ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಾನಲ್ಲ, ನಾವು': ಐಟಿ ಜನರ ಜೊತೆ ನರೇಂದ್ರ ಮೋದಿ ಸಂವಾದ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: 'ನಾನಲ್ಲ ನಾವು' (ಮೇ ನಹಿಂ ಹಮ್‌) ಪೋರ್ಟಲ್‌ ಮತ್ತು ಆಪ್‌ ಅನ್ನು ಇಂದು ದೆಹಲಿಯಲ್ಲಿ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಐಟಿ ಕ್ಷೇತ್ರದ ಯುವಜನರ ಜೊತೆ ಸಂವಾದ ನಡೆಸಿದರು.

ತಂತ್ರಜ್ಞಾನವು ಭಾರತವನ್ನು ಇನ್ನಷ್ಟು ಭವ್ಯ ವಾಗಿಸುತ್ತದೆ, ತಂತ್ರಜ್ಞಾನವು ಜನರ ಜೀವನವನ್ನು ಇನ್ನಷ್ಟು ಸುಲಭ ಮಾಡುತ್ತದೆ ಎಂದು ಮೋದಿ ಅವರು ಇದೇ ಸಮಯದಲ್ಲಿ ಹೇಳಿದರು.

ಬಿಜೆಪಿಗೆ ಕೇವಲ 1000 ರೂ. ದೇಣಿಗೆ ನೀಡಿದ ಮೋದಿ, ಶಾ! ಕಾರಣ ಏನು?ಬಿಜೆಪಿಗೆ ಕೇವಲ 1000 ರೂ. ದೇಣಿಗೆ ನೀಡಿದ ಮೋದಿ, ಶಾ! ಕಾರಣ ಏನು?

ಸರ್ಕಾರವು ಯೋಜನೆಗಳು, ಬಜೆಟ್‌ಗಳನ್ನು ಮಂಡಿಸಬಹುದು ಆದರೆ ಸಾರ್ವಜನಿಕ ಪಾಲ್ಗೊಳ್ಳುವಿಕೆ ಸಾಧ್ಯವಾಗದೇ ಹೋದರೆ ಅವೆಲ್ಲವೂ ವ್ಯರ್ಥವಾಗುತ್ತವೆ ಎಂದು ಮೋದಿ ಅಭಿಪ್ರಾಯಪಟ್ಟರು.

Narendra Modi interact with It people in New Delhi

ಯುವಕರು ತಮ್ಮ ಸೌಕರ್ಯ ವಲಯವನ್ನು ಬಿಟ್ಟು ಹೊರಗೆ ಬಂದು, ಸಾರ್ವಜನಿಕರ ಉದ್ದಾರಕ್ಕಾಗಿ ಶ್ರಮಪಡಬೇಕಾಗಿದೆ. ಆಗ ಮಾತ್ರವೇ ದೇಶದ ಮತ್ತು ಅದರ ಜನರ ಅಭಿವೃದ್ಧಿ ಸಾಧ್ಯ ಎಂದು ಮೋದಿ ಹೇಳಿದರು.

ಸಿಬಿಐ ಈಗ ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಷನ್: ಮಮತಾ ವ್ಯಂಗ್ಯಸಿಬಿಐ ಈಗ ಬಿಜೆಪಿ ಬ್ಯುರೋ ಆಫ್ ಇನ್ವೆಸ್ಟಿಗೇಷನ್: ಮಮತಾ ವ್ಯಂಗ್ಯ

ಸ್ವಯಂ ಸೇವಕರ ಪಾಲ್ಗೊಳ್ಳುವಿಕೆಯಿಂದ ಕೃಷಿ ಕ್ಷೇತ್ರ, ಸ್ವಚ್ಛತಾ ಕ್ಷೇತ್ರ, ಮೂಲಭೂತ ಅಭಿವೃದ್ಧಿ, ವೈದ್ಯಕೀಯ ಕ್ಷೇತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಬೃಹತ್‌ ಆದುದ್ದನ್ನು ಸಾಧಿಸಲು ಸಾಧ್ಯ ಎಂದು ಮೋದಿ ಯುವಕರನ್ನು ಹುರಿದುಂಬಿಸಿದರು.

ಸುರಕ್ಷತೆ ಮತ್ತು ಕಿರಿಕಿರಿರಹಿತ ಪ್ರಯಾಣವೇ ರೈಲ್ವೆ ಇಲಾಖೆಯ ಗುರಿಸುರಕ್ಷತೆ ಮತ್ತು ಕಿರಿಕಿರಿರಹಿತ ಪ್ರಯಾಣವೇ ರೈಲ್ವೆ ಇಲಾಖೆಯ ಗುರಿ

ಮೋದಿ ಅವರು ಇದೇ ಸಮಯ ದೇಶದ ವಿವಿದೆಡೆಗಳ ಯುವ ಜನರೊಂದಿಗೆ ಸಂವಾದ ನಡೆಸಿದರು. ಮೋದಿ ಅವರೊಂದಿಗೆ ಇನ್ಫೋಸಿಸ್‌ ಫೌಂಡೇಶನ್‌ನ ಮುಖ್ಯಸ್ಥೆ ಕನ್ನಡತಿ ಸುಧಾ ಮೂರ್ತಿ ಅವರು ಸಹ ಸಂವಾದ ನಡೆಸಿದರು.

English summary
Prime minister Narendra Modi inaugurated 'me nahi hum' portal and app. He interact with IT people and share his thoughts about developing India with technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X