ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1 ಲಕ್ಷ ಕೋಟಿ ರೂ.ಗಳ ಹಣಕಾಸು ಸೌಲಭ್ಯಕ್ಕೆ ಮೋದಿ ಚಾಲನೆ

|
Google Oneindia Kannada News

ನವದೆಹಲಿ, ಆ.9: ಕೃಷಿ ಮೂಲಭೂತ ಸೌಲಭ್ಯ ನಿಧಿಯಡಿ 1 ಲಕ್ಷ ಕೋಟಿ ರೂ.ಗಳ ಹಣಕಾಸು ಸೌಲಭ್ಯಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇದಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ 8.5 ಕೋಟಿ ರೈತರಿಗೆ 17 ಸಾವಿರ ಕೋಟಿ ರೂ.ಗಳ ಆರನೇ ಕಂತನ್ನು ಬಿಡುಗಡೆ
ಮಾಡಿದರು.

ದೇಶದೆಲ್ಲೆಡೆ ಇರುವ ಹಲವಾರು ರೈತರು ಹಾಗೂ ಸಹಕಾರಿ ಸಂಘದವರು ಆನ್ಲೈನ್ ಮೂಲಕ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೃಷಿ ಮೂಲಭೂತ ಸೌಲಭ್ಯ ನಿಧಿಯಡಿ ಹಣಕಾಸು ಸೌಲಭ್ಯ ಕಲ್ಪಿಸಲು ಕೇಂದ್ರ ಸಂಪುಟ ಒಪ್ಪಿಗೆ ನೀಡಿತ್ತು. ಇದರ ಮೂಲಕ ಕಟಾವಿನ ನಂತರ ಇಳುವರಿ ನಿರ್ವ ಹಣಾ ಮೂಲಭೂತ ಸೌಲಭ್ಯ ಹಾಗೂ ಸಮುದಾಯ ಕೃಷಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು.

Narendra Modi launches financing facility under Agriculture Infrastructure Fund

ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ ಆತ್ಮ ನಿರ್ಭರ ಭಾರತ; ರಾಜನಾಥ್ ಸಿಂಗ್ ಮಹತ್ವದ ಘೋಷಣೆ

ಇದರಿಂದಾಗಿ ರೈತರು ತಮ್ಮ ಇಳುವರಿಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಅವರು ತಮ್ಮ ಬೆಳೆಯನ್ನು ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಲು, ಪೋಲಾಗುವುದನ್ನು ತಡೆಯಲು ಹಾಗೂ ಸಂಸ್ಕರಣೆ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಹಲವಾರು ಸಾಲ ನೀಡುವ ಸಂಸ್ಥೆಗಳ ಮೂಲಕ ಈ ಯೋಜನೆಗಾಗಿ ಒಂದು ಲಕ್ಷ ಕೋಟಿ ರೂ.ಗಳ ಹಣಕಾಸು ಸೌಲಭ್ಯ ಕಲ್ಪಿಸಲಾಗುವುದು. ಸರ್ಕಾರಿ ಸ್ವಾಮ್ಯದ 12 ಬ್ಯಾಂಕುಗಳ ಪೈಕಿ 11 ಬ್ಯಾಂಕುಗಳು ಈ ಯೋಜನೆಗಾಗಿ ಕೃಷಿ ಇಲಾಖೆಯ ಜೊತೆ ಒಪ್ಪಂದಕ್ಕೆ ಸಹಿ ಹಾಕಿವೆ. ಯೋಜನೆಯ ಫಲಾನುಭವಿಗಳಿಗೆ ಶೇ.3ರ ಬಡ್ಡಿ ವಿನಾಯಿತಿ ಹಾಗೂ 2 ಕೋಟಿ ರೂ.ಗಳವರೆಗೆ ಸಾಲದ ಗ್ಯಾರಂಟಿ ನೀಡಲಾಗುವುದು. ಡಿಸೆಂಬರ್ 1, 2018ರಲ್ಲಿ ಪಿಎಂ ಕಿಸಾನ್ ಯೋಜನೆಗೆ ಚಾಲನೆ ನೀಡಲಾಗಿತ್ತು. ಆ ಮೂಲಕ ದೇಶದ 9.9 ಕೋಟಿ ರೈತರಿಗೆ ನೇರವಾಗಿ 75 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ನೆರವು ನೀಡಲಾಗುವುದು ಎಂದರು.

English summary
Prime Minister Narendra Modi launches financing facility under Agriculture Infrastructure Fund and releases benefits under PM-KISAN scheme via video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X