ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಒಬಾಮಾಕೇರ್' ಮಾದರಿ ಮೋದಿ ಆರೋಗ್ಯ ವಿಮೆ

By Mahesh
|
Google Oneindia Kannada News

ನವದೆಹಲಿ, ಜೂ. 30: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುಂದಾಗಿದೆ. ದೇಶದ ಸಮಸ್ತ ನಾಗರಿಕರಿಗೂ ಎಟುಕುವಂಥ ಆರೋಗ್ಯ ವಿಮೆ ಯೋಜನೆಯನ್ನು ತರಲು ಸರ್ಕಾರ ಗಂಭೀರ ಚಿಂತನೆ ನಡೆದಿದೆ ಎಂಬ ಸುಳಿವನ್ನು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನೀಡಿದ್ದಾರೆ. ಒಬಾಮಾ ಕೇರ್ ಹೋಲುವ ಸಮಗ್ರ ಹೆಲ್ತ್ ಇನ್ಸೂರೆನ್ಸ್ ಯೋಜನೆ ಭಾರತದಲ್ಲೂ ಸಾಧ್ಯವಾಗಿಸಲು ಯತ್ನಿಸಲಾಗುತ್ತಿದೆ.

ಒಂದು ವೇಳೆ, ಎನ್ಡಿಎ ಸರ್ಕಾರದ ಈ ಮಹತ್ವದ ಯೋಜನೆ ಕಾರ್ಯರೂಪಕ್ಕೆ ಬಂದರೆ ಇದು ವಿಶ್ವದಲ್ಲೇ ಅತೀ ದೊಡ್ಡ ಆರೋಗ್ಯ ವಿಮೆ ಯೋಜನೆಯಾಗಲಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು Affordable Care Act (ACA) ಅಡಿಯಲ್ಲಿ ತಂದಿರುವ 'ಒಬಾಮಾಕೇರ್' ಎಂಬ ಯೋಜನೆಗೆ ಇದಕ್ಕೆ ಸ್ಪೂರ್ತಿ ಎನ್ನಲಾಗಿದೆ.

ಅಮೆರಿಕದಲ್ಲಿರುವ ಅನಿವಾಸಿ ಭಾರತೀಯ ವೈದ್ಯಕೀಯ ವೃತ್ತಿಪರರು ಭಾರತದಲ್ಲಿ ಸಮಗ್ರ ಯೋಜನೆಗೆ ನೀಲನಕ್ಷೆ ತಯಾರಿಸಲು ಸಹಾಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನೆ ಮೂಲಕ ಸಂಪೂರ್ಣ ಪರಿವರ್ತನೆ ತರಬೇಕೆಂದು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಈ ನಿಟ್ಟಿನಲ್ಲಿ ಸಮಗ್ರ ಸಂಶೋಧನೆ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಸ್ವಸ್ಥ್ ಭಾರತ್ ಯೋಜನೆ ವಿಸ್ತರಣೆ

ಸ್ವಸ್ಥ್ ಭಾರತ್ ಯೋಜನೆ ವಿಸ್ತರಣೆ

ಇದೇ ವೇಳೆ, ಆರೋಗ್ಯ ಸಚಿವರು ಸ್ವಸ್ಥ್ ಇಂಡಿಯಾ ಎಂಬ ಹೊಸ ವೆಬ್ ಸೈಟ್ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅನಿವಾಸಿ ಭಾರತೀಯ ವೈದ್ಯರು ತಮ್ಮ ಮಾತೃ ದೇಶದಲ್ಲಿ ತಮಗೆ ಇಷ್ಟಬಂದ ವೈದ್ಯಕೀಯ ಸೇವೆಗಳನ್ನ ಮಾಡಲು ಮುಕ್ತ ಅವಕಾಶವಿದೆ. ಇದರಿಂದ, ಭಾರತದ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಜೀವಂತಿಕೆ ತರುವುದು ಸಚಿವರ ಉದ್ದೇಶವಾಗಿದೆ.

ಸ್ವಸ್ಥ್ ಭಾರತ್ ಯೋಜನೆ ಉದ್ದೇಶ

ಸ್ವಸ್ಥ್ ಭಾರತ್ ಯೋಜನೆ ಉದ್ದೇಶ

ಸ್ವಸ್ಥ ಭಾರತ್ ಯೋಜನೆಯ ಉದ್ದೇಶ 2018ರ ವೇಳೆಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಆರ್ಥಿಕವಾಗಿ ಹಿಂದುಳಿದ 1 ಕೋಟಿ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ.

rn

ಸ್ವಸ್ಥ್ ಭಾರತ್ ಯೋಜನೆ ವಿವರಿಸುವ ಚಿತ್ರಿಕೆ

ಸ್ವಸ್ಥ್ ಭಾರತ್ ಯೋಜನೆ ಉದ್ದೇಶ, ಕಾರ್ಯ ನಿರ್ವಹಣೆ ವಿವರಿಸುವ ಚಿತ್ರಿಕೆ

ಅನಿವಾಸಿ ಭಾರತೀಯ ವೈದ್ಯರ ನೆರವು

ಅನಿವಾಸಿ ಭಾರತೀಯ ವೈದ್ಯರ ನೆರವು

ಸ್ವಸ್ಥ್ ಲೈವ್ : ಕ್ಲೌಡ್ ಆಧಾರಿತ ತಂತ್ರಜ್ಞಾನ ಬಳಸಿ ಇಎಂಆರ್ , ಇನ್ವೆಂಟರ್ ಮ್ಯಾನೇಜ್ಮೆಂಟ್, ಆಪರೇಷನ್ ಪರ್ಸನಲ್, ಕ್ಯಾಶ್ ಮ್ಯಾನೇಜ್ಮೆಂಟ್ ಮುಂತಾದವನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಈ ಯೋಜನೆಗೆ ಕೈಜೋಡಿಸಿದ ಸಂಸ್ಥೆಗಳು
* ಐಕೆಪಿ ಸೆಂಟರ್ ಫಾರ್ ಟೆಕ್ನಾಲಜೀಸ್, ತಮಿಳುನಾಡು
* ಈಶಾ ಫೌಂಡೇಷನ್, ತಮಿಳುನಾಡು
* ಆಜೀವಿಕ ಬೂರಿಯಾ, ರಾಜಸ್ಥಾನ
* ಇಆರ್ ಸಿ ಐಕೇರ್ ಪ್ರೈ.ಲಿ, ಅಸ್ಸಾಂ

ಇವು ಮೋದಿ ಕನಸಿನ ಯೋಜನೆಯ ಭಾಗವಾಗಬಲ್ಲ ಸಂಸ್ಥೆಗಳಾಗಿವೆ. ಅದರೆ, ಒಬಾಮಾ ಕೇರ್ ಮಾದರಿಯಲ್ಲಿ ಅನಿವಾಸಿ ಭಾರತೀಯರು ನೀಡುವ ವರದಿ ಆಧಾರದ ಮೇಲೆ ಆರೋಗ್ಯ ಸಚಿವ ಹರ್ಷ ವರ್ಧನ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

English summary
India is preparing a universal health insurance scheme under Prime Minister Narendra Modi's personal supervision, which is set to be the world's largest of its kind, aimed at delivering quality health insurance services to all, an official release said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X