಡಗಿರುವ ಉದ್ಯೋಗಿಗಳ ಸಂಬಳದಲ್ಲಿ ಶೇ 56ರಷ್ಟು ಏರಿಕೆ ಕಾಣಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಜನವರಿ 01, 2016ರಿಂದ ಪೂರ್ವನ್ವಯವಾಗುವಂತೆ ಹಿಂಬಾಕಿ ಮೊತ್ತ ಕೂಡಾ ಪಾರ್ಟ್ ಟೈಮ್ ಸಿಬ್ಬಂದಿಗಳಿಗೆ ಸಿಗಲಿದೆ.

ಡೆಪ್ಯುಟೇಷನ್ : ಭತ್ಯೆಯಲ್ಲಿ ಡಬ್ಬಲ್

ಡೆಪ್ಯುಟೇಷನ್ : ಭತ್ಯೆಯಲ್ಲಿ ಡಬ್ಬಲ್

2016ರಲ್ಲಿ ಡೆಪ್ಯುಟೇಷನ್ ಮೇಲೆ ಹೋಗುವ ಸರ್ಕಾರಿ ಉದ್ಯೋಗಿಗಳಿಗೆ 2, 000 ರು ನಿಂದ 4,500 ರು ತನಕ ಭತ್ಯೆ ಏರಿಕೆ ಮಾಡಲಾಗಿತ್ತು. ಒಂದೇ ಪ್ರದೇಶದಲ್ಲಿ ನೇಮಕಗೊಂಡವರಿಗೆ ಶೇ 5ರಷ್ಟು ಭತ್ಯೆ ಒಟ್ಟಾರೆ ಸಂಬಳದಲ್ಲಿ ಸಿಗುತ್ತಿತ್ತು. ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ ಹಾಗೂ ಪಿಂಚಣಿ ಇಲಾಖೆ ನೀಡಿರುವ ಮಾಹಿತಿಯಂತೆ ಭತ್ಯೆ ಮೊತ್ತ ಪ್ರತಿ ತಿಂಗಳಿಗೆ 9,000 ರು ಗೇರಲಿದೆ.

ಕನಿಷ್ಟ ವೇತನ ಏರಿಕೆ

ಕನಿಷ್ಟ ವೇತನ ಏರಿಕೆ

ಜೂನ್ 2016ರಲ್ಲಿ ಸರ್ಕಾರವು ಕೇಂದ್ರ ಸರ್ಕಾರಿ ನೌಕರರ ಕನಿಷ್ಟ ವೇತನವನ್ನು 18,000 ರುಗೇರಿಸಲಾಗಿತ್ತು. ಅರುಣ್ ಜೇಟ್ಲಿ ಅವರು ನೀಡಿದ ಭರವಸೆಯಂತ್ ಜನವರಿ 2016ರಿಂದ ಹಿಂಬಾಕಿ ಮೊತ್ತ ಕೂಡಾ ಲಭ್ಯವಾಗಲಿದೆ. ಕನಿಷ್ಟ ವೇತನವನ್ನು 18,000 ರು ನಿಂದ 21,000 ರು ಗಳಿಗೆ ಏರಿಸುವಂತೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಇನ್ನೂ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿಲ್ಲ

8 ಲಕ್ಷ ಶಿಕ್ಷಕರಿಗೆ ಸಂಬಳ ಏರಿಕೆ

8 ಲಕ್ಷ ಶಿಕ್ಷಕರಿಗೆ ಸಂಬಳ ಏರಿಕೆ

ಅಕ್ಟೋಬರ್ 2017ರಂದು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ, ಯೂನಿವರ್ಸಿಟಿ ಗ್ರಾಂಟ್ ಕಮಿಷನ್(ಯುಜಿಸಿ) ಹಾಗೂ ಯುಜಿಸಿ ನೆರವು ಪಡೆದ ವಿದ್ಯಾಸಂಸ್ಥೆಗಳಿಗೆ ಸೇರಿದ 8 ಲಕ್ಷ ಶಿಕ್ಷಣ ವರ್ಗಕ್ಕೆ 10,400 ಹಾಗೂ 49,800 ತನಕ ಸಿಗಲಿದೆ.

25 ಸಾವಿರ ಪಿಂಚಣಿದಾರರಿಗೆ ಲಾಭ

25 ಸಾವಿರ ಪಿಂಚಣಿದಾರರಿಗೆ ಲಾಭ

ಕೇಂದ್ರ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಿಂದ ನಿವೃತ್ತಿ ಹೊಂದಿದ ಬೋಧಕ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗದ ಅನ್ವಯ ಪಿಂಚಣಿ ಸಿಗಲಿದೆ. ಸುಮಾರು 25,000 ಪಿಂಚಣಿದಾರರಿಗೆ 6,000 ರು ನಿಂದ 18,000 ರುಗಳ ತನಕ ಪಿಂಚಣಿ ಸಿಗಲಿದೆ. ಇದು ಪರೋಕ್ಷವಾಗಿ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತಿ ಹೊಂದಿದ 23 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿಗೂ ಅನ್ವಯವಾಗಲಿದೆ.

English summary
Narendra Modi led BJP government at the centre would likely to make big announcement on Independence Day this year. Which would set the stage for upcoming Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X