ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರಕಾರದ ಡಿಜಿಟಲ್ ವ್ಯವಹಾರದ ಜಾದೂ ಭಾರತವನ್ನು ಬದಲಿಸಿದ್ದು ಹೇಗೆ?

|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಒಂದು ಕಾಲ ಇತ್ತು. ಎಟಿಎಂ ಇಲ್ಲಿ ಎಲ್ಲಾದರೂ ಹತ್ತಿರ ಇದೆಯಾ ಅಂತ ಹುಡುಕಿಕೊಂಡು ಹೋಗಬೇಕಿತ್ತು. ಒಂದು ನಿರ್ದಿಷ್ಟ ಮೊತ್ತದ ಮೇಲೆ ಹಣ ಬೇಕಾದರೆ ಬ್ಯಾಂಕ್ ಗೇ ಹೋಗಬೇಕಾಗಿತ್ತು. ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಆರ್ಥಿಕ ವ್ಯವಹಾರಗಳ ಸ್ವರೂಪವೇ ಬದಲಾಗಿದೆ.

ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ಯೋಚನೆಯು ದೊಡ್ಡ ಮಟ್ಟದ ಬದಲಾವಣೆಯನ್ನೇ ತಂದು, ನಗದು ವ್ಯವಹಾರಗಳನ್ನು ಬಹಳ ಕಡಿಮೆ ಮಾಡಿ, ಆನ್ ಲೈನ್ ಅಥವಾ ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಈಗಿನ ಸರಕಾರದ ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಅಪನಗದೀಕರಣ ಘೋಷಣೆ ಹಾಗೂ ಅನುಷ್ಠಾನದಿಂದ ಭಾರತದಲ್ಲಿ ಡಿಜಿಟಲ್ ವ್ಯವಹಾರಗಳು ಎದ್ದುಕಾಣುವಷ್ಟು ಹೆಚ್ಚಾಗಿವೆ.

ಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶಡಿಜಿಟಲ್ ಡ್ರೈವಿಂಗ್ ಲೈಸೆನ್ಸ್, ಆರ್ಸಿಯನ್ನು ಸ್ವೀಕರಿಸಲು ಆದೇಶ

ಸರಕಾರ ಈ ಪ್ರಯತ್ನವನ್ನು ಬಾಯಿ ಮಾತಿನಿಂದ ಜಾರಿಗೆ ತರಲು ಪ್ರಯತ್ನ ಮಾಡಿದ್ದರೆ ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತಿತ್ತೋ ತಿಳಿಯದು. ಆದರೆ ಡಿಜಿಟಲ್ ವ್ಯವಹಾರ ಮಾಡಿದರೆ ಹಲವು ರಿಯಾಯಿತಿ ಹಾಗೂ ಪುಕ್ಕಟೆ ಕೊಡುಗೆ ನೀಡುವುದಾಗಿ ಘೋಷಣೆ ಮಾಡಲಾಯಿತು. ಇ ಪೇಮೆಂಟ್ ಗಳು ಆರ್ಥಿಕ ವ್ಯವಹಾರಗಳನ್ನು ಸಲೀಸು ಮಾಡುವುದೊಂದೇ ಅಲ್ಲ, ಹಣದ ಹರಿವಿನ ಬಗ್ಗೆ ಕಣ್ಣಿಡಲು ಸಹ ನೆರವಾಗುತ್ತದೆ.

Narendra Modi govts digital India push, how it has changed the way we transact?

ಇದರಿಂದ ತೆರಿಗೆ ಕದಿಯುವುದನ್ನು ತಪ್ಪಿಸಬಹುದು ಹಾಗೂ ಸರಕಾರಕ್ಕೆ ಬರುವ ಆದಾಯವೂ ಹೆಚ್ಚುತ್ತದೆ. ಡಿಜಿಟಲ್ ವ್ಯವಹಾರಗಳು ತೆರಿಗೆ ಕಟ್ಟುವವರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಎಂದು ವಿತ್ತ ಸಚಿವರು ಹೇಳಿದ್ದರು. ಆ ನಿರೀಕ್ಷೆ ಹುಸಿ ಆಗಲಿಲ್ಲ. ಡಿಜಿಟಲ್ ವ್ಯವಹಾರಗಳು ಹೆಚ್ಚಾದಂತೆ ತೆರಿಗೆ ಸಂಗ್ರಹ ಕೂಡ ಜಾಸ್ತಿ ಆಯಿತು.

ಇನ್ನು ಜನರಿಗೂ ಎಲ್ಲ ಕಡೆ ನಗದು ತೆಗೆದುಕೊಂಡು ಹೋಗಬೇಕು ಅನ್ನೋ ಅಗತ್ಯವಿಲ್ಲ. ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಾಡುವ ಪ್ರಮಾಣವೇ ಕಡಿಮೆ ಆಗಿದೆ. ಅಂದರೆ ಅಲ್ಲಿಗೆ ಉದ್ದೇಶ ಈಡೇರಿತು ಅಂತಲ್ಲವಾ? ಪ್ರಯಾಣ ಮಾಡುವಾಗ ಕೂಡ ಆನ್ ಲೈನ್- ಡಿಜಿಟಲ್ ವ್ಯವಹಾರಗಳು ಹೆಚ್ಚು ಸುರಕ್ಷಿತ.

ಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯಮೋದಿ ಕನಸು ನನಸು, ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಲಭ್ಯ

ಇತ್ತೀಚೆಗೆ ನಡೆದ ಸಮೀಕ್ಷೆ ಪ್ರಕಾರ, 2011ರಲ್ಲಿ ಇ ಪೇಮಂಟ್ ನಲ್ಲಿ 36ನೇ ಸ್ಥಾನದಲ್ಲಿದ್ದ ಭಾರತ 2018ರಲ್ಲಿ 28ನೇ ಸ್ಥಾನಕ್ಕೆ ಏರಿದೆ. ಇನ್ನು ಈ ವಿಚಾರವಾಗಿ ಡಿಜಿಟಲ್ ಮೂಲ ಸೌಕರ್ಯ ಒದಗಿಸುವ ಅಗತ್ಯವಿದೆ. ಡಿಜಿಟಲ್ ಪಾವತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರ ಸದೃಢ ಹೆಜ್ಜೆಗಳನ್ನು ಇರಿಸುತ್ತಿದೆ.

Narendra Modi govts digital India push, how it has changed the way we transact?

ನಾಗರಿಕರಿಕರಿಂದ ಸರಕಾರಕ್ಕೆ, ವಾಣಿಜ್ಯದಿಂದ ಸರಕಾರಕ್ಕೆ ಮತ್ತು ಸರಕಾರದಿಂದ ವಾಣಿಜ್ಯ ವ್ಯವಹಾರದಲ್ಲಿ ಇ ಪಾವತಿ ವಿಚಾರವಾಗಿ ಸರಕಾರವು ಬಹಳ ಶೀಘ್ರವಾಗಿ ಮುಂದಕ್ಕೆ ಹೆಜ್ಜೆಗಳನ್ನು ಇಡುತ್ತಿದೆ. ಈಗಿನ ಕೇಂದ್ರ ಸರಕಾರದ ಆಡಳಿತಾವಧಿಯಲ್ಲಿ ಮೊಬೈಲ್ ಕರೆಗಳ ದರದಲ್ಲೂ ಭಾರೀ ಪ್ರಮಾಣದ ಇಳಿಕೆ ಆಗಿದೆ. ವೈರ್ ಲೆಸ್ ಆಗಿ ಡೇಟಾ ಕಳುಹಿಸುವ ಹಾಗೂ ಸ್ವೀಕರಿಸುವ ದರವೂ ಕಡಿಮೆ ಆಗಿ, ಗ್ರಾಹಕರಿಗೆ ಬಹಳ ಲಾಭ ಆಗುತ್ತಿದೆ.

ಯಾವಾಗ ಇಂಟರ್ ನೆಟ್ ಡೇಟಾ ಪ್ಯಾಕ್ ಗಳ ದರ ಕಡಿಮೆ ಆಯಿತೋ ಡೇಟಾ ಟ್ರಾಫಿಕ್ ಕಳೆದ ವರ್ಷ ಒಂದು ತಿಂಗಳಿಗೆ 1.5 ಬಿಲಿಯನ್ ಗಿಗಾಬೈಟ್ಸ್ ಆಗಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ತಿಳಿಸಿದ್ದಾರೆ.

ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್ಜಿಎಸ್ಟಿ ಬಲವರ್ಧನೆ: ಡಿಜಿಟಲ್ ವ್ಯವಹಾರಕ್ಕೆ ಕ್ಯಾಶ್ ಬ್ಯಾಕ್ ಆಫರ್

ಜುಲೈ 1, 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದರು. ದೇಶದಲ್ಲಿ ತಾಂತ್ರಿಕತೆ ಉತ್ತೇಜನಕ್ಕಾಗಿ ಈ ಘೋಷಣೆ ಮಾಡಲಾಯಿತು. ಇದರ ಅಡಿಯಲ್ಲಿ 2019ರ ಹೊತ್ತಿಗೆ 2,50,000 ಹಳ್ಳಿಗಳಿಗೆ ಬ್ರ್ಯಾಡ್ ಬಾಂಡ್ ಸಂಪರ್ಕ ಕಲ್ಪಿಸುವ ಭರವಸೆ ನೀಡಲಾಯಿತು. 2018-19ರ ಸಾಲಿನ ಬಜೆಟ್ ನಲ್ಲಿ ಇದಕ್ಕಾಗಿ 3073 ಕೋಟಿ ಮೀಸಲಿಡಲಾಗಿದೆ. ಇದರಿಂದಾಗಿ ಅಪಾರ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಕೂಡ ಮಾಡುವ ಉದ್ದೇಶ ಇದೆ.

English summary
The Narendra Modi-led NDA government's Digital India push has brought about a significant change in the way financial transactions happen in the country. The cash transactions have come down and this has paved way for a range of new modes of payments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X