• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಂಗ್ರೆಸ್‌ ಎರಚಿದ ಕೆಸರಿನಲ್ಲಿ ಕಮಲ ಅರಳಿ ಹೊಳೆಯುತ್ತಿದೆ: ಮೋದಿ

|

ಭೋಪಾಲ್, ಸೆಪ್ಟೆಂಬರ್ 25: ಕಾಂಗ್ರೆಸ್‌, ಇಲ್ಲಿ ಮಹಾಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಹಾಗಾಗಿ ದೇಶದ ಹೊರಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಮುಖಂಡರೊಬ್ಬರು ಕಾಂಗ್ರೆಸ್‌ಗೆ ನೀಡಿದ ಬೆಂಬಲವನ್ನು ವ್ಯಂಗ್ಯ ಮಾಡಿದರು.

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜಯಂತಿ ಪ್ರಯುಕ್ತ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಆಯೋಜಿಸಿದ್ದ 'ಕಾರ್ಯಕರ್ತ ಕುಂಭ' ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

'ಬುಲೆಟ್ ಟ್ರೇನ್'ಗೆ ಹಣದ ನೆರವು ನಿಲ್ಲಿಸಿದ ಜಪಾನ್, ಅಯ್ಯೋ ಇದೇನು?

ಭಾರತದಲ್ಲಿ ಯಾರು ಪ್ರಧಾನಿ ಆಗಬೇಕು ಎಂದು ವಿದೇಶದಲ್ಲಿ ಕುಳಿತವರು ನಿರ್ಧಾರ ಮಾಡುತ್ತಿದ್ದಾರೆ. ಅಧಿಕಾರ ಕಳೆದುಕೊಂಡ ನಂತರ ಕಾಂಗ್ರೆಸ್ ತನ್ನ ಬುದ್ಧಿ ಸ್ಥಿಮಿತವನ್ನೂ ಕಳೆದುಕೊಂಡಿದೆ ಎಂದು ಮೋದಿ ಕಾಂಗ್ರೆಸ್‌ ಅನ್ನು ಟೀಕಿಸಿದರು.

ವೋಟ್‌ ಬ್ಯಾಂಕ್ ರಾಜಕಾರಣದ ಬಗ್ಗೆಯೂ ಬೆಂಕಿ ಉಗುಳಿದ ಮೋದಿ ಅವರು, 'ಭಾರತದಲ್ಲಿನ ವೋಟ್‌ ಬ್ಯಾಂಕ್‌ ರಾಜಕಾರಣದಿಂದಾಗಿ ದೇಶ ಹಾಳಾಗಿತ್ತು. ಒಂದೆರಡು ಸಮುದಾಯವನ್ನು ಮಾತ್ರ ಗುರಿಯಾಗಿಟ್ಟುಕೊಂಡು ಅಧಿಕಾರದ ಆಸೆಗಾಗಿ ಮಾತ್ರವೇ ಆಡಳಿತ ಮಾಡಿದ ಕಾರಣ ದೇಶದ ಸ್ಥಿತಿ ಹಾಳಾಗಿತ್ತು ಎಂದು ಅವರು ಟೀಕಿಸಿದರು.

ತ್ರಿವಳಿ ತಲಾಖ್‌ಗೆ ವಿರೋಧ

ತ್ರಿವಳಿ ತಲಾಖ್‌ಗೆ ವಿರೋಧ

'ಇಸ್ಲಾಂ ರಾಷ್ಟ್ರಗಳಲ್ಲೇ ತ್ರಿವಳಿ ತಲಾಖ್‌ಗೆ ವಿರೋಧವಿದೆ. ಆದರೆ ಮಹಿಳೆಯೊಬ್ಬರ ನೇತೃತ್ವದಲ್ಲಿದ್ದ ಪಕ್ಷ ಮುಸ್ಲಿಂ ಮಹಿಹಳೆಯರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಜೊತೆಗೆ ಈಗ ನಾವು ಇಡುತ್ತಿರುವ ಹೆಜ್ಜೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.

ಕೆಸರು ಎರಚಿದಷ್ಟೂ ಕಮಲ ಅರಳಿತು

ಕೆಸರು ಎರಚಿದಷ್ಟೂ ಕಮಲ ಅರಳಿತು

ಕಾಂಗ್ರೆಸ್‌ನವರು ನನ್ನ ಮೇಲೆ ಎಲ್ಲ ರೀತಿಯ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ. ನಿಘಂಟಿನಲ್ಲಿರುವ ಎಲ್ಲ ಕೆಟ್ಟ ಪದಗಳನ್ನೂ ಬಳಕೆ ಮಾಡಿದ್ದಾಗಿದೆ. ಅವರು ನಮ್ಮ ಮೇಲೆ ಎಷ್ಟು ಕೆಸರು ಎಸೆದರೋ ಅಷ್ಟು ಕಮಲ ಅರಳಿತು ಎಂದು ಅವರು ಹೇಳಿದರು.

ಇನ್ನು ಮೂರು ತಿಂಗಳಲ್ಲಿ ಏನಾಗುತ್ತದೆ? ರಾಹುಲ್ ಮಾತಿನ ಅರ್ಥವೇನು?

ಯುಪಿಎಗೆ ಬಿಜೆಪಿ ರಾಜ್ಯಗಳ ಮೇಲೆ ದ್ವೇಷವಿತ್ತು

ಯುಪಿಎಗೆ ಬಿಜೆಪಿ ರಾಜ್ಯಗಳ ಮೇಲೆ ದ್ವೇಷವಿತ್ತು

ಯುಪಿಎ ಸರ್ಕಾರ ಆಡಳಿತದಲ್ಲಿದ್ದಾಗ, ಬಿಜೆಪಿ ಆಡಳಿತದ ರಾಜ್ಯಗಳ ಬಗ್ಗೆ ದ್ವೇಷ ಇತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಕಾಂಗ್ರೆಸ್‌ ನವರು ನನಗೆ ನಮಸ್ಕಾರ ಹೇಳಿ ಆ ಚಿತ್ರ ಪೇಪರ್‌ನಲ್ಲಿ ಪ್ರಕಟವಾದರೂ ಸಾಕು ನನಗೆ ನಮಸ್ಕಾರ ಮಾಡಿದವರ ರಾಜಕೀಯ ಜೀವನವನ್ನೇ ಮುಗಿಸಿಹಾಕುತ್ತಿತ್ತು ಕಾಂಗ್ರೆಸ್ ಎಂದು ಅವರು ಆರೋಪಿಸಿದರು.

100 ವರ್ಷ ಹಳೆಯ ಪಕ್ಷ ಸಣ್ಣ ಪಕ್ಷಗಳ ಹಿಡಿತದಲ್ಲಿ

100 ವರ್ಷ ಹಳೆಯ ಪಕ್ಷ ಸಣ್ಣ ಪಕ್ಷಗಳ ಹಿಡಿತದಲ್ಲಿ

100 ವರ್ಷ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ ಈಗ ಅತಿ ಸಣ್ಣ ಪಕ್ಷಗಳ ಮಾತಿಗೆ ತಕ್ಕಂತೆ ಕುಣಿಯಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಕಳೆದ ನಾಲ್ಕು ವರ್ಷದಲ್ಲಿ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.

'ಆಯುಷ್ಮಾನ್ ಭಾರತ' ನೀಡಿದ್ದಕ್ಕೆ ನರೇಂದ್ರ ಮೋದಿಗೆ ನೊಬೆಲ್ ಶಾಂತಿ ಪುರಸ್ಕಾರ?

ವಿಶ್ವದ ದೊಡ್ಡ ಪಕ್ಷದ ಸದಸ್ಯರಾಗಿರುವುದು ಪುಣ್ಯ

ವಿಶ್ವದ ದೊಡ್ಡ ಪಕ್ಷದ ಸದಸ್ಯರಾಗಿರುವುದು ಪುಣ್ಯ

ಹಲವು ಜನ್ಮಗಳ ಪುಣ್ಯಫಲದಿಂದಾಗಿ ವಿಶ್ವದ ಅತಿದೊಡ್ಡ ಪಕ್ಷವಾದ ಬಿಜೆಪಿಯ ಕಾರ್ಯಕರ್ತರಾಗಿ ನಾವೆಲ್ಲರೂ ಗುರುತಿಸಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪಶ್ಚಿಮ ಬಂಗಾಳ, ಕೇರಳ, ಜಮ್ಮು ಕಾಶ್ಮೀರದಲ್ಲಿ ಭಾರತದ ಸೇವೆಗಾಗಿ ಹಾಗೂ ಬಿಜೆಪಿಯ ವಿಚಾರಗಳಿಗಾಗಿ ನಮ್ಮ ಕಾರ್ಯಕರ್ತರು ಜೀವ ತ್ಯಾಗ ಮಾಡಿದ್ದಾರೆ. ಅವರ ತ್ಯಾಗವನ್ನು ನಾವು ವ್ಯರ್ಥ ಮಾಡಬಾರದು ಎಂದು ಅವರು ಹೇಳಿದರು.

ದೇಶ ಸೇವೆ, ಬಿಜೆಪಿ ಸೇವೆ ಒಂದೇ!

ದೇಶ ಸೇವೆ, ಬಿಜೆಪಿ ಸೇವೆ ಒಂದೇ!

ದೇಶ ಸೇವೆ ಹಾಗೂ ಬಿಜೆಪಿ ಸೇವೆ ಒಂದೇ ಎಂಬರ್ಥದ ಮಾತುಗಳನ್ನಾಡಿದ ಮೋದಿ ಅವರು, ಎಷ್ಟು ಜನ್ಮದಲ್ಲಿ ಎಷ್ಟು ಪುಣ್ಯ ಮಾಡಿದ್ದೆವೋ ಗೊತ್ತಿಲ್ಲ, ಹಾಗಾಗಿ ನಾವು ಈ ಬಿಜೆಪಿಯ ಕಾರ್ಯಕರ್ತಾಗುವ ಪುಣ್ಯ ಒದಗಿದೆ. ಈ ಪುಣ್ಯ ದುರುದ್ದೇಶದಿಂದ ಬದುಕುವ ಜನರಿಗೆ ದೊರೆಯುವುದಿಲ್ಲ ಎಂದು ಅವರು ಹೇಳಿದರು. ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಎಂಬುದು ಗೌರವದ ವಿಷಯ, ವಿಶ್ವದ ಅತಿ ದೊಡ್ಡ ಪಕ್ಷದ ಸದಸ್ಯರು ಎಂಬುದು ಅದಕ್ಕಿಂತಲೂ ದೊಡ್ಡ ಗೌರವ ಎಂದ ಅವರು. ಪಂಡಿತ ದೀನ ದಯಾಳ್ ಅವರನ್ನು ಸಹ ನೆನಸಿಕೊಂಡರು.

English summary
Prime minister Narendra Modi lambasted on congress and vote bank politics. He talked in Pandit Deendayal Upadyay's birth anniversary. He said Congress thrown dirt on me but BJP shines in that dirt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X